NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎಲ್ಲ ಇಪಿಎಸ್‌ ಪಿಂಚಣಿದಾರರು, KSRTC  ನಿವೃತ್ತ ನೌಕರರಿಗೂ  ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀಶೀಘ್ರದಲ್ಲೇ ಫಲ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ & ಬಿಎಂಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಆಶಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅಂದರೆ ಇದೇ ನ.3ರಂದು ಸಸ್ಯಕಾಶಿ ಲಾಲ್‌ಬಾಗ್ ಆವರಣದಲ್ಲಿ ಆಯೋಜಿಸಿದ್ದ ಇಪಿಎಸ್ ಪಿಂಚಣಿದಾರರ 82ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಿರಂತರ ಹೋರಾಟಕ್ಕೆ ಫಲ ಸಿಗುವ ಕಾಲ ಕೂಡಿ ಬಂದಿದೆ. ಹೀಗಾಗಿ ನಾವೆಲ್ಲರೂ ಡ್ಯೂಟಿಯಲ್ಲಿ ಇದ್ದವೇಳೆ ಹೇಗೆ ಆರ್ಥಿಕವಾಗಿ ಬಲಿಷ್ಠವಾಗಿದ್ದೆವೂ ಅದರಂತೆ ನಮ್ಮ ಇಳಿವಸ್ಸಿನಲ್ಲೀ ನೆಮ್ಮದಿಯ ಜೀವನ ಮಾಡುವ ಕಾಲ ಕೂಡಿ ಬರುತ್ತಿದೆ ಎಂದು ಹೇಳಿದರು.

ಇನ್ನು ಕಳೆದ ಅಕ್ಟೋಬರ್ 28ರಂದು ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ, ನೂರಾರು ಇಪಿಎಸ್ ನಿವೃತ್ತರು ನಡೆಸಿದ ಬೃಹತ್‌ ಪ್ರತಿಭಟನೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯಾಗಿದ್ದು ಈಗಾಗಲೇ ಅಧಿಕಾರಿಗಳು ನಮ್ಮ ಹೋರಾಟದ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದರು.

ಅಲ್ಲದೆ ಇದೇ ನವಂಬರ್ 6 ರಂದು ದೆಹಲಿಯಲ್ಲಿ, ಸಿಬಿಟಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ನಿವೃತ್ತರ ಮೂಲಭೂತ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನಮ್ಮ ಮುಖಂಡರ ಜತೆ ಅಂದು ಚರ್ಚಿಸಿ, ನವೆಂಬರ್ 23 ರಂದು ಜರುಗುವ 236ನೇ ಸಿಬಿಟಿ ಸಭೆಯಲ್ಲಿ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸಂಭವ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಅಶೋಕ ರಾವುತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಇಪಿಎಸ್ ಪಿಂಚಣಿದಾರರ ಹೋರಾಟ ಅಂತಿಮ ಘಟ್ಟ ತಲುಪಿದ್ದು, ನಮ್ಮ ಮುಖಂಡರು ಕಾರ್ಯಪ್ರವೃತ್ತರಾಗಿದ್ದಾರೆ. ನಿಸ್ಸಂದೇಹವಾಗಿ ನಮ್ಮ ಬೇಡಿಕೆ ಈಡೇರುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಸುಬ್ಬಣ್ಣ ತಿಳಿಸಿದರು.

ದಿನಕಳೆದಂತೆ ನಿವೃತ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಇಪಿಎಫ್ಒ ಖಾತೆಯಲ್ಲಿ ಲಕ್ಷಾಂತರ ಕೋಟಿ ಕಾರ್ಪಸ್ ಹಣ ಇರ. ಹೀಗಾಗಿ ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಈಡೇರಿಸಲು, ಕೇಂದ್ರ ಸರ್ಕಾರಕ್ಕೆ ಯಾವುದೇ ಹಣಕಾಸಿನ ಮುಗ್ಗಟ್ಟು ಇಲ್ಲ, ಇಚ್ಛಾಶಕ್ತಿಯಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ರಹ್ಮಚಾರಿ, ಮಾತು ಯಾವಾಗಲೂ ಕತ್ತಿಗಿಂತ ಹರಿತವಾಗಿದ್ದು, ನಿರ್ಲಿಪ್ತ ಇಪಿಎಫ್ಒ ಅಧಿಕಾರಿಗಳ ನಡೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಹೋರಾಟಕ್ಕೆ ಇನ್ನೂ ಹೆಚ್ಚಿನ ಒತ್ತು ಕೊಟ್ಟಲ್ಲಿ, ನಮ್ಮ ಎಲ್ಲ ಬೇಡಿಕೆಗಳು ಶೀಘ್ರ ಈಡೇರುತ್ತವೆ ಎಂಬ ಆಶಯ ವ್ಯಕ್ತಪಡಿಸಿದರು.

