ಕೇಸ್‌ನಲ್ಲಿ ಸೋಲು-ಗೆಲುವು ಸಹಜ ಅಷ್ಟಕ್ಕೇ ವಕೀಲರ ದೂರುವುದು – NOC ಕೊಡುವುದೇ ತಪ್ಪು ಎಂಬಂತೆ ಅವಾಜ್ ಹಾಕುವುದು..!?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಈ ವಿಚಾರಣೆ ನಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮನಸ್ಸಿಗೆ ಬಂದಂತೆ ಗೀಚುತ್ತಿದ್ದಾರೆ ಕೆಲ ನೌಕರರು.
ಅಂಥವರಿಗೆ ಹೇಳಲೇಬೇಲೇ ಬೇಕಿರುವ ಒಂದು ಕಿವಿಮಾತು ಏನೆಂದರೆ ನೀವು ನಮಗೆ ವೇತನ ಹಿಂಬಾಕಿ ಕೊಡಿಸಿ ಅಂತ ವಕೀಲರ ಮೂಲಕ ವಕಾಲತ್ತು ಹಾಕಿದ್ದೀರಾ? ಇಲ್ಲ. ಹೀಗಿದ್ದ ಮೇಲೆ ಕೋರ್ಟ್‌ನಲ್ಲಿ ಏನೇನು ಚರ್ಚೆಯಾಗಿದೆ ಎಂಬುವುದು ನಿಗಮಗೆ ಗೊತ್ತಿರೋದಿಲ್ಲ. ನಿಮಗೆ ಗೊತ್ತಿರೋದು ಪ್ರಕರಣದ ವಿಚಾರಣೆ ಮುಂದೂಡಿದೆ ಎಂಬುವುದಷ್ಟೆ.
ಅಂದಮೇಲೆ ಈ ಪ್ರಕರಣ ಹಳ್ಳಹಿಡಿಯುತ್ತದೆ. ನ್ಯಾಯ ಸಿಗುವುದಲ್ಲ ಎಂದು ನೀವೇ ಹೇಗೆ ಹೇಳುತ್ತೀರಿ? ಜತೆಗೆ ವಕೀಲರನ್ನು ತೇಜೋವಧೆ ಮಾಡುತ್ತಿರುತ್ತೀರಿ. ನ್ಯಾಯಾಲಯದಲ್ಲಿ ಪ್ರಕಣ ದಾಖಲಾಗಿರುವುದು ನೌಕರರಿಗೆ ಒಳ್ಳೆಯದಾಗಲಿ, ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಹಿಂಬಾಕಿ ಮತ್ತು ವೇತನ ಹೆಚ್ಚಳ ಮಾಡುವುದಕ್ಕೆ ವಿಳಂಬಮಾಡುತ್ತಿದೆ. ಇದು ಶೀಘ್ರವಾಗಿ ಕೊಡುವಂತಾಗಲಿ ಎಂಬ ದೃಷ್ಟಿಯಿಂದ ವಕೀಲರು ವಕಾಲತ್ತು ಹಾಕಿದ್ದಾರೆ.
ಆದರೆ, ಇದರಿಂದ ವಕೀಲರಿಗೇ ಏನೋ ಲಾಭವಿದೆ ಎಂಬಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಆಡಿಯೋ ಮಾಡೋದು ಮತ್ತು ವಕೀಲರನ್ನು ಅವಹೇಳನ ಮಾಡುವುದು ಮಾಡುತ್ತಿದ್ದೀರಿ. ಇದು ನಿಮಗೆ ಬೇಕಾ? ಜತೆಗೆ ಒಂದು ಪ್ರಕಣ ನ್ಯಾಯಾಲಯದ ಮೆಟ್ಟಿಲೇರಿದೆ ಎಂದರೆ ಅಲ್ಲಿ ಸೋಲು ಗೆಲುವು ಇದ್ದೆ ಇರುತ್ತದೆ. ಆದರೆ ತಾವುಗಳು ಇದನ್ನು ಸೋಲುತ್ತಾರೆ ಎಂದು ಮೊದಲೇ ಹಿಯ್ಯಾಳಿಸಿದರೆ ವಕೀಲರಿಗೆ ನಿಮ್ಮ ಪರವಾಗಿ ವಾದ ಮಾಡಿ ಗೆಲ್ಲುವ ಮನಸ್ಸು ಬರುತ್ತದೆಯೇ? ಅವರಿಗೆ ಇದರಿಂದ ಎಷ್ಟು ಬೇಸರವಾಗುವುದಿಲ್ಲ.
ನಾವು ನೌಕರರಿಗೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಒಂದು ಪ್ರಕರಣವನ್ನು ದಾಖಲಿಸಿದರೆ ಅದರ ಬಗ್ಗೆ ಈ ರೀತಿ ಹಿಯ್ಯಾಳಿಸುತ್ತಾರಲ್ಲ. ಅಂದರೆ ನಾವು ಇವರ ಪರವಾಗಿ ಹೋಗಿದ್ದೆ ತಪ್ಪಾಯಿತ? ಹಾಗಿದ್ದರೆ ಈ ಪ್ರಕರಣ ಏನಾದರಾಗಲಿ ಬಿಡಿ ಎಂಬ ಸ್ಥಿತಿಗೆ ವಕೀಲರು ಬರುವುದಿಲ್ಲವೇ? ಇದು ಸಹಜ ಕೂಡ ಹೌದುತಾನೆ.
ಇನ್ನು ಕೆಲವರು ನಮ್ಮ ಸಾರಿಗೆ ನೌಕರರ ಪರ ನೀವು ಯಾವುದೇ ಕೇಸ್‌ಅನ್ನು ತೆಗೆದುಕೊಳ್ಳಬೇಡಿ, ತೆಗೆದುಕೊಂಡರೆ ಎನ್‌ಒಸಿ ಏಕೆ ಕೊಡುತ್ತೀರಿ ಎಂದು ದಬಾಯಿಸುವ ದಾಟಿಯಲ್ಲಿ ಏನೋ ವಕೀಲರಿಗೆ ಇವರೆ ಸಂಬಳಕೊಟ್ಟು ಇಟ್ಟುಕೊಂಡಿದ್ದಾರೆ ಎಂಬಂತೆ ಜೋರಾಗಿ ಅವಾಜ್ ಹಾಕುತ್ತಾರೆ.
ಸರಿ ವಕೀಲರು ಸಾರಿಗೆ ನೌಕರರ ಯಾವುದೇ ಕೇಸ್ ಬಗ್ಗೆ ವಕಾಲತ್ತು ಹಾಕುವುದಿಲ್ಲ ಅವರು ಬಿಟ್ಟು ಬಿಡುತ್ತಾರೆ. ಮುಂದೆ ಇವರೊಬ್ಬರೇ ವಕೀಲರ ಮತ್ತೊಬ್ಬ ವಕೀಲರು ಬರುತ್ತಾರೆ ಅವರು ವಕಾಲತ್ತು ಹಾಕುತ್ತಾರೆ ಎಂದು ಹೇಳುತ್ತೀರಿ. ಆದರೆ, ಆ ವಕೀಲರು ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಫೀ (Fee) ಪಡೆದು ನೌಕರರ ಪರವಾಗಿ ವಕಾಲತ್ತು ಹಾಕುವುದಕ್ಕೆ ಮುಂದೆ ಬರುತ್ತಾರೆ ಎಂದು ಕೊಂಡಿದ್ದೀರಾ?
ಇಲ್ಲಿ ಅಂದರೆ ಹೈ ಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಒಂದು ಕೇಸ್ ವಕಾಲತ್ತು ಹಾಕುವುದಕ್ಕೆ ಕನಿಷ್ಠಪಕ್ಷ ಎಂದರೂ 2-3ರ ಪಕ್ಕ 4 ಸೊನ್ನೆ ಹಾಕಲೇಬೇಕು ಈ ಅದು ಇಷ್ಟಕ್ಕೆ ನಿಲ್ಲುವುದಿಲ್ಲ 4-5-6-7-8 ಹೀಗೆ ಬೆಳೆಯುತ್ತ ಹೋಗುತ್ತದೆಯೇ ಹೊರತು ಅದು 3ರ ಸೊನ್ನೆಗೆ ಬರುವುದಿಲ್ಲ. ಇಂಥ ಅದೆಷ್ಟೋ ಕೇಸ್‌ಗಳನ್ನು ಸಾರಿಗೆ ನೌಕರರ ಪರವಾಗಿ ಹಾಕಿ ಅವರಿಗೆ ಸ್ಟೇ ತಂದುಕೊಟ್ಟಿದ್ದಾರೆ. ಜತೆಗೆ ಜಾಮೀನು ಮಂಜೂರು ಮಾಡಿಸಿಕೊಟ್ಟಿದ್ದಾರೆ.
ಇಷ್ಟೆಲ್ಲ ಮಾಡಿದರೂ ಅವರು ಏನು ಮಾಡಿದ್ದಾರೆ ಎಂಬುವುದೇ ಕೆಲವರ ವಾದ. ಜತೆಗೆ ಕೇಸ್ ತೆಗೆದುಕೊಳ್ಳುತ್ತಾರೆ ಬಳಿಕ ಎನ್‌ಒಸಿ ಕೊಡುತ್ತಾರೆ ಎಂಬ ವಾದವು ಇದೆ. ಒಬ್ಬ ವಕೀಲರು ಎನ್‌ಒಸಿ ಕೊಡಬೇಕಾದರೆ ಕೇಸ್ ಕೊಟ್ಟವರು ಅವರ ಜತೆಗೆ ಸರಿಯಾಗಿ ವರ್ತಿಸದಿರಬಹುದು. ಇಲ್ಲ ಬೇರೆ ಕೆಲಸದ ಒತ್ತಡದಿಂದ ಕೊಡಬಹುದು. ಅವರು ಎನ್‌ಒಸಿಕೊಟ್ಟಿದ್ದಾರೆ ಎಂದ ಮೇಲೆ ಅದೇ Fee ಕೊಟ್ಟು ಬೇರೆ ವಕೀಲರನ್ನು ನೇಮಕ ಮಾಡಿಕೊಂಡರಾಯಿತಲ್ಲ. ಅದನ್ನು ಬಿಟ್ಟು ಏಕೆ ನೀವು ಎನ್‌ಒಸಿಕೊಟ್ಟುತ್ತಿದ್ದೀರಾ ಎಂದು ಅವಾಜ್ ಹಾಕುವುದು ಏನಿದೆ.
ಒಂದು ವೇಳೆ ನೀವು ಹಾಕಿರುವ ಅವಾಜ್‌ನ ಆಡಿಯೋ ಇಟ್ಟುಕೊಂಡು ನಿಮ್ಮ ವಿರುದ್ಧ ಕೇಸ್ ಹಾಕಿದರೆ ನೀವು ಮುಂದೆ ಏನು ಮಾಡುತ್ತೀರಿ ಆ ಕೇಸ್ ನಡೆಸುವುದಕ್ಕೆ ಒಬ್ಬ ವಕೀಲರನ್ನು ಇಟ್ಟುಕೊಳ್ಳಬೇಕು. ಇಲ್ಲಿ ವಕೀಲರು -ವಕೀಲರ ನಡುವೆ ಬಾಂಧ್ಯವ ಚೆನ್ನಾಗಿರುತ್ತದೆ. ನೀವು ಆ ಪ್ರಕರಣದಲ್ಲಿ ಗೆದ್ದು ಬರಲು ಸಾಧ್ಯವೆ? ಆಗ ನಿಮ್ಮ ಸ್ಥಿತಿ ಯಾವ ಹಂತಕ್ಕೆ ತಲುಪುತ್ತದೆ ಎಂಬ ಪರಿಜ್ಞಾನ ನಿಮಗೆ ಇದೆಯೇ?
ಇನ್ನು ವಿಜಯಪಥ ಸಂಪಾದಕರ ವಿರುದ್ಧವೆ ಸಾರಿಗೆ ಸಿಬ್ಬಂದಿಯೊಬ್ಬರು ಕೇಸ್ ಹಾಕಿದ್ದಾರೆ. ಎರಡು ಕೇಸ್‌ಗಳನ್ನು ಇದೇ ವಕೀಲರಾದ ಎಚ್.ಬಿ.ಶಿವರಾಜು ನೋಡಿಕೊಳ್ಳುತ್ತಿದ್ದಾರೆ. ಅವರು ಈವರೆಗೂ ನಮ್ಮ ಸಂಪಾದಕರಿಗೆ ನಿಮಗೆ ಎನ್‌ಒಸಿ ಕೊಡುತ್ತೇವೆ ತೆಗೆದುಕೊಂಡಿ ಹೋಗಿ ಎಂದು ಹೇಳಿಲ್ಲ. ಅಲ್ಲದೆ ಯಾವಾಗ ಕೇಸ್ ಇದೆ ಎಂಬುದನ್ನು ವಕೀಲರೇ ತಿಳಿಸುತ್ತಾರೆ. ಇನ್ನು ಹೇಳಬೇಕೆಂದರೆ ಹೈಕೋರ್ಟ್‌ನಲ್ಲಿ ಸ್ಟೇ ತರುವುದಕ್ಕು ನಮ್ಮ ಸಂಪಾದಕರ ಕರೆಯಲಿಲ್ಲ. ಅವರೇ ವಾದ ಮಂಡಿಸಿ ಸ್ಟೇ ತಂದಿದ್ದಾರೆ.
ಜತೆಗೆ ಇತ್ತೀಚೆಗೆ ಬಿಎಂಟಿಸಿ 17ನೇ ಘಟಕದ ಚಾಲಕ ಪ್ರಶಾಂತ್ ಎಂಬುವರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಯಾರಾದರೊಬ್ಬರು ಬಂದು ಅವರ ಪರ ನಿಂತು ಏಕೆ ಅಮಾನತು ಮಾಡಿದ್ದೀರಿ ಇದನ್ನು ಪರಿಶೀಲಿಸಿ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೀರಾ? ಜತೆಗೆ ಎಫ್‌ಐಆರ್ ಆಗಿರುವುದರ ವಿರುದ್ಧ ಯಾರಾದರೂ ಹೋರಾಟ ಮಾಡಿದ್ದೀರಾ? ಇಲ್ಲ.
ಈ ಚಾಲಕ ಪ್ರಶಾಂತ್ ನೆರವಿಗೆ ಬಂದಿದ್ದೂ ಇದೇ ವಕೀಲರು, ಹೈಕೋರ್ಟ್‌ನಲ್ಲಿ ವಾದ ಮಾಡಿ ಸ್ಟೇ ತಂದುಕೊಟ್ಟಿದ್ದಾರೆ. ಈಗ ಅವರಿಗೆ ಡ್ಯೂಟಿ ಕೊಡುತ್ತಾರೆ. ಈ ಕಾಲದಲ್ಲಿ ನೌಕರರು ಯಾರು ದಡ್ಡರಿಲ್ಲ. ಡಿಗ್ರಿ, ಡಬಲ್ ಡಿಗ್ರಿ ಮಾಡಿಕೊಂಡು ಬಂದಿರುವವರೇ ಇದ್ದಾರೆ. ಹೈಕೋರ್ಟ್ ವೆಬ್ಸೈಟ್ ಹೋಗಿ ಕೇಸ್ ನಂಬರ್ ಹಾಕಿದರೆ ಯಾರೂ ಬೇಕಾದರೂ ಕೇಸ್ ಯಾವ್ ಡೇಟ್‌ಗೆ ಹೋಗಿದೆ ಅನ್ನೋದನ್ನು ತಿಳಿದುಕೊಳ್ಳಬಹುದು.
ಆದರೆ, ಇಂದು ಏನು ವಾದ ಪ್ರತಿವಾದ ನಡೆಯಿತು ಎಂಬುವುದು ತಿಳಿಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಇವೆಲ್ಲವನ್ನೂ ಸಾಮಾಜಿ ಜಾಲತಾಣದಲ್ಲಿ ಹಾಕಿ ನೌಕರರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಇದು ಅಮಾಯಕ ನೌಕರರು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಸಿಲುಕಿದರೆ ಅವರು ನ್ಯಾಯಕ್ಕಾಗಿ ಲಕ್ಷ ಲಕ್ಷ ವ್ಯಯಿಸುವ ಸಾಧ್ಯತೆ ಬರಬಹುದು. ಆದರೆ ನೌಕರರ ಪರವಾಗಿ ಇಂಥ ಒಬ್ಬ ವಕೀಲರಿದ್ದಾರೆ ಎಂದರೆ ಸಮಸ್ಯೆಗೆ ಸಿಲುಕುವ ಅಮಾಯಕ ನೌಕರರಿಗೆ ಲಕ್ಷ ಉಳಿಯಬಹುದು. ಹೀಗಾಗಿ ಇವೆಲ್ಲವನ್ನೂ ಬಿಟ್ಟು ನೌಕರರಿಗೆ ನಾಲ್ಕು ಜನಕ್ಕೆ ಒಳ್ಳೇದು ಮಾಡುವತ್ತ ಯೋಚಿಸಿ.
