ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿ ಮೇಲೆ ನಿನ್ನೆ ಕಿಡಿಗೇಡಿಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಬಿಎಂಟಿಸಿ 30ನೇ ಘಟಕದಲ್ಲಿ ಚಾಲಕರು ಹಲ್ಲೆಕೋರರ ಬಂಧಿಸುವಂತೆ ಪಟ್ಟುಹಿಡಿದು ಕುಳಿತಿದ್ದಾರೆ.
ಅಲ್ಲದೆ ಇಂದು ಮಧ್ಯಾಹ್ನ ಕಾರ್ಯಾಚರಣೆಗೆ ಇಳಿಯಬೇಕಿದ್ದ ರಾತ್ರಿ ಪಾಳಿಯದ ( Night halt) 20 ಹೆಚ್ಚು 290 ರೂಟ್‌ನ ಬಸ್‌ಗಳನ್ನು ತೆಗೆಯದೆ ಚಾಲಕರು ಪ್ರತಿಭಟನೆ ಮಾಡುತ್ತಿದ್ದಾರೆ.
ಈ ರೂಟ್‌ನಮಗೆ ಬೇಡ ಬೇರೆ ರೂಟ್‌ಕೊಟ್ಟರೆ ಡ್ಯೂಟಿ ಮಾಡುತ್ತೇವೆ, ಇಲ್ಲದಿದ್ದರೆ ನಾವು ಕೆಲಸ ಬಿಟ್ಟು ಹೋಗುತ್ತೇವೆ ಎಂದು ಚಾಲಕರು ಪಟ್ಟು ಹಿಡಿದು ಕುಳಿತಿದ್ದಾರೆ. ಅಲ್ಲದೆ ಇದೇ ರೀತಿ ನಮ್ಮ ಮೇಲೆ ಹಲ್ಲೆಯಾಗುತ್ತಿದ್ದರೆ ನಮ್ಮ ಮತ್ತು ನಮ್ಮ ಕುಟುಂಬದವರನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ನಾವು ಮಾಡುತ್ತಿರುವುದು ಸರ್ವಾಜನಿಕರ ಸೇವೆ. ಆದರೆ ನಮ್ಮ ಮೇಲೆ ಏಕಾಏಕಿ ಯಾರೋ ಬಂದು ಹಲ್ಲೆ ಮಾಡಿ ಪರಾರಿಯಾಗುತ್ತಾರೆ ಎಂದರೆ ಅವರಿಗೆ ಕಾನೂನಿನ ಭಯವಿಲ್ಲ ಎಂದಾಗುತ್ತದೆ. ಅಲ್ಲದೆ ನಮ್ಮ ಸಂಸ್ಥೆಯಲ್ಲಿ ಹಲ್ಲೆ ಕೋರರ ಶಿಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದಕ್ಕೆ ಕಿಡಿಗೇಡಿಗಳು ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಅರ್ಥವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಚಾಲಕರು.
ಇನ್ನು ಅಪರಿಚಿತರಿಂದ ಹಲ್ಲೆಗೊಳಗಾಗಿ ನಮ್ಮ ಜೀವ ಹೋದರೆ ನಮ್ಮ ಕುಟುಂಬವನ್ನು ನೋಡಿಕೊಳ್ಳುವವರು ಯಾರು? ಒಂದು ವೇಳೆ ಹಲ್ಲೆಯಿಂದ ದೈಹಿಕವಾಕವಾಗಿ ನಾವು ಊನಗೊಂಡರೆ ನಮ್ಮನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಈ ಎಲ್ಲದಕ್ಕೂ ಸಮಂಜಸವಾದ ಉತ್ತರ ಕೊಟ್ಟರೆ ನಾವು ಬಸ್‌ಗಳನ್ನು ರೂಟ್ ಮೇಲೆ ತೆಗೆದುಕೊಂಡು ಹೋಗುತ್ತೇವೆ ಇಲ್ಲದಿದ್ದರೆ ನಾವು ಕೆಲಸ ಬಿಟ್ಟು ಹೋಗುತ್ತೇವೆ. ನಮಗೆ ಭದ್ರತೆ ಇಲ್ಲದ ಈ ಕೆಲಸ ಬೇಡ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.
ಇತ್ತ 20ಕ್ಕೂ ಹೆಚ್ಚು ಬಸ್‌ಗಳು ಡಿಪೋದಲ್ಲೇ ಇರುವುದರಿಂದ ಎಲೆಕ್ಟ್ರಿಕ್ ಬಸ್‌ಗಳ ಗುತ್ತಿಗೆ ಪಡೆದವರು ಇತ್ತ ಬಿಎಂಟಿಸಿಯ ಅಧಿಕಾರಿಗಳು ಚಾಲಕರನ್ನು ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಚಾಲಕರು ಮಾತ್ರ ಸೂಕ್ತ ಭದ್ರತೆ ಕೊಡದ ಹೊರತು ನಾವು ಬಸ್‌ಗಳನ್ನು ತೆಗೆಯುವುದಿಲ್ಲ ಎಂದು ಹೇಳುತ್ತಿದ್ದಾರೆ.
ಇನ್ನು ಸಾಮಾನ್ಯ ಪಾಳಿಯ ಬಸ್‌ಗಳು ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡುತ್ತಿದ್ದು ಈ ರಾತ್ರಿ ಪಾಳಿಯ ಬಸ್‌ಗಳ ಚಾಲಕರು ಮಾತ್ರ ಕಿಡಿಗೇಡಿಗಳ ಹಲ್ಲೆಯಿಂದ ಭಾರಿ ನೊಂದು ಪರಿಹಾರ ನೀಡುವಂತೆ ಆಗ್ರಹಿಸಿ ಡಿಪೋನಲ್ಲೇ ಕುಳಿತ್ತಿದ್ದಾರೆ.