NEWSನಮ್ಮಜಿಲ್ಲೆಬೆಂಗಳೂರು

ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ‌ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಅದರಂತೆ ಮಹದೇವಪುರ ವಲಯದಲ್ಲಿ ಕಟ್ಟಡದ ವ್ಯತಿರಿಕ್ತ ಭಾಗ/ಹೆಚ್ಚುವರಿ ಮಹಡಿಯ ತೆರವುಗೊಳಿಸುವ ಕಾರ್ಯ ಹಾಗೂ ಪಶ್ವಿಮ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

 ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ಹೂಡಿ ಉಪ ವಿಭಾಗದ ಆಲ್ಫಾ ಗಾರ್ಡನ್ ನಲ್ಲಿ ನಿರ್ಮಾಣ ಹಂತದ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿಯ ತೆರವು ಕಾರ್ಯಾಚರಣೆಯನ್ನು ಇಂದು ಪ್ರಾರಂಭಿಸಲಾಯಿತು. ಈ ವೇಳೆ ಮಾಲೀಕರೇ 10 ದಿನಗಳಲ್ಲಿ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿಯನ್ನು ತೆರವುಗೊಳಿಸುವುದಾಗಿ ಮನವಿ ಪತ್ರ ನೀಡಿದ್ದು, ಅದಕ್ಕೆ‌ ಪಾಲಿಕೆ ಸಹಮತಿ ನೀಡಿದೆ.

ಮಹದೇವಪುರ ವಲಯ ಹೂಡಿ ಉಪ ವಿಭಾಗದ ಆಲ್ಫಾ ಗಾರ್ಡನ್ 5ನೇ ಕ್ರಾಸ್ ಸರ್ವೇ ಸಂ. 40 ರಲ್ಲಿ ಸುರೇಶ್ ತಮ್ಮಿನಾ ಮಾಲೀಕತ್ವದಲ್ಲಿರುವ 40X60 ಜಾಗದಲ್ಲಿ ನೆಲಮಹಡಿ + 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮೂದನೆ ಪಡೆಯಲಾಗಿತ್ತು. ಆದರೆ ಮಾಲೀಕರು ಹೆಚ್ಚುವರಿಯಾಗಿ 1 ಅಂತಸ್ತನ್ನು ನಿರ್ಮಾಣ ಮಾಡಿರುತ್ತಾರೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ವ್ಯತಿರಿಕ್ತ ಹಾಗೂ ಹೆಚ್ಚುವರಿ ಮಹಡಿ ತೆರವು ಕಾರ್ಯ ನಡೆಸಿರುತ್ತಾರೆ.

ತೆರವು ಕಾರ್ಯಾಚರಣೆಯ ವೇಳೆ ನೆಲಮಹಡಿಯಲ್ಲಿ ಒಂದು ಭಾಗದ ಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಈ ಸಂಬಂಧ ಮಾಲೀಕರೇ ಸ್ವಂತ ಖರ್ಚಿನಿಂದ ಸುರಕಕ್ಷತೆ ಕಾಪಾಡಿಕೊಂಡು 10 ದಿನಗಳಲ್ಲಿ ಪಾಲಿಕೆ ನೀಡಿರುವ ಅನುಮೋದನೆಯನ್ನು ಹೊರತುಪಡಿಸಿ ವ್ಯತಿರಿಕ್ತ ಭಾಗಗಳು ಮತ್ತು ಹೆಚ್ಚುವರಿ ಮಹಡಿಯನ್ನು ತೆರವುಗೊಳಿಸಲಾಗುವುದೆಂದು ಮನವಿ ಪತ್ರ ನೀಡಿರುತ್ತಾರೆ. ಅದರಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ 10 ದಿನಗಳ ಒಳಗಾಗಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ.

ಸ್ಥಳದಲ್ಲಿ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ: ಪಶ್ಚಿಮ ವಲಯ ಗಾಂಧಿನಗರ ವ್ಯಾಪ್ತಿಯ ಗುಬ್ಬಿ ತೋಟದಪ್ಪ ರಸ್ತೆ ಶಾಂತಲಾ ಸಿಲ್ಕ್ ಬಳಿ ವಾಣಿಜ್ಯ ಕಟ್ಟಡದ ಮಾಲೀಕರಾದ ದಿಲೀಪ್ ಕುಮಾರ್ ಎಂಬುವರು ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡು, ನಿರ್ಮಿಸಿದ್ದ ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿದೆ.

ಪಶ್ಚಿಮ ವಲಯ ಆಯುಕ್ತರಾದ ಅರ್ಚನಾ, ವಲಯ ಜಂಟಿ ಆಯುಕ್ತರಾದ ಸಂಗಪ್ಪ ರವರ ನೇತೃತ್ವದಲ್ಲಿ, ಇಂದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುಮಾರು 25 ಅಡಿಯ ಸಂಪೂರ್ಣ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಪಾದಚಾರಿಗಳ‌ ಓಡಾಟಕ್ಕೂ ಜಾಗವಿಲ್ಲದ ಹಾಗೆ ಮೆಟ್ಟಿಲುಗಳನ್ನು ನಿರ್ಮಿಸಿರುತ್ತಾರೆ. ಈ ಸಂಬಂಧ ಕೂಡಲೆ ಜೆಸಿಬಿಯ ಮೂಲಕ ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿದ್ದು, ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಈ‌ ಹಿಂದೆಯೇ ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿದ್ದ ಮೆಟ್ಟಿಗಳನ್ನು ತೆರವುಗೊಳಿಸಲು ಕಟ್ಟಡ ಮಾಲೀಕರಿಗೆ ಪಾಲಿಕೆ ವತಿಯಿಂದ ತಿಳಿವಳಿಕೆ ಪತ್ರ ನೀಡಲಾಗಿತ್ತು. ಆದರೂ ಸಹ ತೆರವುಗೊಳಿಸದ ಕಾರಣ ಪಾಲಿಕೆಯಿಂದಲೇ ಇಂದು ತೆರವುಗೊಳಿಸಲಾಗಿದ್ದು, ತೆರವುಗೊಳಿಸಲು‌ ಆಗಿರುವ ವೆಚ್ಚನ್ನು ಕಟ್ಟಡ ಮಾಲೀಕರಿಂದ ವಸೂಲಿ‌ ಮಾಡಲಾಗುವುದು.

ಸ್ಥಳದಲ್ಲಿ ಕಾರ್ಯಪಾಲಕ ಅಭಿಯಂತರರಾದ ಮುನಿಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಶ್ವನಾಥ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!