NEWSದೇಶ-ವಿದೇಶನಮ್ಮರಾಜ್ಯ

LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಲಘು ಮೋಟಾರು ವಾಹನ (LMV) ಚಾಲನಾ ಪರವಾನಗಿ ಹೊಂದಿರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ನ (Supreme Court) ಸಾಂವಿಧಾನಕ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಈ ಆದೇಶ ನೀಡಿದ್ದು, ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವವರು 7,500 ಕೆಜಿಗಿಂತ ಹೆಚ್ಚಿನ ಭಾರವಿಲ್ಲದ ಸಾರಿಗೆ ವಾಹನವನ್ನು ಓಡಿಸಲು ಅರ್ಹರೇ ಎಂಬ ಕಾನೂನು ಪ್ರಶ್ನೆಗೆ ಪೀಠವು ಉತ್ತರಿಸಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ರಾಯ್ ಅವರೊಂದಿಗೆ ಪೀಠದಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಕೂಡ ಇದ್ದರು.

ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ LMV ಪರವಾನಗಿ ಹೊಂದಿರುವವರು ಕಾರಣ ಎಂದು ಸಾಬೀತುಪಡಿಸಲು ಯಾವುದೇ ಡೇಟಾ ಲಭ್ಯವಿಲ್ಲ. ಈ ಸಮಸ್ಯೆಯು ಲಘು ಮೋಟಾರು ವಾಹನ ಪರವಾನಗಿ ಹೊಂದಿರುವ ಚಾಲಕರ ಜೀವನೋಪಾಯಕ್ಕೆ ಸಂಬಂಧಿಸಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

Leave a Reply

error: Content is protected !!
LATEST
ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ! ಚೆಂಡು ಹೂವಿನ ಬೆಲೆ ತೀವ್ರ ಕುಸಿತ- ರಸ್ತೆ ಬದಿ ಹೂ ಸುರಿದು ಬೆಳೆಗಾರ ರೈತರ ಅಕ್ರೋಶ