Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳಿಗೆ ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗ ಸಚಿವರಾದ ರಾಮಲಿಂಗರೆಡ್ಡಿ ಮತ್ತು ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್​ಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎರಡು ತಿಂಗಳ ಮುಂಚೆ ವೋಲ್ವೋ 20 ಬಸ್​ಗಳಿಗೆ ಚಾಲನೆ ನೀಡಲಾಗಿತ್ತು. ಅಂಬಾರಿ ಉತ್ಸವ ಸ್ಲೀಪರ್​ ಬಸ್​ಗಳಿಗೆ ಇವತ್ತು ಚಾಲನೆ ನೀಡಿದ್ದೇವೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹಾಗೂ ಅಂತಾರಾಜ್ಯಗಳಿಗೆ ಈ ಬಸ್​ಗಳು ಸಂಚಾರ ಮಾಡುತ್ತವೆ ಎಂದು ತಿಳಿಸಿದರು.

9 ಸಾವಿರ ನೌಕರರ ನೇಮಕಕ್ಕೆ ಸರ್ಕಾರ ಅನುಮತಿ ಕೊಟ್ಟಿತ್ತು. ಅದರಲ್ಲಿ ಈಗಾಗಲೇ ನಾಲ್ಕೂ ನಿಗಮಗಳಿಗೆ ನೇಮಕ ಆದವರಿಗೆ ನೇಮಕಾತಿ ಪತ್ರ ಕೊಡುತ್ತಿದ್ದೇವೆ. ಎಲ್ಲ ನೇಮಕಗಳನ್ನು ಪಾರದರ್ಶಕವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಇನ್ನು 750 ವಿದ್ಯುತ್​ ಚಾಲಿತ ಬಸ್​ಗಳಿಗೆ ಕ್ಯಾಬಿನೆಟ್ ಅನುಮತಿ ನೀಡಿದೆ. ಅವು ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಭಾಗಗಳಲ್ಲಿ ಓಡಾಟ ನಡೆಸಲಿವೆ. ಟೆಂಡರ್​ನಲ್ಲಿ ಭಾಗಿಯಾದ ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಅದೇ ರೀತಿ ನಮಗೂ ಕೇಂದ್ರ ಸರ್ಕಾರ ಸಬ್ಸಿಡಿ ನೀಡಿದರೇ ಇನ್ನಷ್ಟು ಬಸ್​ಗಳನ್ನು ರಸ್ತೆಗಿಳಿಸುತ್ತೇವೆ ಎಂದರು.

ಅಂಬಾರಿ ಉತ್ಸವ ಸೀಪ್ಲರ್ ವಿಶೇಷತೆ ಏನು?: ಅಂಬಾರಿ ಉತ್ಸವ ಸೀಪ್ಲರ್ ಬಸ್​ಗಳು 15 ಮೀಟರ್ ಉದ್ದವಿದ್ದು, 40 ಬರ್ತ್ 2×1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಇದು ಶಕ್ತಿಯುತ ಹಾಲೋಜನ್ ಹೆಡ್​ಲೈಟ್‌ಗಳು ಮತ್ತು ಬೆಳಿಗನ ಸಮಯದಲ್ಲಿ ರನ್ನಿಂಗ್ ಲೈಟ್ ಗಳನ್ನು (DRL) ಹೊಂದಿವೆ.

ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎರಿಯರ್ಸ್ ಹೊಂದಿವೆ. ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್​ ಅನ್ನು ನೀಡುತ್ತದೆ. ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತವೆ.

ಬಸ್ ಮುಂಭಾಗದ ಗಾಜು 9.5% ಅಗಲವಾಗಿದೆ. ಯುಎಸ್‌ಬಿ ಮತ್ತು C-ಟೈಪ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಲಾಗಿದೆ. ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ರಾತ್ರಿ ವೇಳೆ ಚಾಲನೆ ಮಾಡುವಾಗ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್ಗಳ ಅಳವಡಿಸಲಾಗಿದೆ. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್ಚುಗಳನ್ನು ಹೊಂದಿವೆ.

ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿದೆ. ಚಾಲಕರು, ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾಗಿದೆ.

ಎಲ್ಲೆಲ್ಲಿ ಸಂಚಾರ ಮಾಡಲಿವೆ?: ಕುಂದಾಪುರ-ಬೆಂಗಳೂರು ಮಧ್ಯೆ 2 ಬಸ್​ಗಳು ಸಂಚರಿಸುತ್ತವೆ. ಮಂಗಳೂರು-ಬೆಂಗಳೂರು ಮಧ್ಯೆ 2 ಬಸ್​ಗಳು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ-ಕುಂದಾಪುರ ನಡುವೆ 2 ಬಸ್​ಗಳು. ಬೆಂಗಳೂರು-ನೆಲ್ಲೂರು ನಡುವೆ 2 ಬಸ್​ಗಳು.

ಬೆಂಗಳೂರು-ಹೈದಾರಬಾದ್ ನಡುವೆ 2 ಬಸ್​ಗಳು. ಬೆಂಗಳೂರು-ವಿಜಯವಾಡ ನಡುವೆ 4 ಬಸ್​ಗಳು. ಬೆಂಗಳೂರು-ಎರ್ನಾಕುಲಂ ನಡುವೆ 2 ಬಸ್​ಗಳು. ಬೆಂಗಳೂರು-ತ್ರಿಶೂರು ನಡುವೆ 2 ಬಸ್​ಗಳು. ಬೆಂಗಳೂರು-ಕಲ್ಲಿಕೋಟೆ ನಡುವೆ 2 ಬಸ್​ಗಳು ಸಂಚರಿಸಲಿವೆ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್