ತ್ವರಿತವಾಗಿ ಚರಂಡಿ ನಿರ್ಮಿಸದಿದ್ದರೆ 1 ಲಕ್ಷ ರೂ.ಗಳ ದಂಡ : ಜಲಮಂಡಳಿ ಅಧಿಕಾರಿಗಳಿಗೆ ಆಯುಕ್ತೆ ಸ್ನೇಹಲ್ ಎಚ್ಚರಿಕೆ

ಬೆಂಗಳೂರು: ಎಚ್.ಎ.ಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಹಾಗೂ ಅಡ್ಡರಸ್ತೆಯಲ್ಲಿ ತ್ವರಿತವಾಗಿ ಹೊಸ ಚರಂಡಿಯನ್ನು ನಿರ್ಮಿಸುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಸೂಚನೆ ನೀಡಿದ್ದಾರೆ.
ಪೂರ್ವ ವಲಯ ಆಯುಕ್ತರ ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಯ ಅಹವಾಲಿನ ಕಾರ್ಯಕ್ರಮದಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ, ಸಾರ್ವಜನಿಕರೊಬ್ಬರು ಮಾತನಾಡಿ ಎಚ್.ಎ.ಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಯಲ್ಲಿ ಚರಂಡಿಯನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಸುಸ್ಥಿತಿಯಲ್ಲಿಲ್ಲದೆ ನೀರು ರಸ್ತೆಯ ಮೇಲೆ ಬರುತ್ತಿದೆ ಹಾಗೂ ಚರಂಡಿ ಕಟ್ಟಿಕೊಂಡಿದ್ದು ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಅಹವಾಲು ಸಲ್ಲಿಸಿದರು.
ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ಎಚ್.ಎ.ಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಹಾಗೂ ಅಡ್ಡರಸ್ತೆಯಲ್ಲಿ ಹೊಸ ಚರಂಡಿ ನಿರ್ಮಿಸಲು ಜಲಮಂಡಳಿಯ ಅಧಿಕಾರಿಗಳಿಗೆ ಸೂಚಿಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ 1 ಲಕ್ಷ ರೂ.ಗಳ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು.
ಸಮರ್ಪಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು: OMBR ಲೇಔಟ್ ನಲ್ಲಿ ಘನತ್ಯಾಜ್ಯ ನಿರ್ವಹಣೆ ಸೂಕ್ತವಾಗಿ ನಡೆಯದ ಕುರಿತು ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣದ ಕುರಿತು ನಾಗರಿಕರು ನೀಡಿದ ದೂರಿನ ವಿಷಯಕ್ಕೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ವಿಷಯ ಪರಿಶೀಲಿಸಿ ರಸ್ತೆಯ ಪಕ್ಕದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಹಾಗೂ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅನಧಿಕೃತ ಬೋರ್ವೆಲ್ ಹಾಗೂ ramp ತೆರವುಗೊಳಿಸಿ: ಸಭೆಯಲ್ಲಿ ಎಚ್ ಆರ್.ಬಿ.ಆರ್ 1ನೇ ಬ್ಲಾಕ್ ನ ರಸ್ತೆ ಮಧ್ಯದಲ್ಲಿ ಬೋರ್ವೆಲ್ ಕೊರೆದಿರುವ ಹಾಗೂ ಸಾಯಿರಾಮ್ ಅಪಾರ್ಟ್ ಮೆಂಟ್ ನವರು ಅನಧಿಕೃತ ramp ನಿರ್ಮಿಸಿದ್ದು ಮಳೆ ನೀರಿನ ಸರಾಗ ಹರಿವಿಗೆ ತೊಂದರೆಯಾಗುತ್ತಿರುವ ಕುರಿತಾದ ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ಬೋರ್ವೆಲ್ ನ್ನು ತ್ವರಿತವಾಗಿ ಮುಚ್ಚಿ ramp ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪಾಯ ಹಂತದಲ್ಲಿರುವ ಒಣ ಮರಗಳ ತೆರವು: KSFC ಲೇ ಔಟ್ ನಲ್ಲಿನ ಒಣ ಮರಗಳು ಅಪಾಯ ಹಂತದಲ್ಲಿದ್ದು ಹಾಗೂ ರಸ್ತೆಗೆ ಬಂದಿರುವ ಕೊಂಬೆಗಳನ್ನು ಕತ್ತರಿಸಲು ಸೂಚನೆ ನೀಡಿದರು. ಹಲವು ಪ್ರದೇಶದಲ್ಲಿ ಬ್ಲಾಕ್ ಸ್ಪಾಟ್ ಗಳ ಕುರಿತು ಸಮಸ್ಯೆಗಳಿದ್ದು ಸ್ವಚ್ಛಗೊಳಿಸಿ ಗ್ರೀನ್ ನೆಟ್ ಅಳವಡಿಸಲು ಸೂಚಿಸಿದರು. ಪೂರ್ವ ವಲಯ ವ್ಯಾಪ್ತಿಯಲ್ಲಿನ ಬ್ಲಾಕ್ ಆದ ಚರಂಡಿಗಳ ಹೂಳೆತ್ತಲು ಸೂಚನೆ ನೀಡಲಾಯಿತು.
