ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಳಿದು ಇಂದಿಗೆ ಮೂರು ದಿನವಾಯಿತು. ಆದರೆ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿಯೇ ಸಾಗುತ್ತಿದೆ.
ಮೊನ್ನೆ ಕೆಎಸ್ಆರ್ಟಿಸಿಯಲ್ಲಿ ಅಂತರ ಜಿಲ್ಲೆಗಳಿಗೆ ಹೋಗುವ ಜನರು ಮುಗಿಬಿದ್ದು ಬಸ್ ಹತ್ತಿದ್ದರು. ಇನ್ನು ನಿನ್ನೆ ಇಡೀ ರಾತ್ರಿ ಬಸ್ ನಿಲ್ದಾಣದಲ್ಲೇ ಕಾಲ ಕಳೆದು ಬೆಳಗ್ಗೆ ಬಸ್ ಏರಿ ಹೋದರು. ಆದರೆ ಇಂದು ಪ್ರಯಾಣಿಕರಿಲ್ಲದೆ ವಿವಿಧ ಜಿಲ್ಲೆಗಳಿಗೆ ಹೋಗುವ ಬಸ್ಗಳು ಖಾಲಿಯಾಗಿ ನಿಂತಿವೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಬೆಳಗ್ಗೆ 7 ಗಂಟೆಗೆ ಹೊರಡಬೇಕಿರುವ ಬಸ್ಗಳು ಪ್ರಯಾಣಿಕರಿಲ್ಲದೆ 8.30 ಆದರೂ ಕೆಂಪೇಗೌಡ ಬಸ್ ನಿಲ್ದಾಣದಲ್ಲೇ ನಿಂತಿದ್ದು, ಜನರ ಬರುವಿಕೆಗೆ ಕಾಯುತ್ತಿವೆ. ಇನ್ನು ನಿಗದಿತ ಪ್ರಯಾಣಿಕರು ಇಲ್ಲದಿದ್ದರೆ ಬಸ್ಗಳನ್ನು ಓಡಿಸುವುದು ಕಷ್ಟಸಾಧ್ಯ. ಆದ್ದರಿಂದ ಚಾಲಕರು ಮತ್ತು ನಿರ್ವಾಹಕರು ಇರುವ 2-3 ಪ್ರಯಾಣಿಕರನ್ನು ಹೊತ್ತುಕೊಂಡುಹೋಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಈ ನಡುವೆ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಸಹ ಜನರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಬಲವಾದ ಕಾರಣವು ಇದೆ. ಕಳೆದ ಮೂರು ದಿನದಲ್ಲಿ ನೂರಾರು ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು. ಇದರಿಂದ ಭಯಗೊಂಡಿರುವ ಜನರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಬಿಎಂಟಿಸಿ ಬಸ್ಗಳು ಖಾಲಿಯಾಗಿಯೇ ಓಡುತ್ತಿವೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈಗಾಗಲೇ ನಷ್ಟದಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸಾರಿಗೆ ಅಧಿಕಾರಿಗಳು ಹೀಗೆ ಖಾಲಿಯಾಗಿಯೇ ಬಸ್ಗಳನ್ನು ಓಡಿಸಿದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಮೂಲಕ ತಮ್ಮ ನೌಕರರಿಗೆ ವೇತನವನ್ನು ನೀಡುವುದು ಕಷ್ಟವಾಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಆದರೆ ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಾರಿಗೆ ಅಧಿಕಾರಿಗಳಿಗೆ ಇದು ಉಲ್ಟಾ ಹೊಡೆದಿರುವುದರಿಂದ ಮುಂದೆ ಏನು ಮಾಡಬೇಕು ಎಂಬ ದಾರಿಕಾಣದೆ ಬಸ್ಗಳನ್ನು ಓಡಿಸಬೇಕೆ ಅಥವಾ ನಿಲ್ಲಿಸಬೇಕೆ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail