CRIMENEWSಕ್ರೀಡೆರಾಜಕೀಯ

RCB ವಿಜಯೋತ್ಸ ಒಂದೇ ದಿನದಲ್ಲಿ ಆಚರಣೆ ನಡೆಸಲು ಅನುಮತಿ ನೀಡಿದ್ದು ಯಾಕೆ: ಜೆಡಿಎಸ್‌ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿಜಯೋತ್ಸವನ್ನು ಒಂದೇ ದಿನದಲ್ಲಿ ಆಚರಣೆ ನಡೆಸಲು ಅನುಮತಿ ನೀಡಿದ್ದು ಯಾಕೆ ಎಂದು ಸರ್ಕಾರವನ್ನು ಪ್ರಶ್ನಿಸಿ ಜೆಡಿಎಸ್‌ ಪಕ್ಷ ಕಿಡಿಕಾರಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನೈತಿಕತೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಈ ಬಗ್ಗೆ Xನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರೋ ಜೆಡಿಎಸ್ ಈ ಘಟನೆ ಸರ್ಕಾರದ ಭದ್ರತಾ ವೈಫಲ್ಯವನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಸರ್ಕಾರದ ಹುಚ್ಚು ಪ್ರಚಾರ ಪಡೆಯುವ ಗೀಳು 11ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಅಧಿಕಾರದ ಅಮಲಿನಲ್ಲಿರುವ ಪ್ರಚಾರಪ್ರಿಯ, ಜಾಹೀರಾತು ಪ್ರಿಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಲ್ಲಿ ರಾರಾಜಿಸಲು ಹೋಗಿ ಮುಗ್ಧ ಜನರ ಜೀವದ ಜತೆ ಚಲ್ಲಾಟವಾಡಿದೆ.

ವಿಜಯದ ಪರೇಡ್‌ಗಳನ್ನು ಆಚರಿಸುವ ಸಮಯದಲ್ಲಿ ಸರಿಯಾದ ನಾಗರಿಕರ ಸುರಕ್ಷತಾ ಕ್ರಮಗಳನ್ನು, ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ನಿರ್ವಹಣೆಯೊಂದಿಗೆ ಯೋಜಿಸಬೇಕು, ರಾಜಕೀಯ ಲಾಭಕ್ಕಾಗಿ ಆತುರಪಡಬಾರದು ಎಂಬುದಕ್ಕೆ ಕಾಲ್ತುಳಿತ ದುರಂತವೇ ಸಾಕ್ಷಿ.

ಕೆಕೆಆರ್ 2 ದಿನಗಳ ನಂತರ ಕೋಲ್ಕತ್ತಾದಲ್ಲಿ ವಿಜಯ ಪರೇಡ್ ನಡೆಸಿತು. ಮುಂಬೈ 2 ದಿನಗಳ ಬಳಿಕ ವಿಜಯೋತ್ಸವ ಮೆರವಣಿಗೆ ಆಯೋಜಿಸಿತು. ಸಿಎಸ್‌ಕೆ 3 ದಿನಗಳ ನಂತರ ವಿಜಯದ ಪರೇಡ್ ನಡೆಸಿತು. ಭಾರತ ತಂಡ 5 ದಿನಗಳ ನಂತರ ತಮ್ಮ ಟಿ -20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ನಡೆಸಿತು.

Advertisement

ಲಕ್ಷಾಂತರ ಜನ ಸೇರುವ ಕ್ರೀಡಾಂಗಣದ ಬಳಿ ಆಗಿರುವ ಭದ್ರತಾ ಲೋಪಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!