KSRTC ಮುಷ್ಕರಕ್ಕೆ ಬೆಂಬಲ ನೀಡದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ: ಗೂಗಲ್ ಮೀಟ್‌ನಲ್ಲಿ ನೌಕರನಿಗೆ ಬೆದರಿಕೆ- ದೂರು ದಾಖಲು


ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ತುಮಕೂರು: ಸಾರಿಗೆ ನಿಗಮದ ದಾವಣಗೆರೆ ವಿಭಾಗದ ಜೂನಿಯರ್ ಆಸಿಸ್ಟೆಂಟ್ ಕಂ ಡಾಟಾ ಎಂಟ್ರಿ ಆಪರೇಟರ್ ಪ್ರಸ್ತುತ ಎರವಲು ಸೇವೆ ಸಾರಿಗೆ ಇಲಾಖೆ ಮತ್ತು ಕೆಎಸ್ಆರ್ಟಿಸಿ ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಂಗಳೂರು ಅಧ್ಯಕ್ಷ ಓಂಕಾರ್ ಸೇರಿದಂತೆ ಎಂಬುವರು ಆ.5ರಂದು ಜಂಟಿ ಕ್ರಿಯಾ ಸಮಿತಿಯವರು ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಲು ಜುಲೈ 30ರಂದು ಗೂಗಲ್ ಮೀಟಿಂಗ್ ಸಭೆ ಆಯೋಜಿಸಿದ್ದರು.
ಈ ವೇಳೆ ವಿಭಾಗ ಹಾಗೂ ಘಟಕ ಮಟ್ಟದ ನೌಕರರನ್ನು ಮುಷ್ಕರ ಮಾಡಲು ಪ್ರಚೋದನೆ ಮಾಡಿ ಹಾಗೂ ಮುಷ್ಕರ ಮಾಡುವುದಿಲ್ಲ ಎಂದು ಹೇಳಿದ ನೌಕರರಿಗೆ ಬೆದರಿಕೆ ಹಾಕುತ್ತಿದ್ದು ಓಂಕಾರ್ ಸೇರಿದಂತೆ ಹಲವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆಯ ನೌಕರ ಸೈಯದ್ ಸಾಧಿಕ್ ಎಂಬುವರು ತುಮಕೂರು ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶಿರಾ ಘಟಕ ಚಾಲಕ ಕಂ ನಿರ್ವಾಹಕ ಸೈಯದ್ ಸಾಧಿಕ್ ಅವರು ಈ ಸಂಬಂಧ ಘಟಕ ವ್ಯವಸ್ಥಾಪಕರ ಮೂಲಕ ಡಿಸಿ ಅವರಿಗೆ ಆ.1ರಂದು ದೂರು ನೀಡಿದ್ದಾರೆ. ಸಾಧಿಕ್ ಜುಲೈ 30ರಂದು ಕರ್ತವ್ಯ ಮುಗಿಸಿ ಫೋನ್‌ಲ್ಲಿ ವಾಟ್ಸಾಪ್ ನೋಡುವ ಸಂದರ್ಭದಲ್ಲಿ ಗೂಗಲ್ ಮೀಟ್ ಲಿಂಕ್ ಬಂದಿರುವುದು ನೋಡಿದ್ದಾರೆ.
ಹೀಗಾಗಿ ಆದರಲ್ಲಿ ವೇತನಕ್ಕೆ ಹಾಗೂ ಮುಷ್ಕರಕ್ಕೆ ಸಂಬಂಧಿಸಿದ ವಿಚಾರವನ್ನು ನೋಡಿ ಸಹಜವಾಗಿ ಕುತೂಹಲದಿಂದ ಗೂಗಲ್ ಮೀಟ್‌ಗೆ ಜಾಯಿನ್ ಆದೇ ಈ ಗೂಗಲ್ ಮೀಟ್ ಸಭೆಯನ್ನು ಓಂಕಾರ್ ಆಯೋಜಿಸಿದ್ದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಕೆಲವು ನೌಕರರು ಚರ್ಚೆ ಮಾಡುತ್ತಿದ್ದರು. ಅವರವರು ಅವರ ಅಭಿಪ್ರಾಯ ಮತ್ತು ಸಲಹೆ ನೀಡಿದ್ದು, ಈ ವೇಳೆ ಮಂಡ್ಯ ವಿಭಾಗದ ಪ್ರಸಾದ್ ಹಾಗೂ ಶ್ರೀಧರ್ ಎಂಬುವರು ಮುಷ್ಕರಕ್ಕೆ ಬೆಂಬಲ ನೀಡುವ ಹಾಗೂ ಸಂಪೂರ್ಣ ಬಸ್ ಕಾರ್ಯಾಚರಣೆ ಬಂದ್ ಮಾಡುವ ವಿಚಾರ ಮಾತನಾಡಿದರು.
