ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಗದಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗೆ ಬೈಕ್‌ನಲ್ಲಿ ಬಂದ ಮುಸುಕುದಾರಿ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ.
ಹೊಸಪೇಟೆ ವಿಭಾಗದ ಬಸ್ ಹುಬ್ಬಳ್ಳಿಯಿಂದ ಹೊಸಪೇಟೆ ಬರುವಾಗ ಬಸ್‌ಗೆ ಕಲ್ಲು ತೂರಿದ್ದು ಬಸ್‌ನ ಮುಂದಿನ ಭಾಗದ ಗ್ಲಾಸ್ ಜಖಂ ಆಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚಾಲಕ ನಾವು ಹೊಸಪೇಟೆಗೆ ಬರುತ್ತಿದ್ದಾಗ ಕಲ್ಲು ತೂರಿದರು. ಈ ವೇಳೆ ಬಸ್‌ನಲ್ಲಿ 15 ಜನ ಪ್ರಯಾಣಿಕರಿದ್ದರು. ನಾವು ಕೂಡಲೆ ಅವರನ್ನು ಇಳಿಸಿ ಬೇರೆ ಬಸ್‌ಗ ಕಳಿಸಿ ನಾವು ಗದಗಕ್ಕೆ ಬಸ್ ತಂದು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ನಾವು ಬಸ್‌ಅನ್ನು ಈಗ ಇಲ್ಲಿಯೇ ಸಿಲ್ಲಿಸಿದ್ದೇವೆ. ಕಾರಣ ಮತ್ತೆ ಹೊಸಪೇಟೆಗೆ ಬಸ್ ತೆಗೆದುಕೊಂಡು ಹೋಗುವಾಗ ಮತ್ತೆ ಏನಾದರು ತಂದರೆ ಆದರೆ ಏನು ಮಾಡುವುದು ಎಂಬ ಭಯವಿದೆ ಎಂದು ತಿಳಿಸಿದ್ದಾರೆ.
ನಿನ್ನೆ ಕೆಕೆಆರ್‌ಟಿಯ ಬಸ್‌ಗೆ ಹಾಗೂ ಇಂದು ಇದೇ ಕೆಕೆಆರ್‌ಟಿಸಿಯ ಹೊಸಪೇಟೆ ವಿಭಾಗದ ಬಸ್‌ಗೆ ಹಾಗೂ ಕೋಲಾರ ವಿಭಾಗದ ಬಸ್‌ಗೆ ಕಲ್ಲು ತೂರಿದ್ದು ಬಸ್‌ಗಳ ಗಾಜುಗಳನ್ನು ಪುಡಿಗಟ್ಟಿದ್ದಾರೆ.
ಇನ್ನು ಸರ್ಕಾರ ಹೀಗೆ ನೌಕರರ ನ್ಯಾಯಯುತ ಬೇಡಿಕೆಗೆ ಸ್ಪಂದಿಸದೆ ಹಠ ಹಿಡಿದು ಕುಳಿತರೆ ಇನ್ನಷ್ಟು ಅವಘಡಗಳು ಸಂಭವಿಸಬಹುದು ಹಾಗಾಗಿ ಕೂಡಲೇ ಸಿಎಂ ನೌಕರರ ಸಭೆ ಕರೆದು ಬೇಡಿಕೆ ಈಡೇರಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

Related
