NEWSಸಂಸ್ಕೃತಿಸಿನಿಪಥ

ಮಕ್ಕಳ ಮನೋರಂಜನೆಗಾಗಿ ಯೂಟ್ಯೂಬ್ ಚಾನಲ್‌ ಆರಂಭ 

“ಮಕ್ಕಳ ವಾಣಿ – ನಲಿಯೋಣ ಕಲಿಯೋಣ”  ಚಾನಲ್‌ಗೆ ಸಿಎಂ ಯಡಿಯೂರಪ್ಪ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯವು ಕೊರೊನಾ ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ ಮನೆಯಲ್ಲಿ ಇರುವ ಮಕ್ಕಳ ಮನೋರಂಜನೆಗಾಗಿ ಶಿಕ್ಷಣ ಇಲಾಖೆಯು ಆರಂಭಿಸಿರುವ ಮಕ್ಕಳ ವಾಣಿ ನಲಿಯೋಣ ಕಲಿಯೋಣ ಮಕ್ಕಳ ಯೂಟ್ಯೂಬ್ ಚಾನಲ್ ನ್ನು ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಶಿಕ್ಷಣ ಇಲಾಖೆಯ ಈ ಕ್ರಮವು ಅತ್ಯಂತ ಸಕಾಲಿಕವೂ ಸಮರ್ಪಕವೂ ಆಗಿದ್ದು, ತಂತ್ರಜ್ಞಾನದ ಸದ್ಬಳಕೆಗೆ ಇದೊಂದು ಉದಾಹರಣೆಯಾಗಿದೆ ಎಂದರು.  ಶಾಲಾ ಮಕ್ಕಳು ಸುದೀರ್ಘ ಅವದಿಗೆ ಶಾಲೆಯಿಂದ ದೂರವಿರುವ ವಿದ್ಯಾರ್ಥಿಗಳಿಗೆ ಅವರ ಬುದ್ಧಿಯನ್ನು ಪ್ರಚೋದಿಸುವ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಈ ಮಾರ್ಗೋಪಾಯ ವಿನೂತನವಾಗಿದೆ ಹಾಗೂ ಸರ್ಕಾರದ ಈ ಕ್ರಮ ವಿದ್ಯಾರ್ಥಿಗಳ ಮತ್ತು ಪೋಷಕರ ಮನ ಗೆಲ್ಲಲಿದೆ ಎಂದು ಹೇಳಿದರು.

ಮನೆಯಲ್ಲಿ ಇರುವ ಮಕ್ಕಳನ್ನು ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರು ನಾಟಕ, ಕ್ರಾಪ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಮುಂತಾದವುಗಳ ಮೂಲಕ ತಲುಪಿ ಅವರನ್ನು ರಂಜಿಸುವುದರ ಜೊತೆಗೆ ಆಸಕ್ತಿಕರವಾದ ಕಲಿಕೆಗೆ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿರುವ ಈ ಪ್ರಯತ್ನವು ಅನನ್ಯವಾಗಿದ್ದು ಈ ಯೋಜನೆಯ ರೂವಾರಿ ಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಅವರನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದರು.

ಮಕ್ಕಳ ವಾಣಿ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಕಾರ್ಯಕ್ರಮಗಳು ಇತರೆ ಮಾಧ್ಯಮಗಳಾದ ರೇಡಿಯೋ, ಟಿವಿಗಳಲ್ಲಿಯೂ ಸಹ ಪ್ರಸಾರ ಮಾಡಲು ಸೂಕ್ತವಾಗಿರುವಂತೆ ರೂಪಿಸಲಾಗಿದ್ದು ಪ್ರತಿ ದಿನ ಮುಂಜಾನೆ 10.30 ಗಂಟೆಗೆ https://www.youtube.com/channel/ UCDaVbK0F5b7y4hgSZr TwZNg ಲಿಂಕ್ನಲ್ಲಿ ಈ ಕಾರ್ಯಕ್ರಮಗಳು ಒಂದು ಗಂಟೆ ಅವಧಿಗೆ ಪ್ರಸಾರಗೊಳ್ಳಲಿವೆ.

ಈ ಚಾನಲ್ನಲ್ಲಿ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಶಿಕ್ಷಕರು, ಶಿಕ್ಷಣಾಸಕ್ತರು ತಯಾರಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದು ಸ್ವೀಕೃತವಾಗುವ ಸಾಮಗ್ರಿಗಳನ್ನು ಅವುಗಳ ನಾವೀನ್ಯತೆ, ಸೂಕ್ತತೆ ಹಾಗೂ ಸಮಂಜಸತೆಯ ಬಗ್ಗೆ ಪರಿಶೀಲಿಸಿ ಪ್ರಸಾರ ಮಾಡುವ ನಿರ್ಧಾರವನ್ನು ಇದಕ್ಕಾಗಿಯೇ ರಚಿಸಲಾಗಿರುವ ಸಂಪಾದಕ ಮಂಡಳಿಯು ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಮಕ್ಕಳ ಮನೋರಂಜನೆಗಾಗಿ ಅತ್ಯುತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದು ಮಕ್ಕಳ ವಾಣಿ ನಲಿಯೋಣ ಕಲಿಯೋಣ ಚಾನಲ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ಗಂಟೆಗೆ ಪ್ರಸಾರಗೊಳ್ಳುವ ಕಾರ್ಯಕ್ರಮಗಳನ್ನು ವೀಕ್ಷಿಸಲು ರಾಜ್ಯದ ಎಲ್ಲಾ ಶಿಕ್ಷಕರು, ಪೋಷಕರು ತಮ್ಮ ಮಕ್ಕಳಿಗೆ ಪ್ರೇರೇಪಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