ಸಭೆಗೂ ಮುನ್ನ ಸಸ್ಯಕಾಶಿಯಲ್ಲಿ ನಡೆದ ಸಭೆಗೆ ನಿವೃತ್ತ ನೌಕರರು ಹಬ್ಬ ಹರಿದಿನದ ನಡುವೆಯೂ ನೂರಾರು ಮಂದಿ ಆಗಮಿಸಿದ್ದು, ನಾವು ಸೇವೆಯಲ್ಲಿದ್ದಾಗ ಮಳೆಬಿಸಿಲೆನ್ನದೆ, ಹಗಲಿರಲು ಕರ್ತವ್ಯ ನಿರ್ವಹಿಸಿದ ದಿನಗಳನ್ನು ಮೆಲಕು ಹಾಕುತ್ತಾ ವೃತ್ತಿಯ ಜತೆಗೆ ಸಾರ್ವಜನಿಕರ ಸೇವೆ ಮಾಡಿದ ಆ ದಿಗಳನ್ನು ನನೆದು ಕಣ್ಣಾಲೆಗಳನ್ನು ತೇವವಾಗಿಸಿಕೊಂಡಿದ್ದು ಮಾತ್ರ ದುಃಖದ ಸಂಗತಿ.

ಕಣ್ಣೀರು ಹಾಕಿದ್ದು ಏಕೆ ಎಂದು ಕೆಲವರು ಪ್ರಶ್ನೆ ಮಾಡಬಹದು. ಹೌದು! ಅವರು ಕಣ್ಣೀರು ಹಾಕಿದ್ದು ನಮ್ಮ ದುಡಿಮೆಯ ವಯಸ್ಸಿನಲ್ಲಿ ನಾವು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಮಗೆ ಈ ಮುಸ್ಸಂಜೆಯ ಇಳಿ ವಯಸ್ಸಿನಲ್ಲಿ ಸಿಗಬೇಕಾದ ನ್ಯಾಯಯುತ ಪಿಂಚಣಿಯನ್ನು ಕೊಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡೆಗಣಿಸುತ್ತಿರುವುದು ಭಾರಿ ನೋವು ತರುತ್ತಿದೆ ಎಂದು ಕಣ್ಣೀರು ಹಾಕಿದರು.

ಬಳಿಕ ತಮಗೆ ತಾವೇ ಒಬ್ಬರಿಗೊಬ್ಬರು ಸಮಾಧಾನ ಹೇಳುತ್ತಾ, ಆ ನಿವೃತ್ತರು ಲಾಲ್‌ಬಾಗ್ ಆವರಣದಲ್ಲಿ ವಾಯು ವಿಹಾರ ನಡೆಸಿ ಅಂದಿನ ಸಹೋದ್ಯೋಗಿಗಳು ಇಂದಿನ ಆತ್ಮೀಯ ಸ್ನೇಹಿತರೊಡೆಗೂಡಿ ಎಲ್ಲಿಲ್ಲದ ನವೊಲ್ಲಾಸದಿಂದ, ಉಭಯ ಕುಶಲೊಪರಿ ವಿಚಾರಿಸುತ್ತ ನೋವು ನಲಿವುಗಳನ್ನು ಹಂಚಿಕೊಂಡರು.

ಇದೇ ವೇಳೆ ಸಭೆಗೆ ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಎಲ್ಲ ನಿವೃತ್ತರು, ಸಂಘದ ಪದಾಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿ, ಪಿಂಚಣಿಗಾಗಿ ಮುಂದಿನ ಹೋರಾಟ ಹೇಗಿರಬೇಕು ಎಂಬ ಸಂಪೂರ್ಣ ಚಿತ್ರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಸಂಘದ ಪದಾಧಿಕಾರಿ ಮನೋಹರ್ ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಡೋಲಪ್ಪನವರ ವಂದನಾರ್ಪಣೆಯೊಂದಿಗೆ ಸಭೆ ಪೂರ್ಣಗೊಂಡಿತು.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!