NEWSನಮ್ಮಜಿಲ್ಲೆನಮ್ಮರಾಜ್ಯ

BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಕೆಎಸ್‌ಆರ್‌ಟಿಸಿ (KSRTC) ಒಂದೇ ದಿನದಲ್ಲಿ ಬರೋಬ್ಬರಿ 5.59 ಕೋಟಿ ರೂ. ಆದಾಯ ಗಳಿಸುವ ಮೂಲಕ ಬಂಪರ್ ಆದಾಯ ಪಡೆದ ಹೆಗ್ಗಳಿಗೆ ಪಾತ್ರವಾಗಿದೆ.

ದೀಪಾವಳಿ ಹಬ್ಬದಿಂದ (Deepawali) ಸಾಲು ಸಾಲು ರಜೆಗಳಿದ್ದ ಕಾರಣ ರಾಜ್ಯದ ರಾಜಧಾನಿ ಸೇರಿದಂತೆ ಬೇರೆಡೆಯಿಂದ ಊರಿನತ್ತ ಜನರು ತೆರಳಿದ್ದವರು. ನ.3 ರಂದು ಭಾನುವಾರ ಮತ್ತೆ ಸಿಲಿಕಾನ್ ಸಿಟಿಗೆ ಮರಳಿದ್ದಾರೆ. ಇದರಿಂದಾಗಿ ಭಾನುವಾರ ಒಂದೇ ದಿನ ಆನ್‌ಲೈನ್‌ಲ್ಲಿ 85,462 ಸೀಟುಗಳನ್ನು ಬುಕಿಂಗ್ ಆಗಿದ್ದವು.

85,462 ಸೀಟುಗಳು ಬುಕ್ ಆಗಿದ್ದು, ಭಾನುವಾರ ಒಂದೇ ದಿನದಲ್ಲಿ ಬರೋಬ್ಬರಿ 5.59 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿದೆ. ಇದಕ್ಕೂ ಮೊದಲು ಅಕ್ಟೋಬರ್ ಅಂತ್ಯದ ದಿನವೊಂದರಲ್ಲಿ 67,033 ಟಿಕೆಟ್ ಮಾರಾಟವಾಗಿದ್ದವು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಹಬ್ಬದ ನಿಮಿತ್ತ ಕೆಎಸ್‌ಆರ್‌ಟಿಸಿ ಜತೆಗೆ ಬಿಎಂಟಿಸಿಯು ಕಾರ್ಯನಿರ್ವಹಿಸಿದ್ದು, ಗಳಿಸಿರುವ ಆದಾಯಕ್ಕೆ ಸಾಥ್ ನೀಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ತಿಳಿಸಿದ್ದಾರೆ.

ಇಷ್ಟೆಲ್ಲ ಆದಾಯ ಬರುತ್ತಿದ್ದರು ಕೂಡ ಸಾರಿಗೆ ನಿಗಮಗಳು ಭಾರಿ ನಷ್ಟದಲ್ಲಿವೆ ಎಂದು ಮಾತ್ರ ಸಂಘಟನೆಗಳು ಮತ್ತು ಅಧಿಕಾರಿಗಳು ಹೇಳುತ್ತಲೇ ಬರುತ್ತಿದ್ದಾರೆ. ಹೀಗಾಗಿ ಆದಾಯ ಎಲ್ಲಿ ಸೋರಿಕೆಯಾಗುತ್ತಿದೆ ಎಂಬುವುದು ಮಾತ್ರ ಗೊತ್ತಾಗುತ್ತಿಲ್ಲ.

ಚಾಲನಾ ಸಿಬ್ಬಂದಿಗಳು ಆದಾಯವನ್ನು ಕೋತ ಮಾಡಿದ್ದರೆ ಗಳಿಕೆಯ ಹಣ ಲೆಕ್ಕಕ್ಕೆ ಸಿಗುವುದಿಲ್ಲ, ಆದರೆ, ಲೆಕ್ಕಕ್ಕೆ ಸಿಗುವ ಹಣ ಲಾಭದಲ್ಲಿದ್ದರೂ ತಿಂಗಳ ಕೊನೆಯಲ್ಲಿ ನಷ್ಟದ ಲೆಕ್ಕದಲ್ಲಿ ಬಂದು ನಿಲ್ಲುತ್ತಿದೆ ಇದಕ್ಕೆ ಏನು ಕಾರಣ ಎಂದು ಮಾತ್ರ ಯಾರು ಕಂಡುಹಿಡಿಯುತ್ತಿಲ್ಲ ಎಂದು ಕೆಲ ಅಧಿಕಾರಿಗಳೆ ಬೇಸರ ಹೊರಹಾಕುತ್ತಿದ್ದಾರೆ.

ಇನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ನೌಕರರಿಗೆ 38 ತಿಂಗಳ ವೇತನ ಅರಿಯರ್ಸ್‌ ಕೊಡಬೇಕು ಎಂದು ಹೇಳುತ್ತಾರೆ. ಜತೆಗೆ ಟಿಕೆಟ್‌ ಬೆಲೆ ಏರಿಕೆ ಮಾಡದಿರುವುದರಿಂದ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ ಎಂದು ಹೇಳುತ್ತಾರೆ. ಆದರೆ ಲಾಭ ಬರುತ್ತಿದ್ದರು ಹೇಗೆ ನಷ್ಟವಾಗುತ್ತಿದೆ ಎಂಬುದಕ್ಕೆ ಅವರಲ್ಲೂ ಉತ್ತರವಿಲ್ಲ ಎಂಬುವುದು ಮಾತ್ರ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!