NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮುಷ್ಕರಕ್ಕೆ ಹೋದರೆ ಹುಷಾರ್‌ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.

ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.

ಇದರ ಭಾಗವಾಗಿ ನಿನ್ನೆ ಅಂದರೆ ಜು.30ರಂದು ನಗರದ ಫ್ರೀಡಂಪಾರ್ಕ್‌ನಲ್ಲೂ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದು, ಆ ಸತ್ಯಾಗ್ರಹ ಬಹುತೇಕ ಯಶಸ್ವಿಯೂ ಆಗಿದೆ. ಇದನ್ನು ಗಮನಿಸಿರುವ ನಿಗಮದ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಆ.5ರ ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನವಾಗಿ ನೌಕರರ ವಿರುದ್ಧ ಕ್ರಮ ಜರುಗಿಸಲು ಮುಂದಾಗುತ್ತಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸಾಮೂಹಿಕ ಉಪವಾಸ ಸತ್ಯಾಗ್ರಹದಲ್ಲಿ ಅಧಿಕಾರಿಗಳನ್ನು ನಾವು ಮುಷ್ಕರಕ್ಕೆ ಬಂಬಲಿ ನೀಡಿ ಎಂದು ಕರೆಯುತ್ತಿದ್ದೇವೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದು, ಇಲ್ಲಿ ವೇತನ ಹೆಚ್ಚಳವಾದರೆ ಅದು ನಿಗಮಗೂ ಕೂಡ ಆಗುತ್ತದೆ. ಹೀಗಾಗಿ ಬೆಂಬಲಿಸಿ ಎಂದು ಕೇಳಿರುವುದಾಗಿ ವೇದಿಕೆಯಲ್ಲೇ ತಿಳಿಸಿದ್ದಾರೆ.

ಆದರೆ, ಇಲ್ಲಿ ನೌಕರರು ಮುಷ್ಕರಕ್ಕೆ ಬಂಬಲ ಕೊಡುವುದಿರಲಿ ನೌಕರರು ಬಸ್‌ ನಿಲ್ಲಿಸಿ ಮುಷ್ಕರ ಮಾಡಿದರೆ ಮುಲಾಜಿಲ್ಲದೆ ಅಂಥವರನ್ನು ಅಮಾನತು ಮಾಡಿ ಎಂದು ಸೂಚನೆ (instruction) ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಮುಷ್ಕರದಲ್ಲಿ ಭಾಗವಹಿಸಲು ಮುಂದಾಗುತ್ತಿರುವ ನೌಕರರ ಹೆಸರನ್ನು ಪಟ್ಟಿಮಾಡಿಕೊಳ್ಳಲಾಗುತ್ತಿದೆ.

ಇದರ ಜತೆಗೆ ಮುಷ್ಕರದ ದಿನಗಳಲ್ಲಿ ಯಾರಿಗೂ ರಜೆಗಳನ್ನು ಕೊಡಬಾರದು ಈಗಾಗಲೇ ಆ.5ರಿಂದ ರಜೆ ತೆಗೆದುಕೊಂಡಿರುವವರ ರಜೆಗಳನ್ನು ರದ್ದು ಮಾಡಿ ಡ್ಯೂಟಿಗೆ ಬರುವುದಕ್ಕೆ ತಾಕೀತು ಮಾಡಿ ಎಂಬ ಸೂಚನೆಯನ್ನು ಡಿಪೋಮಟ್ಟ ಅಧಿಕಾರಿಗಳಿಗೆ ಮೇಲಧಿಕಾರಿಗಳು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್‌ನಿಲ್ಲಿಸಿ ಮುಷ್ಕರಕ್ಕೆ ಹೋಗುವ ನೌಕರರನ್ನು ಕೂಡಲೇ ಅಮಾನತು ಮಾಡಬೇಕು. ಜತೆಗೆ ಈಗಾಗಲೇ ಅಂದಿನಿಂದ ರಜೆ ತೆಗೆದುಕೊಂಡಿರುವ ನೌಕರರ ರಜೆಗಳನ್ನು ರದ್ದು ಮಾಡ ಡ್ಯೂಟಿಗೆ ಬರುವಂತರ ತಿಳಿಸಿ ಎಂದು ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಇನ್ನೆಲೆಯಲ್ಲಿ ನೌಕರರು ಈಗ ಆ.5ರಿಂದ ನಡೆಯುವ ಮುಷ್ಕರಕ್ಕೆ ನಾವು ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಇನ್ನು ಕೆಲ ನೌಕರರು ಅಧಿಕಾರಿಗಳು ಮುಷ್ಕರವನ್ನು ಬೆಂಬಲಿಸದಿದ್ದರೆ ನಾವು ಕೂಡ ಹೋಗುವುದಿಲ್ಲ ಡ್ಯೂಟಿಗೆ ಹೋಗುತ್ತೇವೆ ಎಂಬ ನಿಲುವಮನ್ನು ತಾಳಿದ್ದಾರೆ. ಹೀಗಾಗಿ ಆ.5ರ ಮುಷ್ಕರ ಅಧಿಕಾರಿಗಳ ನಡೆಯ ಮೇಲೆ ನಿಂತಿದೆ ಎಂದು ನೌಕರರು ಅಭಿಪ್ರಾಯಪಟ್ಟಿದ್ದಾರೆ.

Megha
the authorMegha

Leave a Reply

error: Content is protected !!