KSRTC: 2006ರಲ್ಲಿ ಡ್ಯೂಟಿಗೆ ಸೇರಿ ಹಲವರು ನಿವೃತ್ತರಾಗುತ್ತಿದ್ದಾರೆ- ಅಚ್ಚರಿ ಎಂದರೆ ಬೇಸಿಕ್ ಪೇ 27 ಸಾವಿರ ದಾಟಲೇ ಇಲ್ಲಆದರೆ..!

- ಸರ್ಕಾರಿ ಡಿ ಗ್ರೂಪ್ ನೌಕರರ ಮೂಲ ವೇತನ ಸೇರಿದ ಕೂಡಲೇ 27 ಸಾವಿರ ಬೇಸಿಕ್ ಪೇ
- ನಮ್ಮ ಈ ದುರಂತ ಕತೆಗೆ ನಾಯಕರು ಯಾರು? ಜಂಟಿ ಸಂಘಟನೆಗಳ ನಾಯಕರೆ ಉತ್ತರಿಸುವಿರಾ?
ಬೆಂಗಳೂರು: ಸರ್ಕಾರದ ಅಧಿನದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ 2006ರಲ್ಲಿ ಸೇರಿದ ಮಾಜಿ ಯೋಧರು, ನೌಕರರು ಹಲವಾರು ಕಾರಣಗಳಿಂದ ಇವತ್ತಿನ ದಿನಗಳಲ್ಲಿ ನಿವೃತ್ತಿ ಹೊಂದಿದ್ದಾರೆ ಹಾಗೂ ಹೊಂದುತ್ತಿದ್ದಾರೆ. ಅವರು 2006 ರಿಂದ 31/05/2025 ವರೆಗೆ ಸೇವೆ ಸಲ್ಲಿಸಿದ್ದರು ಸಹ ಅವರ ಬೇಸಿಕ್ ಪೇ 27 ಸಾವಿರ ರೂಪಾಯಿ ಸಹ ತಲುಪಲಿಲ್ಲ.
ಆದರೆ ವಿಪರ್ಯಾಸದ ಸಂಗತಿ ಏನೆಂದರೆ ಸರಕಾರದ ಏಳನೇ ವೇತನದ ಆಯೋಗದ ಪ್ರಕಾರ ಸರ್ಕಾರಿ ನೌಕರನ ಮೊದಲನೆಯ ಬೇಸಿಕ್ ಪೇ 27 ಸಾವಿರ ರೂಪಾಯಿ ಇದೆ. ಹಾಗೆ ಸಾರಿಗೆ ಸಂಸ್ಥೆಯಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಸಹ 27 ಸಾವಿರ ರೂಪಾಯಿ ಬೇಸಿಕ್ ಪೇ ತಲುಪಲಿಲ್ಲ. ಇದಕ್ಕೆ ಯಾರು ಕಾರಣಕರ್ತರು?
ಇದು ನಮ್ಮ ನಾಯಕರ ಗಮನಕ್ಕೆ ಏಕೆ ಬರುತ್ತಿಲ್ಲ? ನಮ್ಮ ಸಾರಿಗೆ ಸಂಸ್ಥೆಯಲ್ಲಿರುವ ನಮ್ಮ ಮಹಾನ್ ನಾಯಕರು ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇವತ್ತಿನ ದಿನಗಳಲ್ಲಿಯೂ ಸಹ ಸಾರಿಗೆ ನೌಕರರ ವೇತನ ಸರ್ಕಾರಿ ನೌಕರನಗಿಂತ ಹೆಚ್ಚು ಕಡಿಮೆ 50% ಕಡಿಮೆ ವೇತನ ಇದೆ.