ಪಾರ್ಕ್‌ಗಳ ಸೂಕ್ತ ನಿರ್ವಹಣೆ ಮಾಡಿ: ಶಿವಾಜಿನಗರ ವಿಭಾಗದ ಕೋಲ್ಸ್ ಪಾರ್ಕ್ ನಿರ್ವಹಣೆ ಸೂಕ್ತವಾಗಿ ನಡೆಯದ ಕುರಿತಾದ ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ನಿರ್ವಹಣೆ ಕುರಿತಂತೆ ಸೂಕ್ತ ಕ್ರಮವಹಿಸಿ, ವಾಹನಗಳ ಪ್ರವೇಶಕ್ಕೆ ಆಸ್ಪದ ನೀಡದೆ ಮಕ್ಕಳ ಸುರಕ್ಷತೆ ಕುರಿತು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೂರುಗಳಿಗೆ ಶೀಘ್ರ ಸ್ಪಂದಿಸಿ: ನಾಗರಿಕರ ಧ್ವನಿಗೆ ಸ್ಪಂದನೆ ಕಾರ್ಯಕ್ರಮದಲ್ಲಿ ನಾಗರೀಕರಿಂದ ಬರುವ ದೂರುಗಳಿಗೆ ಶೀಘ್ರ ಸ್ಪಂದನೆಗೆ ಸೂಚನೆ ನೀಡಲಾಯಿತು. ಪೂರ್ವ ವಲಯದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಗರೀಕರು ಆಗಮಿಸಿ ವಲಯ ಆಯುಕ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
22 ದೂರುಗಳ ಸ್ವೀಕಾರ: ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು 22 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಪೂರ್ವ ವಲಯ ಆಯುಕ್ತರು ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು: 1. ಬೀದಿ ದೀಪಗಳ ಅಳವಡಿಕೆಯ ಅವಶ್ಯಕತೆಯ ಕುರಿತು ಮನವಿ ಸಲ್ಲಿಸಿದರು. 2. ರಸ್ತೆ ಬದಿ ಕಸ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳನ್ನು ನಿಯೋಜನೆ ಮಾಡಲು ಮನವಿ. 3. ಕೆ.ಎಸ್.ಎಫ್ ಸಿ ಲೇಔಟ್‌ಲ್ಲಿ ಹೆಚ್ಚಿನ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲು ಮನವಿ.
4. ಹಲಸೂರು ಸೋಮೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ವ್ಯತಿರಿಕ್ತವಾಗಿ ಕಟ್ಟಡವನ್ನು ನಿರ್ಮಿಸಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದರು. 5. ಪಾದಾಚಾರಿಯಲ್ಲಿನ ಅಡಚಣೆಗಳನ್ನು ತೆರವುಗೊಳಿಸುವಂತೆ ಮನವಿ
6. ಚರಂಡಿಗಳ ಬ್ಲಾಕ್ ಆಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸೂಕ್ತ ಕ್ರಮಕ್ಕೆ ವಿನಂತಿಸಿದರು. 7. ಪಾದಾಚಾರಿ ಮಾರ್ವನ್ನು ಬೀದಿಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದು ಇದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಕುರಿತು ಅಂಗಡಿಗಳ ತೆರವಿಗೆ ವಿನಂತಿಸಿದರು.
ಈ ವೇಳೆ ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತ ರಾಜು, ಮುಖ್ಯ ಅಭಿಯಂತರರಾದ ಸುಗುಣ, ಆರೋಗ್ಯಾಧಿಕಾರಿ ಭಾಗ್ಯ, ಕಾರ್ಯಪಾಲಕ ಅಭಿಯತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಿಜಿಎಂ, ಎಜಿಎಂ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.
Related

You Might Also Like
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...
ಅಂಗವಿಕಲರ ಬಸ್ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !
ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ. ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ...
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು: ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೆಅರ್ಎಸ್,...
KSRTC: ನಾಳೆಯಿಂದ ಸಾರಿಗೆ ನೌಕರರ ಉಪವಾಸ-ಧರಣಿ ಸತ್ಯಾಗ್ರಹ: ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ನಾಳೆಯಿಂದ (ಜು.29)...