NEWSನಮ್ಮಜಿಲ್ಲೆನಮ್ಮರಾಜ್ಯ

KKRTC ವಿಜಯಪುರ: ನಿವೃತ್ತ ನೌಕರನಿಗೆ 29ಲಕ್ಷ ಕೊಡುವಂತೆ ಹೈ ಕೋರ್ಟ್‌ ತೀರ್ಪು- ಈ ಆದೇಶವನ್ನೇ ಉಲ್ಲಂಘಿಸುತ್ತಿರುವ ಡಿಸಿ!

ನೊಂದ ನಿವೃತ್ತ ಚಾಲಕ ಬಿ.ಎನ್‌.ಹುಂಡೆಕಾರ
ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಉಚ್ಚ ನ್ಯಾಯಾಲಯ ಆದೇಶಕ್ಕೂ ಕಿಮ್ಮತ್ತು ಕೊಡದೆ ಹಿಂಬಾಕಿ ವೇತನ ನೀಡಲು ಸತಾಯಿಸುತ್ತಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ‌ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಹೈ ಕೋರ್ಟ್‌ ಆದೇಶವನ್ನೇ ಗಾಳಿಗೆ ತೂರಿ ದರ್ಪ ಮೆರೆಯುತ್ತಿದ್ದಾರೆ.

ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತರಾಗಿರುವ ಬಿ.ಎನ್.ಹುಂಡೆಕಾರ ಅವರಿಗೆ ಕಲಬುರಗಿಯ ಹೈ ಕೋರ್ಟ್‌ಪೀಠ ಕಾರ್ಮಿಕ ನ್ಯಾಯಾಲಯ ನೀಡಿದ ತೀರ್ಪಿನಂತೆ ಸುಮಾರು 29 ಲಕ್ಷ ರೂಪಾಯಿಗಳನ್ನು ಬಡ್ಡಿ ಸಹಿತ ಪಾವತಿಸಲು ಆದೇಶ ಮಾಡಿದೆ.

ವಿಜಯಪುರ ಸಾರಿಗೆ ಡಿಸಿ ಕುರಬರ

ಆದರೆ, ಇಷ್ಟು ಹಣವನ್ನು ಕೊಡುವುದಕ್ಕೆ ಆಗುತ್ತಿಲ್ಲ. ಕಾರಣ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಸಬೂಬು ಹೇಳಿಕೊಂಡು ಕಳೆದ ಜನವರಿಯಲ್ಲಿ ತೀರ್ಪು ನೀಡಿರುವ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿ ನಿವೃತ್ತ ನೌಕರ ಬಿ.ಎನ್.ಹುಂಡೆಕಾರ ಅವರನ್ನು ಕಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಜತೆಗೆ, ಬಿ.ಎನ್.ಹುಂಡೆಕಾರ ನಿವೃತ್ತ ಚಾಲಕರ ಇವರ WP203350 ಪ್ರಕರಣದಡಿ ನ್ಯಾಯಾಲಯ ಸುಮಾರು 29 ಲಕ್ಷ ರೂಪಾಯಿಗಳನ್ನು ಪಾವತಿಸಲು ಆದೇಶ ಮಾಡಿದೆ. ಆದರೆ, ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಸುಮಾರು 8 ತಿಂಗಳಿನಿಂದ ಈಗ ಕೊಡ್ತೀನಿ ಆಗ ಕೊಡ್ತೀನಿ ಕಾರ್ಮಿಕರ ಸಂಬಳ ಆಗಲಿ, ಸಪ್ಲೈರ್ಸ್ ಬಿಲ್ ಆಗಲಿ ಅಂತಾ ಸುಖಾ ಸುಮ್ಮನೆ ಕಾಲ ಹರಣ ಮಾಡಿ ತನ್ನ ಕಚೇರಿಗೆ ಪಾಪ ವಯಸ್ಸಾದ ವ್ಯಕ್ತಿಯನ್ನು ಅಲೆದಾಡಿಸುತ್ತಿದ್ದಾರೆ.

ಆದರೆ, ನಿಗಮದಲ್ಲಿ ತಮಗೆ ಬೇಕಾದವರು ನಿವೃತ್ತಿ ಹೊಂದಿದ್ದರೆ ಅವರಿಗೆ ಕೊಡುವುದಕ್ಕೆ ಹಣವಿದೆ ನಮ್ಮ ವಿಷಯಬಂದರೆ ಏಕೆ ಹಣವಿಲ್ಲ ಎಂದು ಹುಂಡೆಕಾರ ಕೇಳುತ್ತಿದ್ದಾರೆ. ಅಲ್ಲದೆ ಈ ಹುಂಡೆಕಾರ ಅವರು ಈ ಹಿಂದೆ ಅಂದರೆ 2021 ರಲ್ಲಿ ವಿಜಯಪುರ ವಿಭಾಗದಲ್ಲಿ ನಾರಾಯಣಪ್ಪ ಕುರಬರ ಅವರು ಮಾಡಿದ ಭ್ರಷ್ಟಾಚಾರದ ಹಾಗೂ ನಿಗಮಕ್ಕೆ ಒಂದು ಪ್ರಕರಣದಲ್ಲಿ ಸುಮಾರು 1.98 ಕೋಟಿ ರೂ.ಗಳಷ್ಟು ಬರುವ ವಾಣಿಜ್ಯ ಆದಾಯವನ್ನು ಸಂಧಾನ ಪ್ರಕ್ರಿಯೆ ಮೂಲಕ ನಷ್ಟ ಮಾಡಿ ನಿಗಮಕ್ಕೆ ನಷ್ಟ ಮಾಡಿರುವ ಬಗ್ಗೆ ದೂರು ನೀಡಿದ್ದರು.

ಈ ದೂರು ನೀಡಿದಕ್ಕೆ ಸೇಡು ತೀರಿಸಿಕೊಳ್ಳುತ್ತಿರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂಬುವುದಕ್ಕೆ ಕಳೆದ ಜನವರಿಯಿಂದ ಈವರೆಗೂ ನ್ಯಾಯಾಲಯದ ಆದೇಶದಂತೆ ನಡೆಯದೆ ಕಾಡುತ್ತಿರುವುದೇ ಸಾಕ್ಷಿಕರಿಸುವಂತಿದೆ. ನಮಗೆ ಹೈ ಕೋರ್ಟ್‌ಪೀಠ ಸುಮಾರು 29 ಲಕ್ಷ ರೂಪಾಯಿಗಳನ್ನು ಬಡ್ಡಿ ಸಹಿತ ಪಾವತಿಸಲು ಆದೇಶ ಮಾಡಿದ್ದರೆ ಅದನ್ನು ಕೊಡದೆ ಕಾಡುತ್ತಿದ್ದಾರೆ.

Advertisement

ಇನ್ನು ಮುಖ್ಯ ಲೆಕ್ಕಧಿಕಾರಿ ಹಾಗೂ ಆರ್ಥಿಕ ಸಲಹೆಗಾರರಾಗಿರುವ ಶ್ರೀದೇವಿ ಭದ್ರಕಳ್ಳಿ ಹಾಗೂ ಇವರ ಪತಿ ಮುಖ್ಯ ಭದ್ರಾತಾ ಮತ್ತು ಜಾಗ್ರತಾಧಿಕಾರಿ ಆನಂದ ಭದ್ರಾಕಳ್ಳಿ ಅವರು ಸಹ ಈ ವಿಷಯದಲ್ಲಿ ಕಡ್ಡಿ ಆಡಿಸುತಿದ್ದಾರೆ. ಈ ಆನಂದ ಭದ್ರಕಳ್ಳಿ ಅವರು ಕಳೆದ 20 ವರ್ಷದಿಂದ ಇಲ್ಲೇ ಇದ್ದು ಸುಮಾರು 3 ಪ್ರಮೋಷನ್ ಪಡೆದುಕೊಂಡು ಒದೇಕಡೇ ಬೇರು ಬಿಟ್ಟಿದ್ದಾರೆ.

