CRIMENEWSVideosನಮ್ಮರಾಜ್ಯ

ಕರ್ತವ್ಯ ನಿರತ KSRTC ಚಾಲಕನ ಮೇಲೆ ಅಧಿಕಾರ ಮದವೇರಿ ಚಪ್ಪಲಿಯಿಂದ ಹಲ್ಲೆ ಮಾಡಿದ ಪೊಲೀಸ್‌ ಸಿಬ್ಬಂದಿ!

ವಿಜಯಪಥ ಸಮಗ್ರ ಸುದ್ದಿ

ಕೂಡ್ಲಿಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕರ್ತವ್ಯ ನಿರತ ಚಾಲಕನ ಮೇಲೆ ಮನಬಂದಂತೆ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಅವಾಚ್ಯವಾಗಿ ನಿಂದಿಸಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ನಡೆದಿದೆ.

ನಾನು ಪೊಲೀಸ್‌ ಎಂಬ ದರ್ಪದಲ್ಲೇ ಬಸ್‌ ಹತ್ತಿಬಂದ ಕಿರಾತಕ ಸಿಬ್ಬಂದಿ ನನ್ನ ಬೈಕ್‌ಗೆ ನೀನು ಟಚ್‌ ಮಾಡಿಕೊಂಡು ಬಂದೆ ಒಂದು ಸ್ವಲ್ಪ ಯಾಮಾರಿದ್ದರು ನಮ್ಮ ಪ್ರಾಣಹೋಗುತ್ತಿತ್ತು ಎಂದು ಬೈದುಕೊಂಡು ಬಂದ ಕರ್ತವ್ಯದ ಮೇಲಿರದ ಪೊಲೀಸ್‌ ಸಿಬ್ಬಂದಿ ಮನಸೋಯಿಚ್ಚೆ KSRTC ಬಸ್‌ ಚಾಲಕನಿಗೆ ಹೊಡೆದಿದ್ದಾನೆ.

ಅಲ್ಲದೆ ಬಸ್‌ ಕೆಳಗಿಳಿದು ಬಂದು ಚಾಲಕ ನಾನೇನು ತಪ್ಪು ಮಾಡಿಲ್ಲ ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದರೆ ತನ್ನ ಬೈಕ್‌ ಹೆಲ್ಮೆಟ್‌ನಿಂದ ಮತ್ತೆ ಚಾಲಕನ ತಲೆಗೆ ಹೊಡೆದಿದ್ದಾನೆ. ಈ ಕಿರಾತಕ ಒಬ್ಬ ಪೊಲೀಸ್‌ ಸಿಬ್ಬಂದಿಯಾಗಿದ್ದು, ಕಾನೂನಿನ ಅರಿವಿಲ್ಲವೇ?

ಚಪ್ಪಲಿಯಿಂದ ಹಲ್ಲೆ ಮಾಡಿದ ಪೊಲೀಸ್‌ ಸಿಬ್ಬಂದಿ

ಒಬ್ಬ ಕರ್ತವ್ಯ ನಿರತ ಸರ್ಕಾರಿ ಬಸ್‌ ಚಾಲಕನ ಮೇಲೆ ಕೈ ಮಾಡಿದರೆ ನಾನ್‌ ಬೇಲೇಬಲ್‌ ವಾರಂಟ್‌ ಆಗುತ್ತದೆ ಎಂದು ಗೊತ್ತಿದ್ದರು ತನ್ನ ಅಧಿಕಾರ ಮದದಲ್ಲಿ ಪಾಪ ಬಡ ಚಾಲಕನ ಮೇಲೆ ದರ್ಪ ಮೆರೆದಿರುವ ಈತನನ್ನು ಕೂಡಲೇ ಬಂಧಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಅಲ್ಲದೆ ಪೊಲೀಸ್‌ ಸಿಬ್ಬಂದಿಯ ನಡೆಯನ್ನು ಖಂಡಿಸಿರುವ ಸಾರಿಗೆ ನೌಕರರು ಕೂಡ ನಮ್ಮ ಹರಿಹರ ಘಟಕದ ಚಾಲಕನಿಗೆ ಪೊಲೀಸ್ ಹೊಡೆಯುತ್ತಿರುವುದು ಸರಿಯಲ್ಲ. ಇದು ಈತನಿಗೆ ಶೋಭೆ ತರುವುದಿಲ್ಲ ಒಂದು ವೇಳೆ ಅಪಘಾತವೆಸಗಿದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ ಅದನ್ನು ಬಿಟ್ಟು ಈ ರೀತಿ ಹೊಡೆಯುವುದಕ್ಕೆ ಯಾರು ಅಧಿಕಾರಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಈ ಸಂಬಂಧ ಇದೇ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ವಿರುದ್ಧ ಹರಿಹರ ಘಟಕ ವ್ಯವಸ್ಥಾಪಕರು FIR ಮಾಡಿಸಿದ್ದಾರೆ. ಅದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿಯೇ. ಪೊಲೀಸ್ ಡ್ರೆಸ್ ಮೇಲೆ ಇಲ್ಲದ ಅವನು ಡ್ಯೂಟಿ ಮೇಲಿಲ್ಲ ಡ್ಯೂಟಿ ಮೇಲಿರುವ ಚಾಲಕರನ್ನು ಹೊಡೆದಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅತನನ್ನು ಅಮಾನತು ಮಾಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

ಅಲ್ಲದೆ ಈ ರೀತಿ ಕಾಡು ಪ್ರಾಣಿಯಂತೆ ಚಾಲಕನ ಮೇಲೆರಗಿರುವ  ಈತನಿಗೆ ಕಾನೂನಿನಡಿ ತಕ್ಕ ಶಿಕ್ಷೆ ಆಗಲೇಬೇಕು ಎಂದು ನಿಗಮದ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ ಈ ಸಂಬಂಧ ಸಾರಿಗೆ ಸಚಿವರಿಗೆ ನಮ್ಮ ಸಿಬ್ಬಂದಿಗಳನ್ನು ರಕ್ಷಿಸಿ ಎಂದು ಮನವಿ ಮಾಡುವುದಾಗಿ ಹರಿಹರ ಘಟಕದ ನೌಕರರು ತಿಳಿಸಿದ್ದಾರೆ.

 

Megha
the authorMegha

Leave a Reply

error: Content is protected !!