ಬೆಂಗಳೂರು: ಅತ್ಯಾಚಾರ ಮಾಡಿದ ಬಳಿಕ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದು ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದೆ.
ನಿನ್ನೆ ತಡರಾತ್ರಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮಧ್ಯರಾತ್ರಿ ಆಟೋದಲ್ಲಿ ಮಹಿಳೆ ಶವ ತಂದಿದ್ದ ದುಷ್ಕರ್ಮಿ, ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಗೆ ಬಿಸಾಕಿ ಪರಾರಿಯಾಗಿದ್ದಾನೆ.
ಇನ್ನು ಆಟೋದಲ್ಲಿ ಒಬ್ಬನೇ ಬಂದಿದ್ದ ಎಂದು ಹೇಳಲಾಗುತ್ತಿದೆ. ಹತ್ಯೆಯಾದ ಮಹಿಳೆ 30 ರಿಂದ 35 ವರ್ಷದವರು ಎಂದು ಹೇಳಾಗುತ್ತಿದೆ. ಸದ್ಯ ಕೊಲೆಯಾದ ಮಹಿಳೆಯ ಗುರುತು ಪತ್ತೆಗಾಗಿ ಪೊಲೀಸರು ಸಂಬಂಧಿಕರಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಇತ್ತ ಈ ಅಪರಿಚಿತ ಮಹಿಳೆ ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚನ್ನಮ್ಮನಕರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಹಂತಕರಿಗಾಗಿ ಹುಡುಕಾಟ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರಕರಣ ಹೇಗೆ ಬೆಳಕಿಗೆ ಬಂತು?: ಶನಿವಾರ ತಡರಾತ್ರಿ 1:40ರ ವೇಳೆಗೆ ವ್ಯಕ್ತಿಯೊಬ್ಬರು ಕಸ ಹಾಕಲು ಸ್ಕೇಟಿಂಗ್ ಗ್ರೌಂಡ್ ಬಳಿ ಬಂದಿದ್ದರು. ಈ ವೇಳೆ ಕಸದ ಗುಡ್ಡೆಯಲ್ಲಿದ್ದ ಚೀಲವೊಂದರಲ್ಲಿ ತಲೆಕೂದಲು ಕಾಣಿಸಿದೆ. ಚೀಲ ಬಿಚ್ಚಿ ನೋಡಿದಾಗ ಮಹಿಳೆಯ ದೇಹ ಚೀಲದಲ್ಲಿರುವುದು ಗೊತ್ತಾಗಿದೆ.
ತಕ್ಷಣವೇ ಅವರು ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಒಬ್ಬನೇ ವ್ಯಕ್ತಿ ಆಟೋದಲ್ಲಿ ಮೂಟೆ ಸಮೇತ ತಂದು ಬಿಸಾಡಿ ಹೋಗಿರುವುದು ಗೊತ್ತಾಗಿದೆ. ಸದ್ಯ ಪೊಲೀಸರು ಮೃತಪಟ್ಟಿರೋದು 30-35ನೇ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದೆ.

ಮೃತ ಮಹಿಳೆ ಅರ್ಬನ್ ಕಂಪನಿ ಟಿ ಶರ್ಟ್ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ. ಆಕೆಯ ದೇಹದ ಮೇಲೆ ಒಳ ಉಡುಪುಗಳು ಇರಲಿಲ್ಲವಾದ್ದರಿಂದ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Related
