BMTC: ಮುಷ್ಕರ ವೇಳೆ ವಜಾಗೊಂಡ ಬಳಿಕ ಮರಳಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರಿಗೆ ವರ್ಗಾವಣೆ ಭಾಗ್ಯ

ಬೆಂಗಳೂರು: 2021ರ ಮುಷ್ಕರ ಅವಧಿಯಲ್ಲಿ ವಜಾಗೊಂಡು ನ್ಯಾಯಾಲಯದ ಆದೇಶದನ್ವಯ “ಮಧ್ಯಂತರ ಆದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರಿಗೆ ಒಂದು ಬಾರಿ ವರ್ಗಾವಣೆಗೊಳಿಸುವ ಅವಕಾಶ ನೀಡಿದ್ದು ಇದೇ ಜೂನ್ 9ರಿಂದ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ಬಿಎಂಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 2021ರ ಮುಷ್ಕರ ಅವಧಿಯಲ್ಲಿ ವಜಾಗೊಂಡು ಮಾನ್ಯ ನ್ಯಾಯಾಲಯದ ಆದೇಶದಂತೆ “ಮಧ್ಯಂತರ ಆದೇಶ”ದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸಿಬ್ಬಂದಿಗಳಿಗೆ ಒಂದು ಬಾರಿ ಅವಕಾಶ ನೀಡಿ ವರ್ಗಾವಣೆಗೊಳಿಸುವ ಸಂಬಂಧ ಖಾಲಿ ಸ್ಥಾನಗಳ ಲಭ್ಯತೆ ಹಾಗೂ ಸಂಸ್ಥೆಯ ಅವಶ್ಯಕತೆಗನುಗುಣವಾಗಿ ಪಾರದರ್ಶಕವಾಗಿ ಆನ್-ಲೈನ್ ಮೂಲಕ ವರ್ಗಾವಣೆಗೊಳಿಸುವ ಸಂಬಂಧ ಈ ಕೆಳಕಂಡ ಮಾರ್ಗಸೂಚಿಗಳನ್ನು ನೀಡಲಾಗಿದೆ.
I. ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು: ಮಧ್ಯಂತರ ಆದೇಶದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗಳು ಮಾತ್ರ. ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. 2. ಪ್ರಸ್ತುತ ಕಾರ್ಯ ಸ್ಥಳದಲ್ಲಿ ವರದಿ ಮಾಡಿಕೊಂಡ ದಿನಾಂಕದಿಂದ ಕನಿಷ್ಠ 01 ವರ್ಷ ಸೇವೆ ಸಲ್ಲಿಸಿರಬೇಕು. 3. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 200 ದಿನಗಳ ವಾಸ್ತವಿಕ ಹಾಜರಾತಿ ಹೊಂದಿರಬೇಕು.
4. ಒಂದು ವರ್ಷದ ಅವದಿಯಲ್ಲಿ ಆರ್.ಎಂ.ಸಿ(RMC)/ఓ.ಆರ್.ಎಂ.ಸಿ(ORMC)/ ಇತರೆ ಗಂಭೀರ. ಅಪರಾದ ಪ್ರಕರಕಣಗಳಲ್ಲಿ ಭಾಗಿಯಾಗಿರಬಾರದು 5. ಸದರಿ ಅವಧಿಯಲ್ಲಿ ಯಾವುದೇ ಮಾರಣಾಂತಿಕ ಅಪಘಾತಗಳನ್ನು ಎಸಗಿರಬಾರದು. 6. ನಿಯಮ-23ರಡಿ ಆರೋಪಣಾ ಪತ್ರ ಜಾರಿಯಾಗಿದ್ದಲ್ಲಿ/ಕ್ರಿಮಿನಲ್ ಪ್ರಕರಣ ಎದರಿಸುತ್ತಿರುವ/ ಭಾಗಿಯಾಗಿರುವ ನೌಕರರು ಅರ್ಹರಿರುವುದಿಲ್ಲ.
II. ಸಾಮಾನ್ಯ ಮಾರ್ಗಸೂಚಿಗಳು: 1. ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು “https://ems.mybmtc.com/BMTC/login.php” ಲಿಂಕ್‌ನ್ನು ಬಳಿಸಿಕೊಂಡು ತಮ್ಮ ಇಎಂಎಸ್ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಮೂಲಕ ಲಾಗಿನ್ ಆಗುವುದು. 2. ವರ್ಗಾವಣೆ ಅರ್ಜಿ ಸಲ್ಲಿಸಲು 9-06-2025 ರಿಂದ 19-06-2025ರ 17 ಗಂಟೆಯವರೆಗೆ ತಂತ್ರಾಂಶವು ತೆರೆದಿದ್ದು, ತಂತ್ರಾಂಶದಲ್ಲಿ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
3. ಲಾಗಿನ್ ಆದ ನಂತರ “ಮಧ್ಯಂತರ ಆದೇಶದಲ್ಲಿನ ಸಿಬ್ಬಂದಿಗಳ ವರ್ಗಾವಣೆ ಅರ್ಜಿ” ಎಂಬ ಲಿಂಕ್‌ನ್ನು ಬಳಿಸಿಕೊಂಡು ಮಂಜೂರಾತಿಯಿರುವ ಎಲ್ಲ ಕಾರ್ಯಸ್ಥಳಗಳನ್ನು ಆದ್ಯತೆಯನ್ವಯ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. 4. ಸಂಬಂಧಿಸಿದ ನೌಕರರು ವರ್ಗಾವಣೆ ಅರ್ಜಿ ಸಲ್ಲಿಸುವಾಗ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಘಟಕ ಹೊರತುಪಡಿಸಿ ಈ ಹಿಂದಿನ ವಲಯದಲ್ಲಿನ ಇಚ್ಚೆಯುಳ್ಳ ಮೂರು ಘಟಕಗಳ ಆದ್ಯತೆಗಳನ್ನು ನಮೂದಿಸುವುದು.

