CRIMENEWSನಮ್ಮಜಿಲ್ಲೆ

ಹೆಂಡತಿ, ಮಕ್ಕಳಿದ್ದರೂ ಅಜ್ಜಿಯ ಮೊಮ್ಮಳ ಮೋಹಿಸಿ ಮನೆ ಬಿಟ್ಟು ಬಂದ- ಜೈಲು ಸೇರಿದ ಪ್ರೇಮಿಗಳು

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿ ಜೊತೆ ರಹಸ್ಯವಾಗಿ ಲೈಂಗಿಕ ಕ್ರಿಯೆ ನಡೆಸಿ ಆಕೆಯ ಗರ್ಭಿಣಿ ಮಾಡಿದ ಗೃಹಸ್ಥನ ವಿಷಯ ಊರಿಗೆ ಜನರಿಗೆ ಗೊತ್ತಾದ ಮೇಲೆ ಆಕೆಯೊಂದಿಗೆ ಊರು ಬಿಟ್ಟುಬಂದ. ಬಳಿಕ ಇರಲು ನೆಲೆಯಿಲ್ಲ ತಿನ್ನಲು ಅನ್ನವಿದೆ ಇಬ್ಬರು ಕಳ್ಳಮಾರ್ಗ ಹಿಡಿದರು. ಆ ಪರಿಣಾಮ ಇಂದು ಪೊಲೀಸರ ಅತಿಥಿಯಾಗಿದ್ದಾರೆ.

ಹೌದು! ಇಬ್ಬರ ಲವ್ವಿಡವ್ವಿ ಈ ವಿಷಯ ಎರಡೂ ಕುಟುಂಬಗಳಿಗೆ ತಿಳಿದಾಗ ಇಬ್ಬರೂ ಮನೆ, ಊರು ಬಿಟ್ಟು ಓಡಿಹೋಗಿ ಅಲೆದಾಡುತ್ತಿದ್ದರು. ಹೀಗಾಗಿ ಇಬ್ಬರಿಗೂ ಇರಲು ಸ್ಥಳವಿಲ್ಲದೆ ಪರದಾಡಿದ ಪ್ರೇಮಿಗಳು ಬಳಿಕ ಒಂದು ಮನೆ ಬಾಡಿಗೆಗೆ ಪಡೆದು ಜೀವನ ಆರಂಭಿಸಿದರು. ಆದರೆ ಕೈಯಲ್ಲಿ ಕಾಸಿಲ್ಲದೆ ಏನು ಮಾಡಲು ಸಾಧ್ಯ. ಇತ್ತ ಕೆಲಸವೂ ಇಲ್ಲ ಹೀಗಾಗಿ ಚಿನ್ನಕಳವು ಮಾಡುವುದನ್ನೂ ರೂಡಿಸಿಕೊಂಡರು. ಆ ಪರಿಣಾಮ ಇಂದು ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಗಳಾಗಿದ್ದಾರೆ.

ಈ ಬಂಧಿತರು ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ಅಶ್ವಿನಿ ಮತ್ತು ಗೋವಿಂದರಾಜು ಎಂದು ಗುರುತಿಸಲಾಗಿದೆ.

ಏನಿದು ಘಟನೆ?: ಮೇ 26 ರಂದು, ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಬಳಿ ನಿರ್ಮಾಣ ಹಂತದ ತೋಟದ ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಂಜನಮ್ಮ ಅವರ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ನಂದಿಗಿರಿಧಾಮ ಪೊಲೀಸರು ಅಶ್ವಿನಿ ಮತ್ತು ಗೋವಿಂದರಾಜು ಎಂಬುವರನ್ನು ಬಂಧಿಸಿದ್ದಾರೆ.

ಈ ಮಧ್ಯೆ, ಮದುವೆಯಾಗಿ ಮಕ್ಕಳಿದ್ದರೂ ಸ್ವಂತ ಗ್ರಾಮದಲ್ಲಿ ಪೋಷಕರಿಲ್ಲದ ಮತ್ತು ಅಜ್ಜಿಯ ಆಸರೆಯಲ್ಲಿದ್ದ ಆಕೆಯನ್ನು ಗೋವಿಂದರಾಜು ಮೋಹಿಸಿ ಗರ್ಭಿಣಿ ಮಾಡಿದ್ದ. ಹೀಗಾಗಿ, ವಿಷಯ ಗ್ರಾಮದಾದ್ಯಂತ ತಿಳಿದು, ಅವನು ಗ್ರಾಮವನ್ನೇ ತೊರೆದರು. ಅವರಿಗೆ ವಾಸಿಸಲು ಮನೆ ಇಲ್ಲದ ಕಾರಣ, ಬಾಡಿಗೆ ಮನೆ ಪಡೆಯಲು ಯೋಜಿಸಿದ್ದರು. ಆದರೆ ಅವರ ಬಳಿ ಹಣವಿಲ್ಲದ ಕಾರಣ, ಅವರು ಬೈಕ್ ಕದ್ದರು. ಕದ್ದ ಅದೇ ಬೈಕ್‌ನಲ್ಲಿ ಬಂದು ಮಾಂಗಲ್ಯ ದೋಚಿದ್ದರು ಎನ್ನಲಾಗಿದೆ.

ಇನ್ನು ಅವರು ಸರಕದ್ದು ಕದ್ದು ಪರಾರಿಯಾಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!