ನಂತರ ತುಮಕೂರು ವಿಭಾಗದಿಂದ ಮಾತನಾಡಿದ ಪುಟ್ಟಯ್ಯ ಕೆ.ವಿ ಚಾಲಕ ಕಂ ನಿರ್ವಾಹಕ ಘಟಕ-01 ಅವರು, ತುಮಕೂರು ವಿಭಾಗದಲ್ಲಿ ಶಿರಾ ಘಟಕ ಹೊರತು ಪಡಿಸಿ ಬಾಕಿ ಎಲ್ಲ ಘಟಕಗಳ ಕಾರ್ಮಿಕರೊಂದಿಗೆ ಈಗಾಗಲೆ ಚರ್ಚೆ ಮಾಡಿದ್ದು ನಾವು ಎಲ್ಲರೂ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.
ಹೀಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಶ್ರೀಧರ್ ಮದ್ದೂರ್ ಘಟಕ ಹಾಗೂ ಪ್ರಸನ್ನ ಕುಮಾರ್ ಜೂನಿಯರ್ ಆಸಿಸ್ಟಂಟ್ ಚಿಕ್ಕಮಗಳೂರು ಇವರು ಮುಷ್ಕರ ಮಾಡಲು ಒಪ್ಪದ ನನ್ನ ಮೇಲೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈದು ಮುಷ್ಕರಕ್ಕೆ ಬೆಂಬಲ ನೀಡದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ ಹೇಗೆ ನೀನು ಕರ್ತವ್ಯ ನಿರ್ವಯಿಸುತ್ತೀಯೇ ನಾವು ನೋಡುತ್ತೇವೆ ಎಂದು ಬೆದರಿಕೆ ಸಹ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಈ ಗೂಗಲ್ ಮೀಟ್ ಸಭೆಯನ್ನು ಸಾರಿಗೆ ಮುಷ್ಕರ ಮಾಡಲು ಪ್ರಚೋದನೆ ನೀಡಲು ಹಾಗೂ ಮುಷ್ಕರ ಮಾಡಲು ನಿರಾಕರಣೆ ಮಾಡುವ ನೌಕರರಿಗೆ ಬೆದರಿಕೆ ಹಾಕಿ ಮುಷ್ಕರ ಮಾಡಿಸಲು ಆಯೋಜಿಸಿರುವ ಸಭೆ ಆಗಿತ್ತು. ಆದ್ದರಿಂದ ಈ ಗೂಗಲ್ ಮೀಟ್ ಸಭೆ ಆಯೋಜಿಸಿದ ಓಂಕಾರ್, ಪುಟ್ಟಯ್ಯ ಕೆ.ವಿ ಹಾಗೂ ಮುಷ್ಕರ ಮಾಡುವುದಿಲ್ಲ ಎಂದ ನನಗೆ ಹಾಗೂ ಇತರೆ ನೌಕರರಿಗೆ ಕೆಟ್ಟ ಪದಗಳಿಂದ ಬೈದು ಬೆದರಿಕೆ ಹಾಕಿರುವ ಶ್ರೀಧರ್, ಪ್ರಸನ್ನ ಕುಮಾರ್ ಇವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ, ವಂದನೆಗಳೊಂದಿಗೆ ಎಂದು ಸೈಯಾದ್ ಸಾಧಿಕ್ ದೂರು ನೀಡಿದ್ದಾರೆ.
ನಿನ್ನೆ ದೂರು ಸ್ವೀಕರಿಸಿರುವ ಡಿಎಂ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಇನ್ನಷ್ಟೆ ಗೊತ್ತಾಗಬೇಕಿದೆ.
Related
