ನಮ್ಮ ಬೇಡಿಕೆ ಈಡೇರದೆ ಹೋದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧ: BMTC & KSRTC ಸಂಘದ ಅಧ್ಯಕ್ಷ ನಂಜುಂಡೇಗೌಡ ಎಚ್ಚರಿಕೆ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ ₹7500, ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ ₹5000 ಕೂಡಲೇ ನೀಡಬೇಕೆಂದು ಆಗ್ರಹಿಸಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ಪ್ರತಿಭಟನೆ ನಡೆಸಿತು.
“ನಿಧಿ ಅಪ್ಕೆನಿಕಟ್” ಕಾರ್ಯಕ್ರಮ ಅಂಗವಾಗಿ ನಿನ್ನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ಪಿಂಚಣಿದಾರರ 27ನೇ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಯೊಂದಿಗೆ ಮನವಿ ಪತ್ರವನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ (minister for labour & employment) ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆಯವರಿಗೆ ಈ ದಿನವೇ ಕಳುಹಿಸಿಕೊಡಬೇಕೆಂದು ಅಧಿಕಾರಿಗಳಿಗೆ ನೀಡಲಾಯಿತು.
ಬಳಿಕ ಸಂಘದ ಅಧ್ಯಕ್ಷ ನಂಜುಂಡೇಗೌಡ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಜುಲೈ 22ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಲಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ನಾವು ಉಗ್ರ ಹೋರಾಟಕ್ಕೆ ಸಿದ್ದ ಎಂಬ ಸಂದೇಶವನ್ನು ನೀಡಿದರು.
ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ್ ನರಗುಂದ ಮಾತನಾಡಿ, ಕಮಾಂಡರ್ ಶೋಕ್ ರಾವತ್ ಹಾಗೂ ಇತರೆ ಮುಖಂಡರ ಜತೆಗೂಡಿ, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರನ್ನು ಭೇಟಿ ಮಾಡಿ, ಇಪಿಎಸ್ ನಿವೃತ್ತರ ಬೇಡಿಕೆಗಳ ಸಂಬಂಧ ಕೈಗೊಂಡ ಎಲ್ಲ ಮಾಹಿತಿಯನ್ನು ಪ್ರತಿಭಟನಾ ನಿರತರಿಗೆ ನೀಡಿದರು.
ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ಇಪಿಎಸ್ ನಿವೃತ್ತರು ತೀವ್ರ ಸಂಕಷ್ಟದಲ್ಲಿದ್ದು, ಕಳೆದೊಂದು ದಶಕದಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ನಾವೆಲ್ಲರೂ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿದ್ದರೂ ಸಹ ಇದುವರವಿಗೂ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಟ್ರಸ್ಟಿನ ಅಧ್ಯಕ್ಷರಾದ ಬ್ರಹ್ಮಚಾರಿ, ವೇಲೂರು ಅಮರ್, ಶ್ರೀನಿವಾಸ ನಾಯ್ಡು, ಡಿಸ್ಕೋ ಶ್ರೀನಿವಾಸ್, ಸೂಣ್ಣಪ್ಪ ಹಾಗೂ ಇನ್ನೂ ಹಲವಾರು ಮುಖಂಡರು, ಎನ್ಎಸಿ ಖಜಾಂಚಿ ಕುಲಕರ್ಣಿ ಮಾತನಾಡುವವರಿದ್ದರು. ಆದರೆ ಸ್ಥಳೀಯ ಪೊಲೀಸರು ತಮ್ಮ ಮೇಲಧಿಕಾರಿಗಳಿಂದ ಸಂದೇಶ ಬಂದಿದೆ ಹಾಗಾಗಿ ಈ ಸಭೆಯನ್ನು ಬೇಗನೆ ಮುಕ್ತಾಯಗೊಳಿಸಿ ಎಂದು ಮನವಿ ಮಾಡಿದ್ದರಿಂದ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಈ ಅನಿರೀಕ್ಷಿತ ಬೆಳವಣಿಗೆಗೆ ನಂಜುಂಡೇಗೌಎ ವಿಷಾದ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಸಂಘದ ಖಜಾಂಚಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಸ್ವಾಗತಿಸುವ ಮೂಲಕ ಚಾಲನೆ ನೀಡಿದರು. ಸಂಘದ ಪದಾಧಿಕಾರಿಯಾದ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಟ್ರಸ್ಟ್ ಖಜಾಂಚಿ, ರಮೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...