Please assign a menu to the primary menu location under menu

NEWSನಮ್ಮಜಿಲ್ಲೆ

ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ರಾಷ್ಟ್ರೀಯ ಸಂಘರ್ಷ ಸಮಿತಿಯ NACಯ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಒದೇ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

“ಜಾಗೋ EPS 95 ಪೆನ್ಷನರ್ಸ್” ಎಂಬ ಘೋಷಣೆಯಡಿ ರಾಷ್ಟ್ರದಾದ್ಯಂತ ದೇಶದ ಉದ್ದಗಲಕ್ಕೂ ನಿರಂತರವಾಗಿ ಸಂಚರಿಸುತ್ತಾ ದೇಶದ ಹಾಗೂ ಸರ್ಕಾರದ ಮತ್ತು EPFO ಜಾರಿಗೊಳಿಸಿರುವ EPS -95 ಪಿಂಚಣಿ ಯೋಜನೆಯ ಕರಾಳತೆ ವಿರುದ್ಧ ನಡೆಸುತ್ತಿರುವ ಕಾರ್ಮಿಕರ ಪರವಾಗಿನ ಮಾನವೀಯ ಅಂತಃಕರಣವುಳ್ಳ ಆಂದೋಲನವಾಗಿದೆ ಇದಾಗಿದೆ ಎಂದು ತಿಳಿಸಿದ್ದಾರೆ.

ನಿವೃತ್ತರ ಸ್ವಾಭಿಮಾನದ ಹಕ್ಕಿಗಾಗಿನ ಹೋರಾಟದ ಹಿನ್ನೆಲೆ ಏನೆಂದು ತಿಳಿಯಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತ 5 ವರ್ಷದ ಬಳಿಕ ಅಂದರೆ 1952 ರಲ್ಲಿ ದೇಶದ ಕಾರ್ಮಿಕರ ಭವಿಷ್ಯ ರೂಪಿಸಲು ಪ್ರತ್ಯೇಕ ಕಾನೂನು ರಚಣೆಯಾಗಿ ಭವಿಷ್ಯ ನಿಧಿ ಸಂಘಟನೆ EPFO ಸ್ಥಾಪಿತವಾಯಿತು.

ಈ ಕಾನೂನಿಗೆ ಪ್ರೈವೇಟ್ ಸೆಕ್ಟರ್, ಪಬ್ಲಿಕ್ ಸೆಕ್ಟರ್ ಕಾರ್ಪೊರೇಟ್ ಕಂಪನಿಗಳನ್ನು ಖಾಸಗಿ ಸಣ್ಣ ಪುಟ್ಟ ಉದ್ಯಮಗಳನ್ನು ಈ ವ್ಯಾಪ್ತಿಗೆ ತರಲಾಯಿತು. ನಂತರ 1972ರಲ್ಲಿ ನೌಕರ ಸೇವೆಯಲ್ಲಿದ್ದಾಗ ಮರಣಹೊಂದಿದರೆ ಅವನ ಕುಟುಂಬದ ರಕ್ಷಣೆಗಾಗಿ ಎಂದು ಹೇಳುತ್ತಾ ಫ್ಯಾಮಿಲಿ ಪೆನ್ಷನ್ ಯೋಜನೆ ಜಾರಿಗೆ ತರಲಾಯಿತು.

ನಂತರ 16-11-1995 ರಿಂದ ಈ ಮುಂದಾಲೋಚನೆಯಿಲ್ಲದೇ ಇರುವ ತುಟ್ಟಿಭತ್ಯೆ ಇಲ್ಲದ ಮೋಸದ ಜಾಲವಿರುವ ಅವೈಜ್ಞಾನಿಕ ಈ EPS- 95 ಪಿಂಚಣಿ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆ ಸೆಲ್ಫ್ ಫಂಡೆಡ್ ಪೆನ್ಷನ್ ಸ್ಕೀಮ್ ಅಂತಾ ಹೇಳುತ್ತಾ ಸೇವೆಯಲ್ಲಿದ್ದ ನೌಕರನಿಂದ ಪ್ರತಿ ತಿಂಗಳೂ ನೌಕರನಿಗೂ ಎಂಪ್ಲೋಯೆರ್‌ಗೂ ಸರಿಯಾದ ಮಾಹಿತಿಯನ್ನು ನೀಡದೇ ಒತ್ತಾಯದಿಂದ ಸೀಲಿಂಗ ಲಿಮಿಟ್ಗೆ 5000 ರೂ.ಗಳಿಗೆ 417 ರೂ., 6500 ರೂ.ಗೆ 541 ರೂ. ಹಾಗೂ 15000ಕ್ಕೆ 1250 ರೂ. ಪಡೆದೂ ನಿವೃತ್ತನಾದ ಮೇಲೆ ಈ ಪಿಂಚಣಿದಾರನಿಗೆ 500 ರೂ.ಗಳಿಂದ ದಿಂದ 2500 ರೂ. ಮಾತ್ರ ಪಿಂಚಣಿ ನೀಡಲಾಗುತ್ತಿದೆ.

