ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿಗಳು ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಸೂಲಿಬೆಲೆ ಸೇರಿ 6 ಬಸ್ ನಿಲ್ದಾಣಗಳಲ್ಲಿ 18 ಆಹಾರ ಮಳಿಗೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಆಹಾರ ಸುರಕ್ಷತೆ ಕಾಪಾಡಿಕೊಳ್ಳದಕ್ಕೆ ನೋಟಿಸ್ ನೀಡಿ, 2000 ರೂ. ದಂಡ ವಿಧಿಸಿ, ಆಹಾರ ಉದ್ಯಮದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸಿದ್ದಾರೆ.
ಆಹಾರ ಉದ್ದಿಮೆ ಸ್ಥಳದಲ್ಲಿ ಪರಿಸರ ನೈರ್ಮಲ್ಯವಾಗಿರಬೇಕು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.
ಇನ್ನು ಈ ಬಗ್ಗೆ ಕರಪತ್ರ ವಿತರಿಸಿ ಅರಿವು ಮೂಡಿಸಿದ್ದು, ಈ ವಿಶೇಷ ಆಂದೋಲನದಲ್ಲಿ ಆಹಾರ ಸುರಕ್ಷತೆಯ ಅಂಕಿತಾಧಿಕಾರಿ ಡಾ.ಬಿ .ಧರ್ಮೇಂದ್ರ. ಹಾಗೂ ಆಹಾರ ಸುರಕ್ಷತಾಧಿಕಾರಿಗಳಾದ ಗೋವಿಂದರಾಜು, ನಾಗೇಶ, ಪ್ರವೀಣ್ ಭಾಗವಹಿಸಿದ್ದರು.
Related

Megha