ಒಂದು ವೇಳೆ ನೌಕರರು ಒಂದೇ ಸ್ಥಳಕ್ಕೆ ವರ್ಗಾವಣೆ ಬಯಸಿದ್ದಲ್ಲಿ ಒಂದೇ ಸ್ಥಳವನ್ನು ಮೂರು ಆದ್ಯತೆಗಳ ಕಾಲಂಗಳಲ್ಲಿಯು ನಮೂದಿಸತಕ್ಕದ್ದು. (ವರ್ಗಾವಣೆ ಸ್ಥಳಗಳನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್-ಲೈನ್ ಮೂಲಕ ನಿರ್ವಹಿಸುತ್ತಿರುವುದರಿಂದ ಉದ್ಧವಿಸಬಹುದಾದ ಖಾಲಿ ಸ್ಥಾನಗಳನ್ನು ಪರಿಗಣಿಸುವುದರಿಂದ ಮೂರು ಆದ್ಯತೆಗಳನ್ನು ಕಡ್ಡಾಯಗೊಳಿಸಿದೆ.)
5. ಒಮ್ಮೆ ವರ್ಗಾವಣೆ ಅರ್ಜಿಯಲ್ಲಿ ಆಧ್ಯತಾ ಕಾರ್ಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡ ನಂತರ ಯಾವುದೇ ಹಂತದಲ್ಲೂ ಬದಲಾವಣೆ ಅಥವಾ ಹಿಂಪಡೆಯಲು ಅವಕಾಶವಿರುವುದಿಲ್ಲ. 6. ಮಧ್ಯಂತರ ಆದೇಶದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ವರ್ಗಾವಣೆ ಅರ್ಜಿ ಸಲ್ಲಿಸಲು ವಿಫಲರಾದಲ್ಲಿ ವರ್ಗಾವಣೆಯ ಅವಕಾಶವನ್ನು ಕಳೆದುಕೊಳ್ಳುವರು. 7. ಮಧ್ಯಂತರ ಆದೇಶದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ನೌಕರರ ಆಯಾ ಹುದ್ದೆಯ ಪರೀಕ್ಷಾಣಾರ್ಥಿ ದಿನಾಂಕ ಮತ್ತು ಪದೋನ್ನತಿ ಹೊಂದಿದ ದಿನಾಂಕದ ಆಧಾರದ ಮೇರೆಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಲಾಗುವುದು.
8. ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆ ಅರ್ಜಿಯನ್ನು ಮುದ್ರಿಸಿಕೊಂಡು ಸಹಿ ಮಾಡಿ ಸಂಬಂಧಪಟ್ಟ ಘಟಕ/ಕಛೇರಿಯ ಆಡಳಿತ ಶಾಖೆಯಲ್ಲಿ 20-06-2025ರೊಳಗಾಗಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯುವುದು. 9. ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾನದಂಡಗಳನ್ನು ಹಾಗೂ ಅರ್ಜಿ
ಸಲ್ಲಿಸುವ ವಿಧಾನವನ್ನು ಮನವರಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ವರ್ಗಾವಣೆ ಅರ್ಜಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಅವಕಾಶವಿರುವುದಿಲ್ಲ.
III. ಕರ್ತವ್ಯ ಮತ್ತು ಜವಾಬ್ದಾರಿಗಳು: 1) ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು: ಹುದ್ದೆವಾರು ಸಮಾಲೋಚನೆಗೆ ಒಳಪಡುವ ಸಿಬ್ಬಂದಿಗಳ ಪಟ್ಟಿಯನ್ನು ಆಡಳಿತ ಇಲಾಖೆಯಿಂದ ಘಟಕಗಳಿಗೆ ನೀಡುವುದು.
ಸಿಬ್ಬಂದಿಗಳು ವರ್ಗಾವಣೆಗಾಗಿ ಅರ್ಜಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ, ಸ್ವೀಕೃತಿಯನ್ನು ನೀಡುವುದು. ಘಟಕ ವ್ಯವಸ್ಥಾಪಕರು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸತ್ತಿರುವ ಸಿಬ್ಬಂದಿ ಅಧೀಕ್ಷಕ/ ಮೇಲ್ವಿಚಾರಕರಿಂದ ಸದರಿ ಅರ್ಜಿಗಳಲ್ಲಿರುವ ಸೇವಾ ವಿವರವನ್ನು ಹಾಗೂ ನಿಗದಿಪಡಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಪರಿಶೀಲಿಸಿ ತಮಗೆ ಒದಗಿಸಿರುವ ಲಾಗ್-ಇನ್‌ನಲ್ಲಿ ಸಂಬಂಧಪಟ್ಟ ನೌಕರರ ಸೇವಾಪುಸ್ತಕದೊಂದಿಗೆ ಪರಿಶೀಲಿಸಿ ಗಣಕ ಯಂತ್ರದಲ್ಲಿ ಕಡ್ಡಾಯವಾಗಿ ದೃಢೀಕರಿಸುವುದು. ಘಟಕ ವ್ಯವಸ್ಥಾಪಕರು ನೌಕರರು ವರ್ಗಾವಣೆಗಾಗಿ ಸಲ್ಲಿಸಿರುವ ಆದ್ಯತಾ ಪಟ್ಟಿಯನ್ನು ಕೇಂದ್ರ ಕಚೇರಿಯ ಸಿಬ್ಬಂದಿ ಶಾಖೆಗೆ 21-06-2025ರೊಳಗಾಗಿ ಸಲ್ಲಿಸಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...