ಈ ಹೋರಾಟ ಪ್ರಾರಂಭವಾದ ಕೆಲ ವರ್ಷಗಳಲ್ಲಿ ಇದೇ ಬಿಜೆಪಿ ಸರ್ಕಾರ ಹಾಗೂ EPFO ಕನಿಷ್ಠ ಪಿಂಚಣಿ 1000 ಮಾಡಲಾಗಿದೆ.‌ ಇಂದಿಗೂ ದೇಶದ ಬಾಧೀತ 78 ಲಕ್ಷ ಪಿಂಚಣಿದಾರರಲ್ಲಿ 37 ಲಕ್ಷ ಪಿಂಚಣಿದಾರರಿಗೆ 1000 ರೂ.ಗಳಿಗಿಂತ ಕಡಿಮೆ ಪಿಂಚಣಿ ದೊರೆಯುತ್ತಿದೆ ಹಾಗೂ ಉಳಿದಂತೆ ಹೆಚ್ಚೆಂದರೆ 2500 ರೂ. ಮಾತ್ರ ಪಿಂಚಣಿ ದೊರೆಯುತ್ತಿದೆ.

1952 ಹಾಗೂ 1980ರ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನೌಕರಿಗೆ ಮಾತ್ರ ಹೆಚ್ಚಾಗಿದ್ದು, ನಂತರ ಪ್ರೈವೇಟ್ ಸೆಕ್ಟರ್, ಪಬ್ಲಿಕ್ ಸೆಕ್ಟರ್ ಖಾಸಗಿ ಉದ್ಯೋಗಗಳ ಸೃಷ್ಟಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಇಡೀ ದೇಶದಲ್ಲಿ ಕಾರ್ಮಿಕರ ಸಂಖ್ಯೆ ಕೋಟಿ ಕೋಟಿ ಬೆಳೆಯಿತು. ಆಗಿನ ಸರಕಾರ ಹಾಗೂ ಈ EPFO ಕಡಿಮೆ ಸಂಖ್ಯೆಯಲ್ಲಿದ್ದ ಈ ಸರಕಾರೇತರ ನೌಕರರ ಪಿಂಚಣಿ ಯೋಜನೆಯನ್ನು ಮುಂದಾಲೋಚನೆಯಿಲ್ಲದೆ ತಾನೇ ಕಾನೂನುಗಳನ್ನು ಸಿದ್ಧಪಡಿಸಿ ಜಾರಿಗೆ ತಂದಿತು.

ಯಾವಾಗ ದೇಶದಲ್ಲಿ ಜಾಗತಿಕರಣವಾಯಿತೋ, ಆಗ ಖಾಸಗಿ ಅರೆಸರಕಾರಿ ಉದ್ಯೋಗಗಳು ಹೆಚ್ಚಾಗುತ್ತಾ ಈ EPFO ದ ಕಬಂಧ ಬಾಹುಗಳಿಗೆ ಕಾರ್ಮಿಕರು ಸಿಕ್ಕಿಹಾಕಿಕೊಂಡರು. ಕೇಂದ್ರ ಸರಕಾರ ಹಾಗೂ EPFO ಈ ಕಾರ್ಮಿಕರಿಗೆ ಯೋಗ್ಯ ಪಿಂಚಣಿ ನೀಡುವ ಪರಿಸ್ಕರಿಸುಲು ಚಿಂತಿಸದೇ ಇದ್ದು, ರಾಜ್ಯ ಹಾಗೂ ಕೇಂದ್ರ ಸರಕಾರಿ ನಿವೃತ್ತ ನೌಕರರಿಗೆ ಇರುವ ಪಿಂಚಣಿಗೆ ತುಟ್ಟಿಭತ್ಯೆ ಇರುವಂತೆ ಸರಕಾರೇತರ ನಿವೃತ್ತರಿಗೆ ಇರುವ ಪಿಂಚಣಿಗೆ ತುಟ್ಟಿಭತ್ಯೆ ಇಲ್ಲದ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ದೇಶದ ಕೋಟ್ಯಂತರ ಪಿಂಚಣಿದಾರರ ದುರಾದೃಷ್ಟ ಹಾಗೂ ದೇಶದ ಆರ್ಥಿಕ ತಜ್ಞರೇನಿಸಿಕೊಂಡವರ ವಿಫಲತೆ ಎದ್ದು ಕಾಣುತ್ತಿದೆ.

ಅಷ್ಟೇ ಅಲ್ಲ ಇದು ಈ ದೇಶದ ಭ್ರಷ್ಟತೆಗೆ ಹಿಡಿದ ಕೈಗನ್ನಡಿಯಂತೆ. ಈ ದೇಶದ ರಾಜಕಾರಣಿಗಳಿಗೆ ಅವರು ಶಾಸಕ ಹಾಗೂ ಸಂಸದ ಆದಷ್ಟೂ ಸಲ ಯಾವುದೇ ವಂತಿಗೆ ತೊಡಗಿಸದೆ ಪ್ರತಿ ತಿಂಗಳೂ ಪಿಂಚಣಿಯಾಗಿ ಜೀವನ ಪೂರ್ತಿ ಲಕ್ಷ ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ.

ಬಡತನವಿದ್ದರೂ ಲಕ್ಷ ಲಕ್ಷ ಖರ್ಚು ಮಾಡಿ ಸಾಲ ಮಾಡಿ ಇದ್ದಬದ್ದ ಆಸ್ತಿ ಮಾರಿಕೊಂಡು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಷ್ಟಪಟ್ಟು ಇಂಜಿನಿಯರಿಂಗ್ ಮೆಡಿಕಲ್ ಓದಿ ನೌಕರಿಗೆ ಸೇರಿದರೆ ಅಂಥವರಿಗೂ ಸಂಬಳ ಸಿಗದಷ್ಟು ಪಿಂಚಣಿ ಈ ರಾಜಕಾರಣಿಗಳು ಪಡೆಯುತ್ತಿದ್ದು ಅಲ್ಲದೇ ರಾಜಕಾರಣಿಗಳ್ಯಾರೂ ಸರಕಾರಿ ನೌಕರರಲ್ಲ, ಅವರೆಲ್ಲ ಜನ ಸೇವೆಗಾಗಿ ಸ್ವಯಂ ಘೋಷಣೆ ಮಾಡಿಕೊಂಡು ಬಂದವರು (ಎಷ್ಟೋ ಜನ ರಾಜಕಾರಣಿಗಳು ಅರೆ ಶಿಕ್ಷಣ ಪಡೆದವರಿದ್ದಾರೂ )ಆಗಿದ್ದರೂ ಅವರು ತಮ್ಮ ಪಿಂಚಣಿ ಯನ್ನು ಮನಸೋ ಇಚ್ಛೆ ಯಾವುದೇ ಅಡೆತಡೆ ಇಲ್ಲದೇ ಅವಧಿಗೊಮ್ಮೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಆದರೆ ದೇಶದ ಕೋಟ್ಯಂತರ ಕಾರ್ಮಿಕರಿಗೆ ಅವರದೇ ಹಣದಿಂದ ಅತ್ಯಂತ ದಯನೀಯವಾದ ಇಬ್ಬರು ವೃದ್ಧ ದಂಪತಿಗಳ ಚಹಾ ತಿಂಡಿಗೂ ಸಾಲದಂತಹ ಪೆನ್ಷನ್ ನೀಡಲಾಗುತ್ತಿದೆ. ಇದು ಸ್ವತಂತ್ರ ಭಾರತದ ಸರಕಾರಗಳ EPFO ದ ಕರಾಳ ಮುಖವಾಡವನ್ನು ಎತ್ತಿ ತೋರಿಸುವಂತಿದೆ. ಒಂದು ರೀತಿಯಲ್ಲಿ EPFO ಪಿಂಚಣಿದಾರನ ಹೆಣದ ಮೇಲಿನ ಹಣ ಸಂಗ್ರಹಿಸಿ ಸರಕಾರಗಳ ಮೆಚ್ಚುಗೆ ಪಡೆಯಲು ತನ್ನ ಅಂಕಿತದಲ್ಲಿಟ್ಟುಕೊಳ್ಳಲು ಸರಕಾರದ ಇತರೇ ಯೋಜನೆಗಳಿಗೆ ಈ ಹಣ ಇದುವರೆಗೆ ನೀಡಿದೆ.

ಈ ಅನ್ಯಾಯವನ್ನು ಹೈಕೋರ್ಟ್ ಸುಪ್ರೀಂಕೋರ್ಟುಗಳಲ್ಲಿ ವ್ಯಾಜ್ಯ ಹೂಡಿ 4/11/2022 ರಂದು ಸುಪ್ರೀಂಕೋರ್ಟ್ ತೀರ್ಪು ಬಂದು ಆರು ತಿಂಗಳೊಳಗೆ ಹೈಯರ್ ಪೆನ್ಷನ್ ಜಾರಿಯಾಗಬೇಕೆಂದು ಇದ್ದರೂ ಭಂಡ EPFO ಮತ್ತು ದೇಶದ ಕಾರ್ಮಿಕರ ಕುರಿತು ಮೊಸಳೆ ಕಣ್ಣೀರು ಹಾಕುತ್ತ ಪದೇಪದೇ ಸುಳ್ಳು ಭರವಸೆ ಕೊಡುತ್ತ ಸರಕಾರ ನ್ಯಾಯಾಂಗದ ಗೌರವ ಎತ್ತಿ ಹಿಡಿಯದೇ ದೇಶದ ಕಾರ್ಮಿಕರನ್ನು ನಿರಂತರವಾಗಿ ವಂಚಿಸುತ್ತಿದೆ.

ಇದೇ ಕಾರಣಕ್ಕಾಗಿ ರಾಷ್ಟ್ರೀಯ ಸಂಘರ್ಷ ಸಮಿತಿ NAC ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ದೇಶಾದ್ಯಂತ 27 ರಾಜ್ಯಗಳಲ್ಲಿ ಹಾಗೂ 4 ಟೆರಿಟೆರಿಗಳಲ್ಲಿ ಸಂಘಟನೆ ಮಾಡಿಕೊಂಡು ಮಹಾರಾಷ್ಟ್ರದ ಬುಲ್ದಾಣ ಜಿಲ್ಲಾ ಸ್ಥಳದಲ್ಲಿ ನಿರಂತರವಾಗಿ 2185 ದಿನಗಳಿಂದಲೂ ಸರತಿ ಉಪವಾಸ ಸತ್ಯಾಗ್ರಹವನ್ನೂ ಮಾಡುತ್ತ ತೀವ್ರ ಹೋರಾಟ ನಡೆಸುತ್ತಿದೆ.

ಈ ಹೋರಾಟದ 8-10 ವರ್ಷಗಳಲ್ಲಿ ದಿನಕ್ಕೆ ಸರಾಸರಿ 250 ಜನರಂತೆ ಸುಮಾರು 10 ಲಕ್ಷ ಈ eps 95 ಪಿಂಚಣಿದಾರರು ಪಿಂಚಣಿ ಹೆಚ್ಚಳ ನಿರೀಕ್ಷೆಯಲ್ಲಿ ವೃದ್ದಾಪ್ಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮರಣ ಹೊಂದಿದ್ದಾರೆ ಹೊಂದುತ್ತಿದ್ದಾರೆ. ಸರಕಾರ ಮತ್ತು EPFO ಈ ವೃದ್ಧರನ್ನು ರಕ್ಷಿಸುತ್ತದೋ, ಅಥವಾ ಸುಳ್ಳು ಆಶ್ವಾಸನೆ ಕೊಟ್ಟು ವಿಳಂಬ ನೀತಿ ಅನುಸರಿಸಿ ಹೀಗೇ ಸಾಯಲಿ ಎಂದು ಬಯಸುತ್ತದೋ ಕಾಲವೇ ಉತ್ತರಿಸಬೇಕಾಗಿದೆ ಎಂದು NAC ಕರ್ನಾಟಕ ಉಪಾಧ್ಯಕ್ಷ ವೀರಕುಮಾರ ಕೃ. ಗಡಾದ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಸಲುವಾಗಿ ಇಳಕಲ್‌ನಲ್ಲಿ ಡಿ.31ರಂದು ಸಮಾವೇಶ ಹಮ್ಮಿಕೊಂಡಿದ್ದು, ಸುತ್ತಮುತ್ತಲಿನ ಎಲ್ಲ EPS-95 ಪಿಂಚಣಿದಾರರು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಇಳಕಲ್‌ನ ಚಿತ್ತರಗಿ ಶ್ರೀ ವಿಜಯಮಹಾಂತೇಶ ಸ್ವಾಮಿಗಳ ಸಾನ್ನಿಧ್ಯದಲ್ಲಿ ಅವರ ಆಶೀರ್ವಚನ ಪಡೆಯಲು ಎಲ್ಲ ಬನ್ನಿ ಎಂದು NAC ರಾಷ್ಟ್ರೀಯ ಸಂಚಾಲಕ ರಮಾಕಾಂತ್ ನರಗುಂದ್ ವಿನಂತಿಸಿದ್ದಾರೆ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್