ಆದರೆ, ನಮ್ಮ ಮಹಾನ್ ನಾಯಕರು ಇವತ್ತಿನ ಅಗ್ರಿಮೆಂಟ್ ವಿಷಯಕ್ಕೆ ಸಂಬಂಧಿಸಿದಂತೆ 1/1/2024ರಿಂದ ಮತ್ತೆ 25% ಡಿಮಾಂಡ್ ಏಕೆ ಇಟ್ಟಿದ್ದಾರೆ? ಇದು ಎಷ್ಟು ಸರಿ? ನಮ್ಮ ರಾಜ್ಯ ಸರ್ಕಾರವೇ ಇವತ್ತಿನ ದಿನಗಳಲ್ಲಿ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವುದಾಗಿ ಹೇಳುತ್ತಿರುವಾಗ ನಮ್ಮ ಮಹಾನ್ ನಾಯಕರು ಏಕೆ ತಿರಸ್ಕಾರ ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಜಂಟಿ ಸಂಘಟನೆಗಳ ನಾಯಕರು ಸಾರಿಗೆ ಸಂಸ್ಥೆಯ ನೌಕರರಿಗೆ ಸ್ಪಷ್ಟೀಕರಣ ಕೊಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಇನ್ನು ಈಗಲೂ ನಮಗೆ ಒಬ್ಬ ಡಿ ಗ್ರೂಪ್ ನೌಕರನಿಗೆ ಸಿಗುವ ಬೇಸಿಕ್ ಪೇ ಅಂದರೆ 27 ಸಾವಿರ ರೂಪಾಯಿ 23ವರ್ಷ ಸೇವೆ ಸಲ್ಲಿಸಿದರೂ ಪಡೆಯಲಾಗುತ್ತಿಲ್ಲ. ಇದರ ನಡುವೆ ಅಡುಗೋಲಜ್ಜಿ ಕಥೆ ಹೇಳಿಕೊಂಡು ಈಗಲೂ ಬರಿ ಶೇ.25ರಷ್ಟು ವೇತನ ಹೆಚ್ಚಳ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೀರಿ ಎಂದರೆ ನಿಮ್ಮ ಮನಸ್ಥಿತಿಗೆ ನಾವು ಏನನ್ನ ಬೇಕು ನೀವೆ ಹೇಳಿ ಎಂದು ಪ್ರಶ್ನಿಸುತ್ತಿದ್ದಾರೆ.
ಈಗಲಾದರೂ ಬದಲಾಗಿ ಸಾರಿಗೆ ನೌಕರರಿಗೆ ಬರಬೇಕಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ ಈಗಿನ 17 ತಿಂಗಳ ವೇತನ ಹೆಚ್ಚಳವಾಗುವ ಅದರ ಹಿಂಬಾಕಿಯನ್ನು ಕೊಡಿಸುವ ಜತೆಗೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿ ಅದನ್ನು ಬಿಟ್ಟು ಈ ರೀತಿ ಕಥೆ ಕಟ್ಟಿಕೊಂಡು ಕೂರಬೇಡಿ ಈಗಾಗಲೇ ನಾವು ತುಂಬ ನೊಂದಿದ್ದೇವೆ ಬೇಯುತ್ತಿದ್ದೇವೆ.

ಇನ್ನೆಷ್ಟು ನೋಯಿಸುತ್ತೀರಿ.. ಸಾಕು ಇನ್ನಾದರೂ ನಮಗೆ ನೆಮ್ಮದಿಯಿಂದ ಡ್ಯೂಟಿ ಮಾಡುವುದಕ್ಕೆ ಅವಕಾಶವಾಗುವ ರೀತಿಯಲ್ಲಿ ಸರ್ಕಾರದ ಜತೆ ಮತುಕತೆ ನಡೆಸಿ ನಮ್ಮೆಲ್ಲ ನೌಕರರಿಗೆ ಬೆಳಕಾಗಿ. ಅದನ್ನು ಬಿಟ್ಟು ಈ ರೀತಿ ನಡೆದುಕೊಳ್ಳಬೇಡಿ ಇದು ನಮ್ಮ ನೋವಿನ ನುಡಿ ಎಂದು ನೌಕರರು ಮನವಿ ಮಾಡಿದ್ದಾರೆ.
Related


You Might Also Like
ಸಾರಿಗೆ ಬಸ್ಗಳು ಅಪಘಾತವಾದರೆ ಚಾಲಕರಿಗೆ ಡಿಎಂಗಳು ಜಾಮೀನು ಕೊಡಬೇಕು: ಸಿಟಿಎಂ ಆದೇಶ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಅಪಘಾತವಾದ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರು ಚಾಲಕರಿಗೆ ಜಾಮೀನು ನೀಡುವ ವ್ಯವಸ್ಥೆಯನ್ನು ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ಮುಖ್ಯ ಸಂಚಾರ...
