- ಘನತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುವ ಮುಂಚೂಣಿ ಕಾರ್ಮಿಕರಿಗೆ ತರಬೇತಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ತ್ಯಾಜ್ಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಅಧ್ಯಕ್ಷ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ (ಬಿ.ಎಸ್.ಡಬ್ಲ್ಯೂ.ಎಂ.ಎಲ್), ಸಿ40 ನಗರಗಳ ಸಹಯೋಗ, ಸೆನ್ಸಿಂಗ್ ಲೋಕಲ್ ನೇತೃತ್ವ ಹಾಗೂ ಸಾಹಸ್ ಸಂಸ್ಥೆಯ ಸಹಕಾರದೊಂದಿಗೆ ಇಂದು ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಗರದಲ್ಲಿ ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ, ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ, ತುರ್ತು ವೈದ್ಯಕೀಯ ಸಹಾಯ ಮಾಡಲು ತಿಳಿಸಿದರು.
ತ್ಯಾಜ್ಯ ಕಾರ್ಮಿಕರು ಹಾಗೂ ಮೇಲ್ವಿಚಾರಣೆ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಸಭೆಗಳನ್ನು ನಡೆಸಬೇಕು. ಆ ಮೂಲಕ, ತಕ್ಷಣದ ಸಮಸ್ಯೆಗಳನ್ನು ಪತ್ತೆಹಚ್ಚಿ, ಸಂವಹನಕ್ಕೆ ವೇದಿಕೆ ಒದಗಿಸಿ ಒಟ್ಟಿಗೆ ಸಮಸ್ಯೆ ಪರಿಹಾರ ತಂತ್ರ ರೂಪಿಸಲು ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಬಲಪಡಿಸುವುದರ ಜೊತೆಗೆ, ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರನ್ನು ಉದ್ಯಮಿಗಳಾಗುವ ವ್ಯವಸ್ಥೆಯನ್ನು ಮಾಡಲಾಗುವುದು. ಜೊತೆಗೆ ಗುರುತಿನ ಚೀಟಿಗಳನ್ನು ಕೂಡಾ ನವೀಕರಣ ಮಾಡಿ ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯಡಿ ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಹವಾಮಾನ ಕ್ರಿಯೆಯ ಕುರಿತಾಗಿ ತರಬೇತಿ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿನಂದನೆಗಳನ್ನು ತಿಳಿಸಿದರು.

5 ವಲಯಗಳಲ್ಲಿ ತರಬೇತಿ: ನಗರದ ಪೂರ್ವ, ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ಸೇರಿದಂತೆ ಐದು ವಲಯಗಳಲ್ಲಿ 600ಕ್ಕಿಂತ ಹೆಚ್ಚು ಮುಂಚೂಣಿಯ ತ್ಯಾಜ್ಯ ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಮೂರು ಹಂತದ ತರಬೇತಿಗಳನ್ನು ನೀಡಲಾಗಿದೆ. ಮಾರ್ಚ್–ಜೂನ್ 2025ರ ನಡುವೆ ನಡೆದ ಸಾಮಾಜಿಕ ಸಂವಾದದ ಮೂಲಕ 75 ತ್ಯಾಜ್ಯ ಕಾರ್ಮಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರ ಮಾರ್ಗಗಳನ್ನು ರೂಪಿಸಿದ್ದಾರೆ.
ಮುಂಚೂಣಿ ಕಾರ್ಮಿಕರಿಗೆ ತರಬೇತಿ ನೀಡುವ ಉದ್ದೇಶ: ಘನ ತ್ಯಾಜ್ಯ ನಿರ್ವಹಣೆಯು ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯ(BCAP) ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಭಾಗದಲ್ಲಿ ಕಾರ್ಯನಿವಹಿಸುತ್ತಿರುವ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್‌ಗಳು, ಲಿಂಕ್ ವರ್ಕರ್ಸ್ಗಳು ಹಾಗೂ ಒಣ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಆಯಾ ವಲಯಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸಿ, ಅವರಿಗೆ ತ್ಯಾಜ್ಯ ವಿಲೇವಾರಿ, ಬಲ್ಕ್ ವೇಸ್ಟ್, ತ್ಯಾಜ್ಯದಿಂದ ಆದಾಯ ಗಳಿಸುವ, ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ.
ಈ ವೇಳೆ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸ್ನೇಹಲ್, ರಮೇಶ್, ದಿಗ್ವಿಜಯ್ ಬೋಡ್ಕೆ, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ, ಮಾರ್ಷಲ್‌ಗಳು, ಲಿಂಕ್ ವರ್ಕರ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Related


You Might Also Like
ಆ.31ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕ ಶೇ.1 ರಿಂದ ಶೇ.2ರಷ್ಟು ಪರಿಷ್ಕರಿಸಿ ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಆ.31ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ...
ಎಂಎಸ್ಪಿ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟದಿಂದ ಪಾರು ಮಾಡಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ಗೆ ಮನವಿ
ಮೈಸೂರು: ಸುತ್ತೂರಿನಿಂದ ವರುಣ ಮೂಲಕ ಮೈಸೂರಿಗೆ ಬರುತ್ತಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ವರುಣ ಬಳಿ ನಿಲ್ಲಿಸಿ ಎಂಎಸ್ಪಿ ಬೆಂಬಲ ಬೆಲೆ ಘೋಷಣೆ...
BMTC ಸಂಸ್ಥೆಯಲ್ಲಿ ಪ್ರಸ್ತುತ 27,595 ನೌಕರರಿಗೆ ಹಲವು ಕಲ್ಯಾಣ ಯೋಜನೆಗಳು ಜಾರಿ: ಎಂಡಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿ 27 ವರ್ಷಗಳನ್ನು ಪೂರೈಸಿದ್ದು, ಪ್ರಸ್ತುತ ರಾಷ್ಟ್ರದಲ್ಲಿಯೇ ಒಂದು ಮಾದರಿ ನಗರ ಸಾರಿಗೆ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ ವ್ಯವಸ್ಥಾಪಕ ನಿರ್ದೇಶಕ...
ಯಾವುದೇ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿಲ್ಲ ನಮ್ಮ ಚಾಲಕನ ಅತಿ ವೇಗ, ಅಜಾಗರೂಕತೆಯೇ ಕಾರಣ: ಯಾವುದೇ ತನಿಖೆ ನಡೆಸದೇ ತಪ್ಪೊಪ್ಪಿಕೊಂಡ KSRTC
ಅದೇ ನಿಮ್ಮ ಮೇಲೆ ಯಾವುದೇ ತನಿಖೆ ಮಾಡದೆ ಈ ರೀತಿ ಆರೋಪ ಹೊರಿಸಿದರೆ ಒಪ್ಪಿಕೊಳ್ಳುತ್ತೀರಾ ಎಂಡಿ ಅಕ್ರಮ್ ಪಾಷ ಅವರೆ? ಬೆಂಗಳೂರು: ತಲಪಾಡಿಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ...
KSRTC: ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರಿಗೆ ನೌಕರರ ಸಭೆ ಸ್ನ್ಯಾಕ್ಸ್, ಒಂದು ಕಪ್ಪು ಟೀ ಅಥವಾ ಕಾಫಿಗಷ್ಟೇ ಸೀಮಿತ
ಇಂದು ಜಂಟಿ ಕ್ರಿಯಾ ಸಮಿತಿ- ಸಾರಿಗೆ ಅಧಿಕಾರಿಗಳ ನಡುವೆ ನಡೆದ ರಾಜೀ ಸಂಧಾನ ಸಭೆ ವಿಫಲ ಮತ್ತೆ ಸೆ.26ಕ್ಕೆ ಮುಂದೂಡಿಕೆ ಬೆಂಗಳೂರು: ಕಾರ್ಮಿಕ ಇಲಾಖೆಯ ಆಯುಕ್ತರು ಇಂದು...
ರಾಜಣ್ಣ ಮನೆಯಲ್ಲಿ ಗೌರಿಸುತನ ಸಂಭ್ರಮ – ರಾಜಧಾನಿಯಲ್ಲಿ 2,19,153 ಗಣಪನ ವಿಸರ್ಜನೆ
ಬೆಂಗಳೂರು: ಕುಮಾರಸ್ವಾಮಿ ಬಡಾವಣೆಯ 2ನೇ ಹಂತ 8 ನೇ ಮುಖ್ಯರಸ್ತೆ 12ನೇ ಅಡ್ಡ ರಸ್ತೆಯಲ್ಲಿರುವ ರಾಜಣ್ಣ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗಣೇಶ ಮೂರ್ತಿಯನ್ನು...
KKRTC ಬೀದರ್: ಅಧಿಕಾರಿಗಳ ಕಿರುಕುಳಕ್ಕೆ ನೊಂದು ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಚಾಲಕ ರಾಜು
ಬೀದರ್: ಅಧಿಕಾರಿಗಳ ಕಿರುಕುಳದಿಂದ ಮನನೊಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬೀದರ್ ಘಟಕ-1ರ ಚಾಲಕ ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟಕದಲ್ಲಿ...
KKRTC: ಲಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಸ್- ತಪ್ಪಿದ ಭಾರಿ ಅನಾಹುತ
ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಬೀದರ್ ಘಟಕ-1ರ ಡಿಎಂ ಬೀದರ್: ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ...
BMTC: ಕರ್ತವ್ಯ ನಿರತ ಚಾಲಕರು ಮೊಬೈಲ್ ಬಳಸಿದರೆ ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಿ- ತನಿಖಾ ಸಿಬ್ಬಂದಿಗೆ ಎಂಡಿ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗಳು ಮಾರ್ಗದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸಿದರೆ ಅವರ...