ಹಾಸನ: ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಕರೆ ನೀಡಿರುವ ಮುಷ್ಕರದ ಬಿಸಿ ಹಾಸನದಲ್ಲೂ ತುಸು ಹೆಚ್ಚಾಗಿಯೇ ತಟ್ಟುತ್ತಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ನಗರಕ್ಕೆ ಬಂದಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಇನ್ನು ಇಂದು ಬೆಳಗ್ಗೆ 4 ಗಂಟೆಯಿಂದಲೇ ನಗರದಲ್ಲಿ ಬಸ್ ಸಂಚಾರ ಬಹುತೇಕ ಸಂಪೂರ್ಣವಾಗಿ ಸ್ತಬ್ಧವಾಗಿವೆ. ಹೀಗಾಗಿ ಬಸ್‌ಗಳನ್ನು ಯಥಾಸ್ಥಿತಿಯಲ್ಲಿ ಓಡಾಡುತ್ತಾವಾ ಇಲ್ಲವೇ ಎಂಬ ಗೊಂದಲದಲ್ಲಿ ಪ್ರಯಾಣಿಕರು ಇತ್ತಿಂದತ್ತ ಓಡಾಡುತ್ತಿದ್ದಾರೆ.
ಜತೆಗೆ ನಿಲ್ದಾಣದಲ್ಲಿ ಸಾರಿಗೆ ಅಧಿಕಾರಿಗಳು ಕೂಡ ಇಲ್ಲ. ಹೀಗಾಗಿ ಸಾಋವಜನಿಕರು ಯಾರನ್ನು ಕೇಳಬೇಕು ಎಂಬ ಗೊಂದಲದಲ್ಲೇ ಕುಳಿತಿದ್ದಾರೆ.
ಒಟ್ಟಾರೆ ಸಾರ್ವಜನಿಕರಿಗೆ ಹಾಸನದಲ್ಲಿ ಬಸ್ ಬಂದ್‌ಬಿಸಿ ಏರುತ್ತಿದೆ. ಅದೇ ರೀತಿ ಇತರ ಭಾಗಗಳಲ್ಲಿ ಬಂದ್ ಆಗುತ್ತಿದೆ. ಈ ನಡುವೆ ಖಾಸಗಿ ಬಸ್‌ಗಳು ಕೂಡ ಕಾಣುತ್ತಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಇತ್ತ ಅಧಿಕಾರಿಗಳು ಕೂಡ ನೌಕರರನ್ನು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸುತ್ತಿದ್ದರು ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
Related
