CrimeNEWSನಮ್ಮಜಿಲ್ಲೆ

BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ – ಸಂಸ್ಥೆ ಬಸ್‌ಗಳ ಕಾರ್ಯಾಚರಣೆ 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿ ಮೇಲೆ ನಿನ್ನೆ ಕಿಡಿಗೇಡಿಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಬಿಎಂಟಿಸಿ 30ನೇ ಘಟಕದಲ್ಲಿ ಚಾಲಕರು ಹಲ್ಲೆಕೋರರ ಬಂಧಿಸುವಂತೆ ಪಟ್ಟುಹಿಡಿದು ಬಸ್‌ಗಳನ್ನು ಮಾರ್ಗಾಚಣೆ ಮಾಡಲು ನಿರಾಕರಿಸಿದ್ದರಿಂದ ಸಂಸ್ಥೆಯ ಡಿಸೇಲ್‌ ಬಸ್‌ಗಳ ಕಾರ್ಯಾಚರಣೆಗೊಳಿಸಲಾಯಿತು.

ಇಂದು (ಅ.27) ಮಧ್ಯಾಹ್ನ ಕಾರ್ಯಾಚರಣೆಗೆ ಇಳಿಯಬೇಕಿದ್ದ ರಾತ್ರಿ ಪಾಳಿಯದ ( Night halt) 20 ಹೆಚ್ಚು 290 ರೂಟ್‌ನ ಬಸ್‌ಗಳನ್ನು ತೆಗೆಯದೆ ಚಾಲಕರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಎಲೆಕ್ಟ್ರಿಕ್‌ ಬಸ್‌ಗಳ ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳು ಹಾಗೂ ಬಿಎಂಟಿಸಿಯ ಅಧಿಕಾರಿಗಳು ಪ್ರತಿಭಟನೆ ನಿರತರ ಮನವೊಲಿಸಲು ಪ್ರಯತ್ನಿಸಿದರು.

ಆದರೆ ಈ ವೇಳೆ ಕೆಲ ಚಾಲಕರು ಒಪ್ಪಿಕೊಂಡು ಸಂಜೆ 4ಗಂಟೆ ಬಳಿಕ ಡ್ಯೂಟಿಗೆ ಮರಳಿದರು. ಆದರೆ ಇನ್ನು ಕೆಲ ಚಾಲಕರು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಂಸ್ಥೆಯ ಬೇರೆ ಬೇರೆ ಡಿಪೋಗಳಿಂದ ಡೀಸೆಲ್‌ ಬಸ್‌ಗಳನ್ನು ಅಂದರೆ ಸಂಸ್ಥೆಯ ಬಸ್‌ಗಳು ಮತ್ತು ಚಾಲಕರನ್ನು ಕರೆಸಿಕೊಂಡು 30ನೇ ಡಿಪೋ ನಿರ್ವಾಹಕರನ್ನು ಡ್ಯೂಟಿಗೆ ಹತ್ತಿಸಿದರು.

ಹೀಗಾಗಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬಸ್‌ಗಳು ಕಾರ್ಯಾಚರಣೆ ಮಾಡದೆ ಡಿಪೋನಲ್ಲೇ ನಿಂತಿವೆ. ಆದರೆ, ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬಿಎಂಟಿಸಿ ಅಧಿಕಾರಿಗಳು ಬೇರೆ ಡಿಪೋನ ತಮ್ಮ ಬಸ್‌ಗಳು ಮತ್ತು ಚಾಲಕರನ್ನು ಕರೆಸಿಕೊಂಡರು ಈ ವೇಳೆ 30ನೇ ಡಿಪೋ ನಿರ್ವಾಹಕರನ್ನು ಆ ಬಸ್‌ಗಳಲ್ಲಿ ಡ್ಯೂಟಿ ಮಾಡುವುದಕ್ಕೆ ಹತ್ತಿಸಿದರು.

ಇದರಿಂದ ಇಂದು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಂತಾಗಿದೆ. ಆದರೆ ಮತ್ತೆ ನಾಳೆ ಅಂದರೆ ಅ.28ರಂದು ಮತ್ತೆ ಚಾಲಕರು ಡ್ಯೂಟಿ ಮಾಡುವುದಕ್ಕೆ ಹಿಂದೇಟು ಹಾಕಿದರೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಹೆಸರೇಳಲಿಚ್ಛಿಸದ ನೌಕರರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.

ಪ್ರತಿಭಟನಾ ನಿರತ ಚಾಲಕರು: 290ನೇ ರೂಟ್‌ ನಮಗೆ ಬೇಡ ಬೇರೆ ರೂಟ್‌ಕೊಟ್ಟರೆ ಡ್ಯೂಟಿ ಮಾಡುತ್ತೇವೆ, ಇಲ್ಲದಿದ್ದರೆ ನಾವು ಕೆಲಸ ಬಿಟ್ಟು ಹೋಗುತ್ತೇವೆ. ಅಲ್ಲದೆ ಇದೇ ರೀತಿ ನಮ್ಮ ಮೇಲೆ ಹಲ್ಲೆಯಾಗುತ್ತಿದ್ದರೆ ನಮ್ಮ ಮತ್ತು ನಮ್ಮ ಕುಟುಂಬದವರನ್ನು ನೋಡಿಕೊಳ್ಳುವವರು ಯಾರು?

ನಾವು ಮಾಡುತ್ತಿರುವುದು ಸರ್ವಾಜನಿಕರ ಸೇವೆ. ಆದರೆ, ನಮ್ಮ ಮೇಲೆಯೇ ಏಕಾಏಕಿ ಯಾರೋ ಬಂದು ಹಲ್ಲೆ ಮಾಡಿ ಪರಾರಿಯಾಗುತ್ತಾರೆ ಎಂದರೆ ಅವರಿಗೆ ಕಾನೂನಿನ ಭಯವಿಲ್ಲ ಎಂದಾಗುತ್ತದೆ. ಅಲ್ಲದೆ ನಮ್ಮ ಸಂಸ್ಥೆಯಲ್ಲಿ ಹಲ್ಲೆ ಕೋರರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದಕ್ಕೆ ಕಿಡಿಗೇಡಿಗಳು ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಅಪರಿಚಿತರಿಂದ ಹಲ್ಲೆಗೊಳಗಾಗಿ ನಮ್ಮ ಜೀವ ಹೋದರೆ ನಮ್ಮ ಕುಟುಂಬವನ್ನು ನೋಡಿಕೊಳ್ಳುವವರು ಯಾರು? ಒಂದು ವೇಳೆ ಹಲ್ಲೆಯಿಂದ ದೈಹಿಕವಾಕವಾಗಿ ನಾವು ಊನಗೊಂಡರೆ ನಮ್ಮನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲದಕ್ಕೂ ಸಮಂಜಸವಾದ ಉತ್ತರ ಕೊಟ್ಟರೆ ನಾವು ಬಸ್‌ಗಳನ್ನು ರೂಟ್‌ ಮೇಲೆ ತೆಗೆದುಕೊಂಡು ಹೋಗುತ್ತೇವೆ ಇಲ್ಲದಿದ್ದರೆ ನಾವು ಕೆಲಸ ಬಿಟ್ಟು ಹೋಗುತ್ತೇವೆ. ನಮಗೆ ಭದ್ರತೆ ಇಲ್ಲದ ಈ ಕೆಲಸ ಬೇಡ ಎಂದು ಪಟ್ಟುಹಿಡಿದ್ದರು.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