NEWSಕೃಷಿಬೆಂಗಳೂರು

ಬೃಹತ್ ಇ-ಖಾತಾ ಮೇಳಕ್ಕೆ DCM ಡಿಕೆಶಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಬೃಹತ್ ಇ-ಖಾತಾ ಮೇಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದಾರೆ.

ಬಿಬಿಎಂಪಿ‌ ವ್ಯಾಪ್ತಿಯಲ್ಲಿ‌ ಬರುವ 25 ಲಕ್ಷ ಸ್ವತ್ತುಗಳ ಪೈಕಿ ಈಗಾಗಲೇ 5,34,674 ಸ್ವತ್ತುಗಳಿಗೆ ಖಾತಾದಾರರು ಅಂತಿಮ ಇ-ಖಾತಾವನ್ನು ಪಡೆದಿದ್ದು, ಬಿಬಿಎಂಪಿ e-Khata ವ್ಯವಸ್ಥೆಗೆ ಭಾರತ ಸರ್ಕಾರದಿಂದ 2024-25 ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ” ಸಂದಿದೆ.

ಯಲಹಂಕ ವಲಯದಲ್ಲಿನ ಒಟ್ಟು 2,28,146 ಸ್ವತ್ತು ಗಳ ಪೈಕಿ ಇಲ್ಲಿಯವರೆಗೆ 71,055 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ. ಬ್ಯಾಟರಾಯನಪುರ ವಿಭಾಗದಲ್ಲಿನ ಒಟ್ಟು 1,81,135 ಸ್ವತ್ತುಗಳ ಪೈಕಿ 51,289 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ.

ಇ-ಖಾತಾ ಮೇಳದ‌ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಯಲಹಂಕ ವಲಯದ ಸಹಕಾರ ನಗರ ಆಟದ ಮೈದಾನದಲ್ಲಿ ಈ ಮೇಳವನ್ನು ನಾಳೆಯೂ ಮುಂದುವರೆಸಲಾಗುತ್ತದೆ. ಇ-ಖಾತಾ ಪಡೆಯಬೇಕಿರುವ ನಾಗರಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ.

ಅಥವಾ ಬಿಬಿಎಂಪಿ ಎಲ್ಲಾ ವಾರ್ಡ್ ಗಳ ಕಂದಾಯ ಅಧಿಕಾರಿಗಳ ಕಛೇರಿ‌ , ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಇ-ಖಾತಾ ಪಡೆಯಬಹುದು ಅಥವಾ ಜನಸೇವಕರ ಸೇವೆ‌ ಪಡೆದು ಇ-ಖಾತಾ ಅರ್ಜಿ ಸಲ್ಲಿಸಲು 080-49203888 ಗೆ ಕರೆ ಮಾಡಿದರೆ, ತಮ್ಮ ಮನೆಗೆ ಜನ ಸೇವಕರು ಬಂದು ಇ-ಖಾತಾಗೆ ಅರ್ಜಿ ಸಲ್ಲಿಸಲಿದ್ದಾರೆ.

ಈ ವೇಳೆ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ ರೇವಣ್ಣ, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!