ಬದುಕಲಾಗುತ್ತಿಲ್ಲ ದಯಮಾಡಿ ನನಗೆ ವಿಷ ಕೊಡಿ: ನ್ಯಾಯಾಧೀಶರಲ್ಲಿ ನಟ ದರ್ಶನ್ ಮನವಿ
ಬೆಂಗಳೂರು: ದಯಮಾಡಿ ನನಗೆ ವಿಷ ಕೊಡಿ ಎಂದು ನಟ ದರ್ಶನ್ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ಹಾಜರಾದ ವೇಳೆ ಮನವಿ ಮಾಡಿದ್ದಾರೆ....
ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲಪತ್ತೆ: 1.17 ಕೋಟಿ ರೂ.ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ- ಇಬ್ಬರ ವಿರುದ್ಧ FIR ದಾಖಲು
ಯಾದಗಿರಿ: ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಮಾರಾಟ ಮಾಡುತ್ತಿದ್ದ ಅಪ್ಪ ಮಕ್ಕಳಿಗೆ ಸೇರಿದ ಎರಡು ರೈಸ್ ಮಿಲ್ಗಳ ಮೇಲೆ ಆಹಾರ ಪೊರೈಕೆ ಹಾಗೂ ಕಂದಾಯ ಇಲಾಖೆ...
ಜಕ್ಕೂರು ರೈಲ್ವೆ ಮೇಲ್ಸೇತುವೆ 3 ತಿಂಗಳಲ್ಲಿ ಪೂರ್ಣಗೊಳಿಸಿ: ಗುತ್ತಿಗೆದಾರರಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಾಕೀತು
3.5 ಟನ್ ಪ್ಲಾಸ್ಟಿಕ್ ವಶಪಡಿಸಿಕೊಂಡು 1.5 ಲಕ್ಷ ರೂ. ವಿಧಿಸಲಾಗಿದೆ. ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲು...
ಯುವಜನತೆ ಬದುಕಿನ ಶಿಸ್ತಿಗೆ ಕ್ರೀಡೆ ಮುಖ್ಯ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಚಿವ ಮುನಿಯಪ್ಪ ಅಭಿಮತ
ಬೆಂ.ಗ್ರಾಂ.: ಯುವ ಜನತೆ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಶಿಕ್ಷಣದ ಜತೆಗೆ ಕ್ರೀಡೆಯು ಮುಖ್ಯ. ಕ್ರೀಡೆ ಎಂಬುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಮನುಷ್ಯನ ಮಾನಸಿಕ ಹಾಗೂ ಸಾಂಸ್ಕೃತಿಕ...
ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಜಿಲ್ಲೆಯ ಮೊದಲ ಸ್ಥಾನಕ್ಕೆ ಏರಿಸಿ: ಸಚಿವ ಮುನಿಯಪ್ಪ ಕರೆ
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ l ಜಿಲ್ಲೆಯ101 ಪಂಚಾಯಿತಿಗಳಲ್ಲಿ ಮಾದರಿ ಶಾಲೆ l ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ಬೆಂಗಳೂರು ಗ್ರಾಮಾಂತರ: ಮುಂಬರುವ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ...
ಕನಿಷ್ಠ ಪಿಂಚಣಿ 7500 ರೂ. ಪಡೆಯಲು EPS ಪಿಂಚಣಿದಾರರ ನಿರಂತರ ಹೋರಾಟ- 92ನೇ ಮಾಸಿಕ ಸಭೆಯಲ್ಲಿ ಹಲವು ನಿರ್ಧಾರಗಳು
ಬೆಂಗಳೂರು: ಇಪಿಎಸ್ ಪಿಂಚಣಿದಾರರ 92ನೇ ಮಾಸಿಕ ಸಭೆ ಲಾಲ್ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ....
BMTC ಸಂಸ್ಥೆಯಿಂದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಿ: ವ್ಯವಸ್ಥಾಪಕ ನಿರ್ದೇಶಕರಿಗೆ ಟಿಸಿ ಶ್ರೀನಿವಾಸ್ ಮನವಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಈ ಹಿಂದಿನಿಂದಲೂ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವದಂದು ಕೊಡಲಾಗುತ್ತಿತ್ತು ಆದರೆ, ಇತ್ತೀಚೆಗೆ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ...
KKRTC ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 3 ವರ್ಷ ಜೈಲು, 6 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ ಮಹತ್ವದ ತೀರ್ಪು
ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದಲ್ಲಿ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ...