CrimeNEWSನಮ್ಮಜಿಲ್ಲೆಬೆಂಗಳೂರು

BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್​ಗಳಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ರಾಜಧಾನಿ ಜನರ ಜೀವನಾಡಿಯಾಗಿವೆ ಬಿಎಂಟಿಸಿ ಬಸ್‌ಗಳು.

ಆದರೆ, ಈ ಬಿಎಂಟಿಸಿ ಬಸ್‌ಗಳ ಚಾಲನಾ ಸಿಬ್ಬಂಗೆ ರಕ್ಷಣೆ ಇಲ್ಲದಂತಾಗಿದ್ದು, ಕೆಲ ಕಿಡಿಗೇಡಿಗಳು ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅಂತ್ಯೆಯೇ ಶನಿವಾರ ಸಂಜೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕ ಮತ್ತು ನಿರ್ವಾಹಕರ ಮೇಲೆ ಕಿಡಿಗೇಡಿಯೊಬ್ಬ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಅ.26 ರಂದು ಸಂಜೆ 5:25ಕ್ಕೆ ಯಲಹಂಕದಿಂದ ಶಿವಾಜಿನಗರ ಹೋಗುತ್ತಿದ್ದ ಬಸ್ ಚಾಲಕ ಟ್ಯಾನರಿ ರೋಡ್‌ನ ಕೆನರಾ ಬ್ಯಾಂಕ್ ಬಳಿ ಹಾರನ್ ಮಾಡಿ ಬೈಕ್‌ ಸವಾರನಿಗೆ ಸೈಡಿಗೆ ಹೋಗುವಂತೆ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಬಸ್ ಹತ್ತಿ ಚಾಲಕನಿಗೆ ಥಳಿಸಿದ್ದಾರೆ.

ಈ ವೇಳೆ ಜಗಳ ಬಿಡಿಸಲು ಹೋಗಿದ್ದಕ್ಕೆ ನಿರ್ವಾಹಕನಿಗೂ ಮನಸ್ಸೋ ಇಚ್ಛೆ ಹೊಡೆದಿದ್ದಾರೆ. ಅಲ್ಲದೆ ಕಿಡಿಗೇಡಿಗಳು ಫಿಲ್ಮಿ ಸ್ಟೈಲ್​ನಲ್ಲಿ ಮುಖಕ್ಕೆ ಗುದ್ದಿದ್ದಾರೆ. ಸದ್ಯ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಘಟನೆ ಜತೆಗೆ ಇತ್ತೀಚೆಗೆ ಬಿಎಂಟಿಸಿ ನಿಗಮದ ಚಾಲನಾ ಸಿಬ್ಬಂದಿಗಳ ಮೇಲೆ ಆಗಿರುವ ಹಲ್ಲೆಯನ್ನು ಗಮನಿಸಿದರೆ ಈ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರ ಜೀವಕ್ಕೆ ರಕ್ಷಣೆಯೇ ಇಲ್ಲ ಎನ್ನುವಂತಾಗಿರುವುದು ಮಾತ್ರ ತುಂಬ ನೋವು ತರಿಸುತ್ತಿದೆ.

ಈ ರೀತಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿವೆ. ಎರಡು ತಿಂಗಳ ಅಂತರದಲ್ಲೇ ನಾಲ್ಕು ಘಟನೆಗಳು ನಡೆದಿರುವುದು ಭಾರಿ ಆತಂಕವನ್ನು ಉಂಟುಮಾಡುತ್ತಿದೆ.

ಇದೇ ಅಕ್ಟೋಬರ್‌ನಲ್ಲೇ ಮೂರು ಘಟನೆಗಳು ನಡೆದಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್​ ಈ ಎರಡೂ ತಿಂಗಳಲ್ಲಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ಆಗಿರುವುದಕ್ಕೆ ಕೆಲ ರೂಟ್‌ಗಳಿಗೆ ಚಾಲನಾ ಸಿಬ್ಬಂದಿ ಹೋಗುವುದಕ್ಕೆ ಭಯಪಡುತ್ತಿದ್ದಾರೆ.

ಇನ್ನು ಸೆಪ್ಟೆಂಬರ್ 8 ರಂದು ಬಿಎಂಟಿಸಿ ವೋಲ್ವೋ ಬಸ್​ವೊಂದು ಅತ್ತಿಬೆಲೆಯಿಂದ ಮೆಜೆಸ್ಟಿಕ್ ಬರುತ್ತಿತ್ತು. ಬಸ್​​ ಹೊಸ ರೋಡ್​ ನಿಲ್ದಾಣಕ್ಕೆ ಬರುತ್ತಿದ್ದಂತೆ, ಓರ್ವ ನಿರ್ವಾಹಕನಿಗೆ ಸ್ಕ್ರೂ ಡ್ರೈವರ್​ನಿಂದ ಚುಚ್ಚಲು ಮುಂದಾಗಿದ್ದನು. ಇದಾದ ಬಳಿಕ, ಆಕ್ಟೋಬರ್ 1 ವೈಟ್​ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಎಂಬುವರಿಗೆ ಹರ್ಷ ಸಿನ್ಹಾ ಎಂಬ ಕಿಡಿಗೇಡಿ ಎರಡ್ಮೂರು ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ.

ಮತ್ತೆ 18 ದಿನಗಳ ಬಳಿಕ ಅಂದರೆ ಇದೇ ಅ.18ರ ಶುಕ್ರವಾರ ಮಧ್ಯಾಹ್ನ 2:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ನಿರ್ವಾಹಕ ಸಂಗಪ್ಪ ಬಸ್‌ನಲ್ಲೇ ಊಟ ಮಾಡುತ್ತಿರುವ ವೇಳೆ, ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಅವರ ತಲೆಗೆ ಹೊಡೆದು ಪರಾರಿಯಾಗಿದ್ದ. ನಂತರ ಆ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು, ನಿನ್ನೆ ಅಂದರೆ ಅ.26 ರಂದು ಸಂಜೆ ಚಾಲಕ ಮತ್ತು ನಿರ್ವಾಹಕರಿಗೆ ಥಳಿಸಿರುವುದು ಅದೂ ಕೂಡ ಕಿಡಿಗೇಡಿಗಳು ಫಿಲ್ಮಿ ಸ್ಟೈಲ್​ನಲ್ಲಿ ಮುಖಕ್ಕೆ ಗುದ್ದಿ ಪರಾರಿಯಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಸ್ಥೆಯ ಅಧಿಕಾರಗಳು ಕೂಡ ಹೆಚ್ಚು ಗಮನಹರಿಸಿ ಕಿಡಿಗೇಡಿಗಳ ಹೆಡೆಮುರಿ ಕಟ್ಟುವುದಕ್ಕೆ ಮುಂದಾಗಬೇಕಿದೆ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!