BMTC: 79ರ ಬದಲು 34ಕಿಮೀ ಕಾರ್ಯಾಚರಣೆ ಮಾಡಿ ಆರ್ಥಿಕ ನಷ್ಟಮಾಡಿದ ಆರೋಪ- ಚಾಲನಾ ಸಿಬ್ಬಂದಿಗೆ ಡಿಎಂ ಮೆಮೋ


ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸುಮಾರು 3500 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುತ್ತೀರಿ ಎಂದು ಆರೋಪಿಸಿ ಚಾಲನಾ ಸಿಬ್ಬಂದಿ ವಿರುದ್ಧ ಘಟಕ ವ್ಯವಸ್ಥಾಪಕರು ಆರೋಪಣ ಪತ್ರ ನೀಡಿ 7ದಿನದೊಳಗೆ ಲಿಖಿತ ಹೇಳಿಕೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.
ಬಿಎಂಟಿಸಿ ಡಿಪೋ-2ರ ಚಾಲನಾ ಸಿಬ್ಬಂದಿಗಳಾದ ಕಂಡಕ್ಟರ್ ವೀರಯ್ಯ ಗುಮತಿಮಠ ಮತ್ತು ಚಾಲಕ ಬಸವರಾಜು ಎಂಬುವರಿಗೆ ಘಟಕ ವ್ಯವಸ್ಥಾಪಕ ಮೆಮೋ ಕೊಟ್ಟಿದ್ದಾರೆ.
ಪ್ರಕರಣವೇನು? ಜೂನ್ 11ರಂದು ಎರಡನೆ ಪಾಳಿಯ ಮಾರ್ಗ ಸಂ-150/04 ರಲ್ಲಿ ನಿರ್ವಾಹಕರಾಗಿ ಮತ್ತು ಚಾಲಕರಾಗಿ ಕರ್ತವ್ಯ ನಿರ್ವಹಿಸಿರುವ ನೀವು ಈ ಮಾರ್ಗದಲ್ಲಿ ಅಪರಾಧ ಮಾಡಿರುತ್ತೀರಿ.
ಅದರಲ್ಲಿ ಮೊದಲನೆಯದಾಗಿ ನಮೂನೆ-04ರ ಪ್ರಕಾರ ಮಾರ್ಗದ ಒಟ್ಟಾರೆ ಕಿಲೋ ಮೀಟರ್-79 ಕಿಮೀ ಆಗಿದ್ದು, ನೀವು ಕೇವಲ 34 ಕಿಮೀ ಮಾತ್ರ ಕಾರ್ಯಾಚರಣೆ ಮಾಡಿ ಸುಮಾರು 45 ಕಿಮೀ ರದ್ದು ಮಾಡಿದ್ದೀರಿ. ಇದರಿಂದ ಘಟಕದ ಸಾರಿಗೆ ಆದಾಯ ನಷ್ಟವಾಗಲು ಕಾರಣರಾಗಿದ್ದೀರಿ.
2) ವಿನಾ ಕಾರಣ ಪ್ರತಿ ಸುತ್ತುವಳೆಯಲ್ಲೂ 15-20 ನಿಮಿಷ ಕಾಲ ಹರಣ ಮಾಡಿರುತ್ತಿರಿ.
3) ನಮೂನೆ-4 ರ ಪ್ರಕಾರ 01:45ಕ್ಕೆ ಕೆ.ಆರ್ ಮಾರುಕಟ್ಟೆಯಿಂದ ಮಾರ್ಗಚರಣೆ ಮಾಡಬೇಕಾಗಿತ್ತು. ಆದರೆ ನೀವು 2:03 ನಿಮಿಷಕ್ಕೆ ಮಾರ್ಗಾಚರಣೆ ಮಾಡಿದ್ದು, ಸುಮಾರು 18 ನಿಮಿಷ ತಡವಾಗಿ ಆಚರಣೆ ಮಾಡಿರುತ್ತೀರಿ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಲಭ್ಯವಿಲ್ಲದೆ ತೊಂದರೆ ಉಂಟಾಗಲು ಕಾರಣರಾಗಿದ್ದೀರಿ.

4) ಈ ಮಾರ್ಗದ ನಿಗದಿತ ಆದಾಯವು 6000 ರೂ.ಗಳಾಗಿದ್ದು, ತಾವು ಕೇವಲ 2572 ರೂ. ಗಳನ್ನು ಸಂದಾಯ ಮಾಡಿರುತ್ತೀರಿ. ಇದರಿಂದ ಸುಮಾರು 3500 ರೂ.ಗಳಷ್ಟು ಸಂಸ್ಥೆಗೆ ಆರ್ಥಿಕ ನಷ್ಟವುಂಟಾಗಲು ಕಾರಣರಾಗಿದ್ದೀರಿ.
5) ನಮೂನೆ-4 ರ ಪ್ರಕಾರ ಮಾರ್ಗದ ಕಾರ್ಯಾಚರಣೆ ಮುಗಿಸಿಕೊಂಡು 21:10 ಗಂಟೆಗೆ ಘಟಕಕ್ಕೆ ಆಗಮಿಸಬೇಕಾಗಿತ್ತು. ಆದರೆ ನೀವು ಕಾರ್ಯಾಚರಣೆ ಮುಗಿಸಿಕೊಂಡು ರಾತ್ರಿ 08-33 ಗಂಟೆಗೆ ಘಟಕಕ್ಕೆ ಹಾಜರಾಗಿರುತ್ತೀರಿ. ಅಂದರೆ ಸುಮಾರು 37 ನಿಮಿಷ ಬೇಗ ಆಗಮಿಸಿರುತ್ತೀರಿ. ಇದರಿಂದ ಕಿಲೋ ಮೀಟರ್ ರದ್ದಾಗಿ ಸಾರಿಗೆ ಆದಾಯ ನಷ್ಟವಾಗಲು ಕಾರಣರಾಗಿದ್ದೀರಿ.
ಇನ್ನು ಹೆಚ್ಚಿನ ಜನ ಸಂದಣಿ ಅವಧಿಯಲ್ಲಿ ವಾಹನಗಳು ಲಭ್ಯವಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸಲು ಕಾರಣರಾಗಿದ್ದೀರಿ. ಇದು ನಿಮ್ಮ ಬೇಜವಾಬ್ದಾರಿತನದ ಹಾಗೂ ಕರ್ತವ್ಯ ನಿರ್ಲಕ್ಷತೆಯಿಂದ ಸಂಭವಿಸಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಲು ಹಾಗೂ ಸಂಸ್ಥೆಗೆ ಆರ್ಥಿಕ ನಷ್ಟವಾಗಲು ಕಾರಣರಾಗಿದ್ದೀರಿ.
ನಿಮ್ಮ ಮೇಲಿರುವ ಈ ಆರೋಪಗಳು ಕೇಂದ್ರ ಕಚೇರಿಯ AVLS ರಿಪೋರ್ಟ್ ವರದಿ ಮೇಲೆ ಆಧಾರವಾಗಿದೆ. ಹೀಗಾಗಿ ನೀವು, ಈ ಆರೋಪಗಳಿಗೆ ಸಂಬಂಧಿಸಿದಂತೆ, ನಿರ್ದೋಷಿ ಎಂಬುವುದರ ಬಗ್ಗೆ ಲಿಖಿತ ಹೇಳಿಕೆಯನ್ನು ಆರೋಪ ಪತ್ರ ತಲುಪಿದ 7 ದಿನಗಳೊಳಗಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ಸಮಜಾಯಿಸಿ ಸಲ್ಲಿಸುವುದು ಏನೂ ಇಲ್ಲವೆಂದು ತೀರ್ಮಾನಿಸಲಾಗುವುದು ಮತ್ತು ನಿಮ್ಮ ಮೇಲೆ ಹೊರಿಸಲಾದ ಈ ಎಲ್ಲ ಆರೋಪಗಳು ರುಜುವಾತಾಗಿದೆ ಎಂದು ನಿರ್ಧರಿಸಿ ನಿಮ್ಮ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಘಟಕ ವ್ಯದಸ್ಥಾಪಕರು ಮೆಮೋ ನೀಡಿದ್ದಾರೆ.
ಅದು ಕೂಡ ಸಂಸ್ಥೆಯು ಅಳವಡಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ನಡಕೆ ಮತ್ತು ಶಿಸ್ತು ನಿಯಮಾವಳಿ 1971 ಹಾಗೂ ಅದರ ತಿದ್ದುಪಡಿ ಅನುಸೂಚಿಯ ನಿಯಮ 22 ರ ಅನುಸಾರವಾಗಿ ನಿಯಮ 19/2 ರ ಅನುಸಾರ ಶಿಸ್ತುಪಾಲನಾಧಿಕಾರಿಯಾಗಿ ನಾನು ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಉದ್ದೇಶಿಸಿ ಈ ಅಪರಾಧಗಳನ್ನು ಮಾಡಿರುವಿರೆಂದು ಭಾವಿಸಿ ಮೆಮೋ ಕೊಡುತ್ತಿರುವುದಾಗಿ ತಿಳಿಸಿದ್ದಾರೆ.
Related

 