ಇನ್ನು ಕೆಲವರು ವಕೀಲ ಎಚ್.ಬಿ.ಶಿವರಾಜು ಅವರಿಗೆ ಗೌರವಕೊಡದಿರುವುದಕ್ಕೆ ನಾವು ನಿಮ್ಮ ಕೇಸ್ ನಡೆಸುವುದಿಲ್ಲ ಎನ್‌ಒಸಿ ತೆಗೆದುಕೊಂಡು ಹೋಗಿ ಎಂದು ಕ್ರಿಮಿನಲ್ ಕೇಸ್‌ಗೆ ಸಂಬಂಧಪಟ್ಟಂತೆ ಎನ್‌ಒಸಿ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ. ವಕೀಲರು ನ್ಯಾಯದೀಶರ ಮುಂದೆ ವಾದ ಮಂಡಿಸಿ ಖಾಸಗಿ ಕಂಪನಿಗೆ ವಕೀಲರಾಗಿ ನೇಮಕಗೊಂಡಿರುವ ಬಗ್ಗೆ ತಿಳಿಸಿ ಬಳಿಕ ಈ ಪ್ರಕರಣದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನಿವೃತ್ತಿ ಘೋಷಿಸಿದ್ದಾರೆ.
ಅವರು ಈ ರೀತಿ ಘೊಷಣೆ ಮಾಡಿ ಎನ್‌ಒಸಿ ಕೊಡದೆ ಕೇಸ್‌ಅನ್ನು ಹಳ್ಳಹಿಡಿಸಿದ್ದರೆ ಪ್ರಶ್ನೆ ಮಾಡಬೇಕು. ಅವರು ಆ ರೀತಿ ಮಾಡದೆ ಎನ್‌ಒಸಿ ಕೊಟ್ಟಿದ್ದಾರೆ ಎಂದರೆ ಅಷ್ಟೆ ಗೌರವದಿಂದ ತೆಗೆದುಕೊಂಡು ಬೇರೆ ವಕೀಲರ ನೇಮಕ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಅವಾಜ್ ಹಾಕಿಸುವ ಪ್ರಮೆಯವೇನಿತ್ತು ಎಂಬುವುದೇ ಗೊತ್ತಾಗುತ್ತಿಲ್ಲ.
ಇನ್ನು 2021ರಿಂದ ಈವರೆಗೂ ನೌಕರರ ಪರವಾಗಿ ಏನು ಮಾಡಿದ್ದಾರೆ ಎಂಬುದರ ಬಗ್ಗೆಯೂ ಅವರು ಅತೀ ಶೀಘ್ರದಲ್ಲೇ ಹೇಳಿಕೆ ಬಿಡುಗಡೆ ಮಾಡಲಿದ್ದು ಆ ಬಗ್ಗೆಯೂ ಮುಂದಿನ ದಿನಗಳಲ್ಲಿ ವಿಜಯಪಥ ವರದಿ ಮಾಡಲಿದೆ.
Related

You Might Also Like
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...
9 ಎಕರೆಯಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ನಿರ್ಮಾಣ: ಉಸ್ತುವಾರಿ ಸಚಿವ ಕೆಎಚ್ಎಂ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯೋತ್ಸವ ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಆವತಿ ಗ್ರಾಮದ ಬಳಿ 9.10 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ,...
ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ...
ಸರ್ಕಾರ ಅತೀ ಶೀಘ್ರದಲ್ಲೇ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸಲಿದೆ: ಡಿಸಿಎಂ ಡಿಕೆಶಿ
ಬೆಂಗಳೂರು: ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ...
KKRTC: ತನ್ನದಲ್ಲದ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಮಹಿಳೆ- ಪ್ರಶ್ನಿಸಿದ್ದಕ್ಕೆ ಪ್ರಜ್ಞೆ ತಪ್ಪುವವರೆಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಸಂಬಂಧಿಕರು
ಕಲಬುರಗಿ: ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾದ ಮಹಿಳೆಗೆ ಇದು ನಿಮ್ಮ ಆಧಾರ ಕಾರ್ಡ್ ಅಲ್ಲ ನಿಮ್ಮದನ್ನು ಕೊಡಿ ಎಂದು ನಿರ್ವಾಹಕರು ಹೇಳಿದ್ದಕ್ಕೆ ಮಹಿಳೆ...