ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್ ಕೊಡಬೇಕು ಎಂದರೆ ಹೋರಾಟ ಮಾಡುವುದು ನೌಕರರು. ಅದಕ್ಕೆ ಕರೆ ಕೊಡುವುದು ಮನ ಮರ್ಯಾದೆ ಇಲ್ಲದ ಕೆಲ ಸಂಘಟನೆಗಳ ಮುಂಖಡರು. ಈ ಮುಷ್ಕರಕ್ಕೆ ಬರುವ ನೌಕರರನ್ನು ಅಮಾನತು, ವಜಾ, ಪೊಲೀಸ್ ಕೇಸ್, ವರ್ಗಾವಣೆ ಹೀಗೆ ಶಿಕ್ಷೆ ಕೊಡುವವರು ನಾಚಿಕೆ, ಮಾನ, ಮರ್ಯಾದೆ ಈ ಮೂರನ್ನು ಬಿಟ್ಟಿರುವ ಅಧಿಕಾರಿಗಳು.
ಅಂದರೆ ವೇತನ ಹೆಚ್ಚಳ ಬಳಿಕ ಅಧಿಕಾರಿಗಳು ವೇತನ ಹೆಚ್ಚಳದ ಲಾಭವನ್ನು ನೌಕರರ ಜತೆಜತೆಗೆ ಪಡೆಯುತ್ತಾರೆ. ಜತೆಗೆ ಆ ಹೆಚ್ಚಳದ ಅರಿಯರ್ಸ್ ಕೂಡ ಈ ಅಧಿಕಾರಿಗಳಿಗೆ ಬೇಕು. ಆದರೆ ಇದಕ್ಕಾಗಿ ಹೋರಾಡಿದ ನೌಕರರಿಗೆ ಈ ಅಧಿಕಾರಿಗಳೇ ತಮ್ಮ ಸರ್ಕಾರ ಅಥವಾ ಸಚಿವರ ಮುಂದೆ ಒಳ್ಳೆಯವರು ಎಂದು ತೋರಿಸಿಕೊಳ್ಳಲು ಶಿಕ್ಷೆ ನೀಡಿ ಅದನ್ನು ಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಾರೆ. ಇವರ ಜತೆಗೆ ನಮ್ಮ ಹೋರಾಟದಿಂದಲೇ ವೇತನ ಹೆಚ್ಚಳವಾಯಿತು ಎಂದು ಹಾರ ತುರಾಯಿ ಹಾಕುವ ಸಂಘಟನೆಗಳ ಮುಖಂಡರು ಒಂದುಕಡೆ ಬೀಗುತ್ತಾರೆ.
ಇನ್ನು ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳನ್ನು ಕಳೆದ 40 ವರ್ಷಗಳಿಂದ ಈವರೆಗೂ ವೇತನ ಹೆಚ್ಚಳ ಸಂಬಂಧ ಈ ನಾಲಾಯಕ್ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿ ಎಂದು ಕರೆದೇ ಇಲ್ಲ. ಆದರೆ ನೌಕರರನ್ನು ಕಾರ್ಮಿಕರು ಎಂದು ಬಿಂಬಿಸಿ ಡಿಪೋ ಡಿಫೋಗಳಿಗೆ ಹೋಗಿ ಬೆಂಬಲಕ್ಕೆ ಒತ್ತಾಯಮಾಡುತ್ತವೆ. ಮುಷ್ಕರ ಮಾಡಿಸಿ ಅದು ಒಂದು ಹಂತ ತಲುಪಿದ ಬಳಿಕ ನೌಕರರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಈ ಮುಖಂಡರು ನಡೆದುಕೊಳ್ಳುತ್ತಾರೆ.
ಹೌದು! ಮುಷ್ಕರ ನಡೆದ ಬಳಿಕ ಕೆಲ ನೌಕರರ ವಿರುದ್ಧ ಆಗುತ್ತದೆಯಲ್ಲ ಅಮಾನತು, ವಜಾ, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣಗಳು. ಆ ಬಗ್ಗೆ ಹೋರಾಟ ಮಾಡಿದ್ದಾವೆಯೇ ಈ ಸಂಘಟನೆಗಳು. ಇಲ್ಲ ಪಾಪ ಮುಷ್ಕರಕ್ಕೆ ಬಂದ ನೂರಾರು ನೌಕರರು ಈ ಎಲ್ಲ ಪ್ರಕರಣಗಲ್ಲಿ ಸಿಲುಕಿ ಡ್ಯೂಟಿಯೂ ಇಲ್ಲದೆ ಮಾನಸಿಕ ಯಾತನೆ ಅನುಭವಿಸುತ್ತಾರೆ. ಈ ಹಿಂದೆ ನಡೆದ ಮುಷ್ಕರಗಳಲ್ಲೂ ಆಗಿರುವ ಪ್ರಕರಣಗಳಿಂದ ಈಗಲೂ ನೂರಾರು ನೌಕರರು ಕೋರ್ಟ್‌ಗೆ ಅಲೆಯುತ್ತಿದ್ದಾರೆ.
ಈ ಬಗ್ಗೆ ಯಾವುದೇ ಗಮನವಿಲ್ಲ. ಈ ಸಂಘಟನೆಗಳ ಮುಖಂಡೆರೆನಿಸಿಕೊಂಡವರು ನೌಕರರನ್ನು ಮಾತ್ರ ಮುಷ್ಕರಕ್ಕೆ ಬನ್ನಿ ಎಂದು ಕರೆದು ಬಳಿಕ ಹರಕೆಯ ಕುರಿ ಮಾಡಿ ಹೋಗುತ್ತಿರುವುದಕ್ಕೆ ಇವರಿಗೆ ನಾಚಿಕೆ ಆಗಬೇಕು. ಜತೆಗೆ ಅಧಿಕಾರಿಗಳು ಇಲ್ಲದ ಮುಷ್ಕರ ನೌಕರರಿಗೆ ಏಕೆ ಬೇಕು. ಈ ಮುಷ್ಕರದಿಂದ ನೌಕರರಿಗಷ್ಟೇ ಲಾಭವಾಗುತ್ತದೆ ಎಂದರೆ ಓಕೆ. ಆದರೆ ಇದರ ಲಾಭವನ್ನು ಹೆಚ್ಚಾಗಿ ಪಡೆದುಕೊಳ್ಳುವವರು ಅಧಿಕಾರಿಗಳು ಅಂದಮೇಲೆ ಅವರೆ ಬರದ ಮುಷ್ಕರ ನೌಕರರಿಗೆ ಬೇಕಾ?
ಇನ್ನು ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳುತ್ತಾರೆ ಈವರೆಗೂ ಅಧಿಕಾರಿಗಳು ಮುಷ್ಕರಕ್ಕೆ ಬಂದಿಲ್ಲ ಎಂದು. ಆದರೆ ವೇತನ ಹೆಚ್ಚಳವಾದಾಗ ಹೆಚ್ಚಿಗೆ ಪಗಾರ ತೆಗೆದುಕೊಳ್ಳುವವರು ಯಾರು? ಅಧಿಕಾರಿಗಳು ತಾನೆ. ಅವರೇಕೆ ಮುಷ್ಕರಕ್ಕೆ ಬರಲ್ಲ ಎನ್ನುತ್ತಾರೆ. ನೀವು ಹೋಗಿ ಅವರನ್ನು ಯಾವತ್ತಾದರೂ ನಿಮ್ಮ ವೇತನ ಹೆಚ್ಚಳಕ್ಕಾಗಿ ನಾವು ಮುಷ್ಕರ ಮಾಡಬೇಕು ಎಂದುಕೊಂಡಿದ್ದೇವೆ ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದು ಕೇಳಿದ್ದೀರಾ? ಇಲ್ಲ ಅಂದಮೇಲೆ ಅಧಿಕಾರಿಗಳು ಹೇಗೆ ಮುಷ್ಕರಕ್ಕೆ ಬರುತ್ತಾರೆ ಹೇಳಿ?
ಈಗ ಅಧಿಕಾರಿಗಳು ಕೂಡ ವೇತನ ಹೆಚ್ಚಳ ಮಾಡಬೇಕು. ಅದೂ ಕೂಡ 7ನೇ ವೇತನ ಆಯೋಗದಂತೆ ವೇತನ ಕೊಡಿ ಎಂದು ಸರ್ಕಾರಕ್ಕೆ ಹಾಗೂ ಆಡಳಿತ ಮಂಡಳಿಗಳಿಗೆ ಮನವಿ ಕೊಟ್ಟಿದ್ದಾರೆ. ಕಳೆದ 40 ವರ್ಷಗಳಿಂದ ಕೊಡದ ಅಧಿಕಾರಿಗಳು ಈ ಬಾರಿ ಕೊಟ್ಟಿದ್ದಾರೆ ಎಂದಮೇಲೆ ತಾವು ಅವರನ್ನು ಮುಷ್ಕರಕ್ಕೆ ಬೆಂಬಲ ನೀಡಿ ಎಂದು ಕರೆಯಬೇಕಿತ್ತಲ್ಲವೇ ಏಕೆ ಕರೆದಿಲ್ಲ?
ಏಕೆಂದರೆ ಅವರು ಮುಷ್ಕರಕ್ಕೆ ಬೆಂಬಲ ನೀಡಿದರೆ ನೌಕರರ ಅಮಾನತತು, ವಜಾ, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣ ದಾಖಲಿಸುವವರು ಯಾರು ಇರಲ್ಲ ಎಂದು ತಾನೆ ?ನೀವು ಅಧಿಕಾರಿಗಳ ಬಿಟ್ಟು ಬರಿ ನೌಕರರನ್ನು ಮಾತ್ರ ಮುಷ್ಕರಕ್ಕೆ ಬೆಂಬಲ ನೀಡಿ ಎಂದು ಕರೆಯುತ್ತಿರುವುದು?
ಈ ದೊಂಬ್ಬರಾಟವನ್ನು ಬಿಟ್ಟು ತಾವುಗಳ ನಿಜವಾಗಲು ನೌಕರರ ಪರ ಹೋರಾಟ ಮಾಡಬೇಕು ಎಂದುಕೊಂಡಿದ್ದರೆ ಅಧಿಕಾರಿಗಳನ್ನು ಜತೆಗೆ ಕರೆದುಕೊಂಡು ಮುಷ್ಕರ ಮಾಡಿ. ಏಕೆಂದರೆ ಇಲ್ಲಿ ಅಧಿಕಾರಿಗಳು/ನೌಕರರು ಇಬ್ಬರಿಗೂ ವೇತನ ಹೆಚ್ಚಳವಾಗಬೇಕು ಬರಿ ನೌಕರರಿಗಷ್ಟೇ ವೇತನ ಹೆಚ್ಚಳವಾಗುವುದಿಲ್ಲ. ಹೀಗಾಗಿ ಮೊದಲು ನೌಕರರನ್ನು ಹರಕೆ ಕುರಿ ಮಾಡುವುದನ್ನು ಬಿಟ್ಟು ಅಧಿಕಾರಿಗಳು/ನೌಕರರು ಒಗ್ಗಟ್ಟಿನಿಂದ ಮುಷ್ಕರ ಮಾಡೋಣ ಬನ್ನಿ ಎಂದು ಸಂಘಟನೆಗಳ ಮುಖಂಡರು ಕರೆ ನೀಡಬೇಕು.
ಒಂದು ವೇಳೆ ಬರಿ ನೌಕರರಿಗಷ್ಟೇ ಮುಷ್ಕರಕ್ಕೆ ಬನ್ನಿ ಎಂದು ಕರೆಯುವ ಸಂಘಟನೆಗಳ ಪರವಾಗಿ ನೌಕರರು ಬೀದಿಗಿಳಿದರೆ ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದವರು ಭಿಕ್ಷೆ ಬೇಡಲು ಬೀದಿಗೆ ಬರಬೇಕಾಗುತ್ತಿದೆ ಎಚ್ಚರ. ಈ ಬಗ್ಗೆ ಅರಿತು ಮುಂದಿನ ಹೆಜ್ಜೆಹಾಕಿ. ಈಗಾಗಲೇ 3-4 ದಶಕಗಳಿಂದಲು ನೌಕರರು ಮಷ್ಕರ ಮಾಡಿ ಬೀದಿಗೆ ಬಂದಿರುವ ಪ್ರಕರಣಗಳು ಇರುವುದನ್ನು ಕಾಣುತ್ತಿದ್ದೇವೆ. ಆದರೆ ಒಬ್ಬೇವೊಬ್ಬ ಅಧಿಕಾರಿ ವೇತನಕ್ಕಾಗಿ ಹೋರಾಡಿ ಕೆಲಸ ಕಳೆದುಕೊಂಡಿರುವ ನಿದರ್ಶನ ನಮ್ಮ ಮುಂದೆ ಇದೆಯೇ ಇಲ್ಲ. ಈ ಪುರುಷಾರ್ಥಕ್ಕಾಗಿ ನೌಕರರು ಮುಷ್ಕರ ಮಾಡಬೇಕಾ?
ಇದೆಲ್ಲವನ್ನು ಬಿಟ್ಟು ಈಗಾಗಲೇ ಅಧಿಕಾರಿಗಳು ಕೂಡ ವೇತನ ಹೆಚ್ಚಳಕ್ಕಾಗಿ ಮನವಿ ಮಾಡಿದ್ದು ಅವರು ಮತ್ತು ನೌಕರರ ನಿಜವಾದ ಸಂಘಟನೆಗಳು ಅಂದರೆ ಕಾರ್ಮಿಕರು ಎಂದು ಕರೆಯುವ ಈ ಕಾರ್ಮಿಕ ಪದ್ಧತಿಯ ಸಂಘಟನೆಗಳ ಬಿಟ್ಟು ಕರೆ ನೀಡುವ ನೌಕರರ ಪರ ಸಂಘಟನೆಗಳ ಮುಷ್ಕರಕ್ಕೆ ಅದೂ ಅಧಿಕಾರಿಗಳು/ ನೌಕರರು ಒಟ್ಟಿಗೆ ಮುಷ್ಕರ ಮಾಡುವವರಿಗೆ ನೌಕರರು ಬೆಂಬಲ ಕೊಟ್ಟರೆ ಈ ಅಮಾನತು, ವಾಜಾ, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣದಿಂದ ಮುಕ್ತರಾಗಿ ನಿಮ್ಮ ಸೌಲಭ್ಯಪಡೆದುಕೊಂಡು ನಿರಾಳರಾಗಿ ಡ್ಯೂಟಿ ಮಾಡುವಂತ ವಾತಾವರಣಕ್ಕೆ ಬೆಂಬಲ ನೀಡಬೇಕು ಎಂಬುವುದು ನಮ್ಮ ಕಳಕಳಿ ಎಂದು ಪ್ರಜ್ಞಾವಂತ ನೌಕರರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Related
You Might Also Like
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋಣ
ಬೆಂಗಳೂರು: ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬಂದು ಉದ್ಭವವಾಗುವ ಈ ಮಹಾನುಭಾವ ತಮ್ಮ ಸ್ವಾರ್ಥ ಹಾಗೂ ಆರ್ಥಿಕವಾಗಿ ಸಬಲರಾಗಲು ಸರ್ಕಾರದ ಹಾಗೂ ಸಾರಿಗೆ ನಿಗಮದ ಆಡಳಿತ ಮಂಡಳಿಯ ಮುಂದೆ...
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳು- ಸಚಿವರಿಂದ ಲೋಕಾರ್ಪಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳಿಗೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಸಚಿವರಾದ ರಾಮಲಿಂಗರೆಡ್ಡಿ ಮತ್ತು...
KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ
ಬೆಂಗಳೂರು: ಶಕ್ತಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ತಮ್ಮ ಪ್ರತಿಯೊಂದು ಸುಳ್ಳಿನ ಸರಮಾಲೆಯ ಟ್ಟೀಟ್ಗೂ ನಾವು...
ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್
ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಅಡುಗೆ ಅನಿಲ ಸ್ಫೋಟದಿಂದ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಇಂದು ಗೃಹ...
BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಕಳೆದ ಬಾರಿ ಮಳೆಯಿಂದಾದ ಅನಾಹುತಗಳು ಮತ್ತೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಯಲಹಂಕ ವಲಯದ ಟಾಟಾನ ಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು...
ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್ ಸಮಾವೇಶ
ಬಾಗಲಕೋಟೆ: ರಾಷ್ಟ್ರೀಯ ಸಂಘರ್ಷ ಸಮಿತಿಯ NACಯ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಒದೇ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್...
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ
ಸರ್ಕಾರ ರೈತರ ಪರವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್....
KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..!
ಪಾಪಾ ಸಂಬಳ ಸಾಲುತ್ತಿಲ್ಲವಂತೆ ಅದಕ್ಕೆ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಟಿಸಿಗಳ ಕಾಲು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಪಾಪಿಗಳು ನಾಚಿಕೆ ಬಿಟ್ಟು ಟಿಸಿಗಳ ಸುಲಿಗೆ ಮಾಡುವ ಇಂಥ ನಾಲಾಯಕ್...
ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ವ್ಯಾಪ್ತಿಯ ವಿವಿಧ ವಿಷಯಗಳಿಗೆ...
ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ
ನ್ಯೂಡೆಲ್ಲಿ: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿಯ ನಿಯೋಗದೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ...
ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯುವ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ...
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರಿಗೆ 34100 ರೂಪಾಯಿ ಸಂಚಿತ ವೇತನ ನಿಗದಿ ಮಾಡಿರುವ ಸರ್ಕಾರ ಕಳೆದ ನವೆಂಬರ್ 1ರಿಂದಲೇ...