ರಾಯಚೂರು: ಕಂಠಮಟ್ಟ ಕುಡಿದು ಶಾಲೆ ಅಡುಗೆ ಕೋಣೆ ಬಾಗಿಲ ಮೆಟ್ಟಿಲುಗಳ ಮೇಲೆ ಮಲಗಿದ್ದ ಎಚ್‌ಎಂ ಅಮಾನತು

ರಾಯಚೂರು: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲೆಯ ಅಡುಗೆ ಕೊಠಡಿಯ ಮೆಟ್ಟಿಲುಗಳ ಮೇಲೆ ಮಲಗಿದ್ದರು, ಈ ಹಿನ್ನೆಯಲ್ಲಿ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ನಿಂಗಪ್ಪ ನಿತ್ಯ ಫುಲ್ ಟೈಟಾಗಿ ಶಾಲೆಗೆ ಬರುತ್ತಿದ್ದ ಎಚ್‌ಎಂ ಆಗಿದ್ದು, ಅವರನ್ನು ಸದ್ಯ ಅಮಾನತು ಮಾಡಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಆದೇಶ ಹೊರಡಿಸಿದ್ದಾರೆ.
ಈ ಹೆಡ್ ಮಾಸ್ಟರ್ ಕಂಠಪೂರ್ತಿ ಕುಡಿದು ಶಾಲಾ ಅಡುಗೆ ಕೋಣೆ ಬಾಗಿಲಿನ ಮೆಟ್ಟಿಲುಗಳ ಮೇಲೆ ಮಲಗಿದ್ದ. ಇದು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದೆ.
ಮದ್ಯಪಾನ ಮಾಡಿ ಶಾಲಾ ಆವರಣದಲ್ಲಿ ಮಲಗಿದ್ದ ಹೆಡ್‌ಮಾಸ್ಟರ್ ನಿಂಗಪ್ಪನನ್ನ ಅಮಾನತು ಮಾಡಿದ್ದು, ಕರ್ತವ್ಯ ಲೋಪ, ದುರ್ನಡತೆ ಹಾಗೂ ಬೇಜವಾಬ್ದಾರಿತನ ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಆದೇಶದಲ್ಲಿ ತಿಳಿಸಿದ್ದಾರೆ.
ಈ ಎಚ್‌ಎಂ ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಐ ಹೆಡ್‌ಮಾಸ್ಟರ್ ಆಗಿದ್ದು, ಈತ ಬಿಸಿಯೂಟ ಅಡುಗೆ ಮಾಡುವ ಮಹಿಳೆಯರೊಂದಿಗೂ ಅಸಭ್ಯ ವರ್ತನೆ ತೋರಿದ್ದ ಎಂಬ ಆರೋಪವಿದೆ.
ಇನ್ನು ಈ ಹಿಂದೆ ಗ್ರಾಮಸ್ಥರು, ಪೋಷಕರು ಎಷ್ಟೇ ಬಾರಿ ಛೀಮಾರಿ ಹಾಕಿದ್ರು ಈತ ಬದಲಾಗಿಲ್ಲ. ನಿತ್ಯ ಕುಡಿದು ಶಾಲೆಗೆ ಬರುತ್ತಿದ್ದ ಈತನ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಿರುವುದು ಸರಿಯಾಗಿದೆ ಎಂದು ಗ್ರಾಮಸ್ಥರು ಕೂಡ ಹೇಳುತ್ತಿದ್ದಾರೆ.

Related
