CRIMENEWSನಮ್ಮಜಿಲ್ಲೆ

KSRTC: ಎದುರು ವಾಹನಕ್ಕೆ ಜಾಗ ಬಿಡುವ ವೇಳೆ ಭತ್ತದ ಗದ್ದೆಗೆ ಪಲ್ಟಿ ಹೊಡೆದ ಬಸ್‌- 45ಕ್ಕೂ ಪ್ರಯಾಣಿಕರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಚಾಲಕ‌ನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ತಾಲೂಕಿನ ಶಿವಳ್ಳಿ-ಹಾಡ್ಯ ನಡುವೆ ಭತ್ತದ ಗದ್ದೆಗೆ ಪಲ್ಟಿ ಹೊಡೆದ ಪರಿಣಾಮ 45ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಬಸ್‌ ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿದ್ದಾಗ ಮತ್ತೊಂದು ವಾಹನಕ್ಕೆ ಜಾಗ ಬಿಡುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ಕಳೇದುಕೊಂಡ ಬಸ್‌ ಭತ್ತದ ಗದ್ದೆಗೆ ಉರುಳಿ ಬಿದ್ದಿದೆ.

ಈ ವೇಳೆ ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನು ಗಾಯಗೊಂಡ ಎಲ್ಲರನ್ನು ಸ್ಥಳೀಯರ ಸಹಕಾರದಿಂದ ಆಂಬುಲೆನ್ಸ್‌ ಮತ್ತು ಖಾಸಗಿ ವಾಹನಗಳ ಮೂಲಕ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಲಾಗಿದೆ.

ಈ ವೇಳೇ ಸಣ್ಣಪುಟ್ಟ ಗಾಯಗೊಂಡಿದ್ದವರನ್ನು ಹೊರರೋಗಿಗಳಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಬಂಧ ಶಿವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!