NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಲು ಮುಂದಾಗಿದೆ ಅದನ್ನ ಬೆಂಬಲಿಸಿ -ಎಲ್ಲ ಸಂಘಟನೆಗಳಿಗೂ ನೌಕರರ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿರುವ ಸಂಘಟನೆಗಳು ಈ ಹಿಂದಿನಿಂದಲೂ ತಮ್ಮ ಹಳೆಯ ಸಂಪ್ರದಾಯದಂತೆ ವೇತನ ಪರಿಷ್ಕರಣೆ ಆಗುತ್ತಿರುವುದರಿಂದ ಇವತ್ತಿನ ದಿನಗಳಲ್ಲಿ ಸಾರಿಗೆ ನೌಕರರ ವೇತನ ಸರ್ಕಾರಿ ನೌಕರಿಗಿಂತ ಸುಮಾರು ಶೇ.50 ಕಡಿಮೆ ಇದೆ.

ಇದು ತಮಗೆ ಗೊತ್ತಿದ್ದರೂ ಸಹ ಇವತ್ತಿನ ದಿನಗಳಲ್ಲಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ತಾವು ಶೇ.25ರಷ್ಟು ವೇತನಕ್ಕಾಗಿ ಸರ್ಕಾರದ ಮುಂದೆ ಬೇಡಿಕೆ ಇಡುತ್ತಿದ್ದೀರಿ. ಇದಕ್ಕೆ ಕಾರಣ ಏನು…? ಸಾರಿಗೆ ನೌಕರರ ಇಂಕ್ರಿಮೆಂಟ್‌ಗಳು ಸಹ ಸರ್ಕಾರಿ ನೌಕರರಿಗಿರುವಂತೆ ಈ ವರೆಗೂ ಸಹ ಸರಿ ಸಮಾನ ಇಲ್ಲ.

ಹಾಗೆಯೇ ಗ್ರಾಜುಟಿಯೂ ಸಹ ಸರ್ಕಾರಿ ನೌಕರರಂತೆ ಸಾರಿಗೆ ನೌಕರರಿಗೂ ಸಹ ಶೇ.50ಕ್ಕೆ ( ಇದು 2002ರ ಹಿಂದೆ ನೇಮಕಗೊಂಡಿರುವವರಿಗೆ ಶೇ.100ರಷ್ಟಿದೆ) ಕಡಿಮೆ ಮಾಡಲಾಗಿದೆ. ಹಾಗೆಯೇ ಸಾರಿಗೆ ಸಂಸ್ಥೆಯಲ್ಲಿ 2006ರಲ್ಲಿ ನೇಮಕಗೊಂಡು ಇಂದು ಅನಿವಾರ್ಯ ಕಾರಣಗಳಿಂದ ನಿವೃತ್ತಿ ಹೊಂದುತ್ತಿರುವ ಸಾರಿಗೆ ನೌಕರರಿಗೆ ಗ್ರಾಜುಟಿ ಹಣ ಹೆಚ್ಚು ಕಡಿಮೆ 3,25,000 ಮಾತ್ರ ಸಿಗುತ್ತಿದೆ.

ಆದರೆ, ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ಮೇಲೆ ಗ್ರಾಜುಟಿ ಹಣದ ಜತೆಗೆ ಸರ್ಕಾರಿ ಪಿಂಚಣಿ ತೆಗೆದುಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಸಾರಿಗೆ ನೌಕರರು ಸೇವೆಯಲ್ಲಿ ಇರುವಾಗಲೂ ನೆಮ್ಮದಿ ಇಲ್ಲ. ಇನ್ನು ಈಗ ನಿವೃತ್ತಿ ಹೊಂದಿದ ಮೇಲೆಯೂ ನೆಮ್ಮದಿ ಇಲ್ಲ. ಇದಕ್ಕೆಲ್ಲ ಕಾರಣ ನಮ್ಮ ಸಾರಿಗೆ ಸಂಸ್ಥೆಯಲ್ಲಿರುವ ಸಂಘಟನೆಗಳಲ್ಲವೇ?

ಸಾರಿಗೆ ನೌಕರರಿಗೆ ಸೇವೆಯಲ್ಲಿ ಇರುವಾಗ 148/05ರ ತೀರ್ಪಿನಂತೆ ವೇತನ ಆದರೆ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಾರೆ ಎಂದು ಬೊಬ್ಬೆಹೊಡೆಯುತ್ತಿದ್ದೀರಿ. ಆದರೆ, 2018ರಿಂದ 2025 ಜುಲೈ ತಿಂಗಳು ಬಂದರೂ ಈ ಸಂಬಂಧ ಹೈ ಕೋರ್ಟ್‌ನಲ್ಲಿ ಆಗಿರುವ ಪ್ರಕರಣಕ್ಕೆ ಸ್ಟೇ ಏಕೆ ತಂದಿಲ್ಲ.

ನಾವು ಈಗಾಗಲೇ ನೊಂದು ಬೆಂದು ಬಸವಳಿದು ಹೋಗಿದ್ದೇವೆ. ನಮಗೆ ಸೇವೆಯಲ್ಲಿದ್ದಾಗಲೂ ಈ ವೇತನ ಸಿಗಲಿಲ್ಲ ನಿವೃತ್ತಿ ಹೊಂದಿದ ಮೇಲೆಯೂ ಸಿಕ್ಕಿಲ್ಲ ಎಂದು ನಿವೃತ್ತ ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ. ಇತ್ತ ಡ್ಯೂಟಿ ಮಾಡುತ್ತಿರುವ ನೌಕರರು ಕೂಡ ಇದು ಕನ್ನಡಿ ಒಳಗಿನ ಗಂಟು ಇದನ್ನು ಬಿಟ್ಟು ಸುಮ್ಮನೆ ನಮಗೆ ಸರಿ ಸಮಾನ ವೇತನ ಮಾಡಿಸುವತ್ತ ಮನಸ್ಸು ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.

ಇನ್ನು ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಾಗೂ ಪಿಂಚಣಿ ವಿಷಯ ತಮ್ಮ ಮನವಿಯಲ್ಲಿಯೇ ಇಲ್ಲ. ಹೀಗಾಗಿ ಇನ್ನುಮುಂದಾದರೂ ಸಾರಿಗೆ ಸಂಸ್ಥೆಯಲ್ಲಿರುವ ಸಂಘಟನೆಗಳು ತಮ್ಮ ಹಿಂದಿನ ಸಂಪ್ರದಾಯದಂತೆ ವೇತನ ಪರಿಷ್ಕರಣೆ ಬಗ್ಗೆ ಮನವಿ ಕೊಡಲೇ ಬಾರದು. ಸಾರಿಗೆ ನೌಕರರ ಅಭಿಪ್ರಾಯದಂತೆ ಸರ್ಕಾರಿ ನೌಕರರ ಸರಿಸಮಾನ ವೇತನದ ಜತೆಗೆ ಇನ್ನಿತರ ಎಲ್ಲ ಸವಲತ್ತುಗಳನ್ನು ಒದಗಿಸುವ ಬಗ್ಗೆ ಹೊಸ ಹಾಗೂ ಹಳೆಯ ಸಂಘಟನೆಗಳು ಮನವಿ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಇನ್ನಾದರೂ ನೌಕರರ ಮನಸ್ಸಿನಲ್ಲಿರುವುದನ್ನು ಅರ್ಥಮಾಡಿಕೊಂಡು ನೌಕರರಿಗೆ ಸರ್ಕಾರದಿಂದ ಹಾಗೂ ಸಾರಿಗೆ ಆಡಳಿತ ಮಂಡಳಿಯಿಂದ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸುವತ್ತ ನಿರ್ಧಾರ ಮಾಡಿ ಅದನ್ನು ಬಿಟ್ಟು ಈ ರೀತಿ ಗೊಂದಲ ಸೃಷ್ಟಿಸಿ ನೌಕರರಿಗೆ ಸಿಗಬೇಕಿರುವ ಲವಲತ್ತುಗಳನ್ನು ಕಿತ್ತುಕೊಳ್ಳುವಂತಹ ಕೀಳು ಮಟ್ಟಕ್ಕೆ ಇಳಿಯಬೇಡಿ ಎಂದು ಸಾರಿಗೆ ನೌಕರರು ಹಾಗೂ ಅಧಿಕಾರಿಗಳು ಎಲ್ಲ ಸಂಘಟನಗೆಳಿಗೂ ಆಗ್ರಹಿಸಿದ್ದಾರೆ.

ಅಲ್ಲದೆ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣೆ ವೇಳೆ ತಮ್ಮ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಮಾಡುವುದಾಗಿ ಭರವಸೆ ನೀಡಿದೆ. ನೀವು ಕೊಟ್ಟಿರುವ ಭರವಸೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಅದನ್ನು ಬಿಟ್ಟು, ಐಟಿ ಕಾಯ್ದೆ ಅದು ಇದು ಎಂದು ಸರ್ಕಾರದ ದಾರಿ ತಪ್ಪಿಸಬೇಡಿ. ಇದರಿಂದ ಸಾರಿಗೆ ನೌಕರರಿಗೆ ತುಂಬ ಅನ್ಯಾಯವಾಗುತ್ತಿದೆ. ಅದನ್ನು ಸರ್ಕಾರಿ ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಹೊರಟಿದೆ ಅದನ್ನು ಬೆಂಬಲಿಸಿ ಎಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.

Megha
the authorMegha

Leave a Reply

error: Content is protected !!