KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು

- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ಪಾಷ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸನ್ಮಾನಿಸಿ, ನೌಕರರ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಮನವಿ ಮಾಡಿದರು.
KSRTC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿಗೆ ಮೊದಲ ಬಾರಿಗೆ ಆಗಮಿಸಿದ ಅಕ್ರಮ್ ಪಾಷ ಅವರನ್ನು ಶನಿವಾರ ಮೈಸೂರಿನಲ್ಲಿರುವ ಸಂಸ್ಥೆಯ ಅತಿಥಿ ಗೃಹದಲ್ಲಿ ಕೂಟದ ರಾಜ್ಯ ಗೌರವಾಧ್ಯಕ್ಷ ಬಿ.ಎಸ್. ಸುರೇಶ್, ಸಿ.ಡಿ.ವಿಶ್ವನಾಥ್ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಸಂಸ್ಥೆಯಲ್ಲಿ ಇಂದು ನೌಕರರು ಪಡುತ್ತಿರುವ ಪರಿಶ್ರಮ ಹಾಗೂ ಪರಿಸ್ಥಿತಿಯ ಬಗ್ಗೆ ಎಂಡಿ ಅವರ ಗಮನಕ್ಕೆ ತಂದರು. ಅಲ್ಲದೆ ಶೀಘ್ರದಲ್ಲೇ ನೌಕರರಿಗೆ ಸಿಗಬೇಕಿರುವ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಜತೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ಈ ಸಮಯದಲ್ಲಿ ಮುಖ್ಯ ಯಾಂತ್ರಿಕ ಅಭಿಯಂತರ ಕೆ.ಎಚ್.ಶ್ರೀನಿವಾಸ್ ಹಾಗೂ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಗೌರವಾಂಬಾ, ಮೈಸೂರು ನಗರ ಸಾರಿಗೆ ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿ ಎಚ್.ಟಿ.ವೀರೇಶ್, ಗ್ರಾಮಾಂತರ ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿ ಬಿ.ಶ್ರೀನಿವಾಸ್ ಹಾಗೂ ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ವಿಭಾಗಿಯ ಭದ್ರತಾ ಹಾಗೂ ಜಾಗೃತ ಅಧಿಕಾರಿಗಳಾದ ಎನ್.ಎಸ್.ಶಿವರಾಜೇಗೌಡ, ಎಂ.ಪಿ.ರಘು ಹಾಗೂ ಎರಡು ವಿಭಾಗದ ಅಧಿಕಾರಿಗಳು ಇದೇ ಒತ್ತಾಯವನ್ನು ಮಾಡಿದರು.
ಅದರಲ್ಲಿ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಪ್ರಮುಖವಾಗಿ ನಮ್ಮ ಸಾರಿಗೆ ಸಂಸ್ಥೆಯ ನೌಕರರು ಹಗಲಿರುಳು ಎನ್ನದೆ ಶ್ರಮಪಟ್ಟು ಯಶಸ್ವಿಗೊಳಿಸಿದ್ದಾರೆ. ಜತೆಗೆ ನಮ್ಮ ನೌಕರರ ಶ್ರಮಕ್ಕೆ ಯಾವುದೇ ಸರ್ಕಾರಿ ಅರೆ ಸರ್ಕಾರಿ ನೌಕರರ ಶ್ರಮಕ್ಕೆ ಹೋಲಿಸುವ ವಿಚಾರ ಹೊಂದಿಲ್ಲ. ಅತಿ ಹೆಚ್ಚು ಶ್ರಮವಹಿಸುವ ನೌಕರರು ನಮ್ಮ ಸಾರಿಗೆ ಸಂಸ್ಥೆಯ ನೌಕರರು ಅವರಿಗೆ ಒಂದು ಶಾಶ್ವತ ಪರಿಹಾರ ಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮನವಿ ಮಾಡಿದರು.
ಇನ್ನು ಸರ್ಕಾರಿ ನೌಕರರಿಗಿಂತ ಅತಿ ಕಡಿಮೆ ಅಂದರೆ ಶೇ.40 ರಿಂದ ಶೇ.55ವರೆಗೆ ಕಡಿಮೆ ವೇತನ ತೆಗೆದುಕೊಳ್ಳುತ್ತಿದ್ದೇವೆ. ಹೀಗಾಗಿ ಮತ್ತೆ ನಾವು ನಾಲ್ಕು ವರ್ಷಕ್ಕೊಮ್ಮೆ ಬೀದಿಯಲ್ಲಿ ಕುಳಿತು ಹೋರಾಟ ಮಾಡಿ ಅತಿ ಕಡಿಮೆ ವೇತನವನ್ನು ಪಡೆಯುವ ಪದ್ಧತಿಯನ್ನು ಒಪ್ಪುವುದಿಲ್ಲ. ಇದನ್ನು ಕೊನೆಗಾಣಿಸಿ ಸಂಸ್ಥೆಯ ಅಧಿಕಾರಿಗಳು/ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಬೇಕು ಎಂದರು.
ಒಂದು ಶಾಶ್ವತ ಪರಿಹಾರ ನೀಡಿ ಹಾಗೂ ನೌಕರರ ವೇತನ ವಿಚಾರ ಡಿಎ ಮತ್ತು ಬಿಡಿಎ ಹಾಗೂ ಕಳೆದ 2020ರ ಜನವರಿ 1ರಿಂದ ಅನ್ವಯಾಗುವಂತೆ ಹೆಚ್ಚಳವಾಗಿರುವ ವೇತನದ 38 ತಿಂಗಳು ಹಿಂಬಾಕಿ ಹಾಗೂ 2024 ಆರ್ಥಿಕ ವರ್ಷದ 18 ತಿಂಗಳು ಹಿಂಬಾಕಿ ಕೊಡಬೇಕು ಹಾಗೂ ಖಾಸಗಿಕರಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಇನ್ನು 2021ರ ಏಪ್ರಿಲ್ 7ರಿಂದ 21ರವರೆಗೆ 14 ದಿನಗಳ ಕಾಲ ನಡೆದ ಮುಷ್ಕರದ ವೇಳೆ ಆಗಿರುವ ಶಿಸ್ತು ಪ್ರಕರಣಗಳನ್ನು ಕೈ ಬಿಟ್ಟು ಎಲ್ಲ ನೌಕರರಿಗೂ ಡ್ಯೂಟಿ ಕೊಡುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಕೊಡಬೇಕು ಎಂದು ಮನವಿ ಮಾಡಿದರು.
ನೀವು ಕಾರ್ಮಿಕ ಆಯುಕ್ತರಾಗಿ ಕಾರ್ಯನಿರ್ವಹಿಸಿ ಬಂದಿದ್ದೀರಿ ಹೀಗಾಗಿ ನಮ್ಮ ಸಾರಿಗೆ ನೌಕರರ ಬಗ್ಗೆ ಹೆಚ್ಚಿಗೆ ವಿವರಿಸಿ ಹೇಳುವ ಅಗತ್ಯವಿಲ್ಲ ಕಾರಣ ಎಲ್ಲ ನಿಮಗೆ ಗೊತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಲ್ಲಿ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಜತೆಗೆ ಕಾಂಗ್ರೆಸ್ ಚುನಾವಣೆ ವೇಳೆ ಕೊಟ್ಟಿರುವ ಭರವಸೆಯಂತೆ ಸರಿಸಮಾನ ವೇತನ ಕೊಡುವುದಕ್ಕೆ ತಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ವಿನಂತಿಸಿದರು.
ಇನ್ನು ವಿಶೇಷ ಎಂದರೆ ಮೈಸೂರಿನಲ್ಲೂ ಅಧಿಕಾರಿಗಳು ಸರಿ ಸಮಾನ ವೇತನ ಮಾಡುವ ಬಗ್ಗೆ ಎಂಡಿ ಅವರಲ್ಲಿ ಮನವಿ ಮಾಡಿರುವುದು ಒಂದು ಧನಾತ್ಮಕ ಬೆಳವಣಿಗೆಯಾಗಿದೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು – ನೌಕರರು ಬೇರೆ ಎಂಬ ಮಹಾಗೋಡೆ ಕುಸಿದುಬಿದ್ದು ನಾವೆಲ್ಲರೂ ಒಂದೆ ಸಾರಿಗೆ ಸಂಸ್ಥೆಗಳ ನೌಕರರು ಎಂಬ ಭಾವನೆ ಹೆಮ್ಮರವಾಗಿ ಬೆಳೆಯಲಿದೆ ಎಂಬ ಭರವಸೆ ಮೂಡಿರುವುದು ಸಮಸ್ತ ನಾಲ್ಕೂ ನಿಗಮಗಳ ಅಧಿಕಾರಿಗಳು- ನೌಕರರಲ್ಲಿ ಸಂತಸ ತಂದಿದೆ.
Related

You Might Also Like
ಪತಿ ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೊರ್ಟ್
ಶಿವಮೊಗ್ಗ: ಪತಿಯನ್ನು ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೊಬ್ಬನಿಗೆ ಏಳುವರ್ಷ ಜೈಲು ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಮಹತ್ವದ...
ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್
ಬೆಂಗಳೂರು: ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ...
NWKRTC: 45 ವರ್ಷದ ಮಹಿಳೆಗೆ ಅನುಕಂಪದ ಆಧಾರದಡಿ ಹುದ್ದೆಕೊಡಿ- ಹೈಕೋರ್ಟ್ ಆದೇಶ
ಬೆಂಗಳೂರು: ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ಹೈಕೋರ್ಟ್ ಮಹತ್ವ ಆದೇಶ ಹೊರಡಿಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರನ...
BBMP: ಗಣೇಶ ಮೂರ್ತಿ ವಿಸರ್ಜನೆಗೆ 41ಕೆರೆಗಳು, 489 ಸಂಚಾರಿ ವಾಹನಗಳ ವ್ಯವಸ್ಥೆ
ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗಾಗಿ ಕೆರೆ ಅಂಗಳ, ತಾತ್ಕಾಲಿಕ ಕಲ್ಯಾಣಿ, ಸಂಚಾರಿ ವಾಹನ (ಮೊಬೈಲ್ ಟ್ಯಾಂಕ್)/ ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 41ಕೆರೆ,...
ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾವಿದರು-ಕಲಾತಂಡದವರಿಂದ ಅರ್ಜಿ ಆಹ್ವಾನ
ಶಿವಮೊಗ್ಗ: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಅಥವಾ ಕಲಾ ತಂಡದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಮಹಾನಗರ ಪಾಲಿಕೆವತಿಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸುವ...
NWKRTC: ಆ.22ರಿಂದ 26ರವರೆಗೆ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್‌ಗಳ ಸೌಲಭ್ಯ
ಬೆಂಗಳೂರು: ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಸುಗಳು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ ಕಾರ್ಯಾಚರಣೆ ನಡೆಸಲಿವೆ....
BMTC: ಸ್ಕೂಟರ್ ಸ್ಕಿಡ್ಆಗಿ ಬಿದ್ದ ಬಾಲಕಿ ಬಸ್ ಹಿಂದಿನ ಚಕ್ರಕ್ಕೆ ಸಿಲುಕಿ ಸಾವು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ 10 ವರ್ಷದ ಬಾಲಕಿ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್...
ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಬೆಂಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಆದಿ ಜಾಂಬವ ಅಭಿವೃದ್ಧಿ ನಿಗಮಗದಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ...