ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ ವಾಹನಗಳಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಚಾಲನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ದೇವನಹಳ್ಳಿ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ತಾಯಿಯ ಹೆಸರಿನಲ್ಲಿ ಗಿಡ ನೆಡುವ” ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ 150 ಗಿಡಗಳನ್ನು ನೆಡಲಾಯಿತು.
ವನಮಹೋತ್ಸವ ಕಾರ್ಯಕ್ರಮದಲ್ಲಿ ಅಂಗವಿಕಲರ ಶೇ.5 ರ ಯೋಜನೆಯಡಿ ತ್ರಿಚಕ್ರ ವಾಹನಗಳನ್ನು ಫಲಾನುಭವಿಗಳಾದ ಮೇಘನಾ. ಎಸ್, ಗಿರಿಜಾ ಜೆ, ಚಾಂದ್ ಪಾಷ, ರಾಜಪ್ಪ, ಶಶಿಕಲಾ ಇವರಿಗೆ ವಿತರಿಸಿದರು.
ಜತೆಗೆ ದೇವನಹಳ್ಳಿ ಪುರಸಭೆಗೆ ನೂತನ ಸ್ವಚ್ಛತಾ ವಾಹನಗಳನ್ನು (ಆಟೋ ಟಿಪ್ಪರ್ಸ್ ಅಥವಾ 15 ಫೈನಾನ್ಸ್) ಖಾಸಗಿ ಸಂಸ್ಥೆ ವತಿಯಿಂದ ಮೂರು ಆಟೋ ವಾಹನಗಳು ಮತ್ತು ಒಂದು ಹಿಟಾಚಿ ವಾಹನಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಬಿ.ಎಸ್ ರಮೇಶ್, ದೇವನಹಳ್ಳಿ ಪುರಸಭೆಯ ಅಧ್ಯಕ್ಷರಾದ ಮುನಿಕೃಷ್ಣ, ಉಪಾಧ್ಯಕ್ಷರಾದ ಜಿ.ಎ ರವೀಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷರು ಕೋಮಲ ಹಾಗೂ ದೇವನಹಳ್ಳಿ ಪುರಸಭೆಯ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Related