ಜತೆಗೆ ಇವರ ಪತ್ನಿ ಶ್ರೀದೇವಿ ಭದ್ರಕಳ್ಳಿ ಅವರು ಕೂಡ ಸುಮಾರು 15 ವರ್ಷದಿಂದ ಇಲ್ಲೇ ಇದ್ದು 2 ಪ್ರಮೋಷನ್ ತೆಗೆದುಕೊಂಡಿದ್ದಾರೆ. ಸಂಸ್ಥೆಯ ಎಲ್ಲವನ್ನು ತಿಳಿದುಕೊಂಡಿರುವ ಈ ಇಬ್ಬರು ಪತಿ-ಪತ್ನಿ ಸೇರಿಕೊಂಡು ವಿಭಾಗದ ನೌಕರರಿಗೆ ಸಿಗಬೇಕಿರುವ ಸೌಲಭ್ಯವನ್ನು ಕೊಡಿಸದೆ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ತತಕ್ಷಣ ಇವರನ್ನು ನಿಗಮದಿಂದ ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಬಿ.ಎನ್. ಹುಂಡೆಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ನಾರಾಯಣಪ್ಪ ಕುರಬರ ಅವರು ಮಾಡಿದ ಭ್ರಷ್ಟಾಚಾರದ ಬಗ್ಗೆ ACBಗೆ ದೂರು ನೀಡಿದ್ದರಿಂದ ನನ್ನ ಮೇಲೆ ಸೇಡಿನ ಮನೋಭಾವನೆಯಿಂದ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೇ ಹಿಂಬಾಕಿ ವೇತನ ನೀಡದೆ ಕಿರಕುಳ ನೀಡುತ್ತಿದ್ದಾರೆ ಎಂದೂ ಕೂಡ ಬಿ.ಎನ್.ಹುಂಡೆಕಾರ ಆರೋಪಿಸಿದ್ದಾರೆ.

ಈ ವಿಷಯದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ

ನಿರ್ದೇಶಕರು ಆಗಿರುವ ಡಾ.ಬಿ.ಸುಶೀಲಾ ಅವರು ಈ ಅನ್ಯಾಯ ಹಾಗೂ ವಿಜಯಪುರ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಕೈ ಗೊಂಡು ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಕಳೆದ 8 ತಿಂಗಳಿನಿಂದಲೂ ನ್ಯಾಯಾಲಯದ ಆದೇಶವನ್ನು ಗಾಳಿತೂರಿ ನಮಗೆ 29 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಮತ್ತೆ ಕೋರ್ಟ್‌ಗೆ ಹೋದರೆ ಅಲ್ಲಿ ನಮ್ಮ ಸಂಸ್ಥೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ, ನನ್ನಂತೆ ನಿವೃತ್ತರಾದ ಇತರೆ ನೌಕರರಿಗೆ ಬರಬೇಕಿರುವ ಎಲ್ಲ ಹಣವನ್ನು ಸಂದಾಯ ಮಾಡಿರುವ ಇವರು ನನಗೆ ಮಾತ್ರ ಕಾಡಿಸುವುದು ಏಕೆ? ಜತೆಗೆ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.  ಕೋರ್ಟ್‌ ಆದೇಶದ ಪ್ರತಿ: KAHC030055902019_1

Megha
the authorMegha

1 Comment

  • ಕೋರ್ಟ್ ಆದೇಶ ಮೀರಿ ಮುಷ್ಕರ ಮಾಡಿದ್ರೆ ಹುಷಾರ್ ಜೈಲಿಗೆ ಹಾಕಬೇಕಾದೀತು ಇದು ಮಾನ್ಯ ಹೈ ಕೋರ್ಟ್ ನ ನ್ಯಾಯಾಧೀಶರು ಸಾರಿಗೆ ನೌಕರರಿಗೆ ಕೊಟ್ಟಿರುವ ಎಚ್ಚರಿಕೆ ,ಇರಲಿ ಅವರ ಆದೇಶವನ್ನ ಸ್ವೀಕರಿಸೋಣ .ಆದರೆ ಇದೇ ನ್ಯಾಯಾಲವೇ ಕೊಟ್ಟಿರುವ ಆದೇಶವನ್ನು ಜಾರಿಗೆ ತರದೆ ಇರುವ KSRTC ಯ ಆಡಳಿತ ವರ್ಗಕ್ಕೆ ಏನು ಎಚ್ಚರಿಕೆ ಕೊಟ್ಟು ಅವರ ಮೇಲೆ ಏನು ಶಿಸ್ತಿನ ಕ್ರಮ ಕೈಗೊಳ್ಳತೀರಿ

Leave a Reply

error: Content is protected !!