CRIMENEWSಸಿನಿಪಥ

ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂ. ವಂಚನೆ ಆರೋಪ: FIR ದಾಖಲು

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಅವರು ಸಿನಿಮಾ ಮಾಡುವುದಾಗಿ ನಂಬಿಸಿ 3.15 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪದಡಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಾಘವೇಂದ್ರ ಹೆಗ್ಗಡೆ ಎಂಬುವವರು ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದು, ದೂರಿನಲ್ಲಿ ಸಿನಿಮಾ ಮಾಡುವುದಾಗಿ ನಮ್ಮಿಂದ 3.15 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಧೃವ ಸರ್ಜಾ ಹಾಗೂ ರಾಘವೇಂದ್ರ ಹೆಗ್ಡೆ 2016ರಿಂದ 2018ರವರೆಗೆ ಜತೆಗೆ ಕೆಲಸ ಮಾಡಿದ್ದರು. ಧ್ರುವ ಸರ್ಜಾ ಅವರೇ ರಾಘವೇಂದ್ರ ಹೆಗ್ಡೆ ಭೇಟಿ ಮಾಡಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಸೋಲ್ಜರ್ ಎಂಬ ಸಿನಿಮಾ ಮಾಡುವುದಾಗಿ ಧ್ರುವ ಸರ್ಜಾ ಸ್ಕ್ರಿಪ್ಟ್ ಮಾಡಿದ್ದರು.

ಆದರೆ ಧ್ರುವ ಸರ್ಜಾ ಒಪಂದಕ್ಕೆ ಸಹಿ ಹಾಕುವ ಮೊದಲೇ 3.15 ಕೋಟಿ ರೂ. ಪಡೆದಿದ್ದಾರೆ ಎಂದು ಆರೋಪಿಸಿದ್ದು, ಅಲ್ಲದೆ ನಾನು ಹೆಚ್ಚಿನ ಬಡ್ಡಿಗೆ 3.15 ಕೋಟಿ ರೂ. ಸಾಲ ಪಡೆದು, ಧ್ರುವ ಸರ್ಜಾ ಒಡೆತನದ ಆರ್‌ಎಚ್ ಎಂಟರ್ಟೈನ್ಮೆಂಟ್‌ಗೆ ಹಣ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಣ ಪಡೆದು ಅಪಾರ್ಟ್ಮೆಂಟ್ ಖರೀದಿ ಮಾಡಿರುವ ಧ್ರುವ ಸರ್ಜಾ, ಸಿನಿಮಾ ಮಾಡಿಕೊಡುವ ಭರವಸೆ ನೀಡಿದ್ದರು. 2019 ಫೆ.21ರಂದು ಒಪ್ಪಂದ ಆಗಿತ್ತು. ಆದರೆ ಈ ಹಣದ ವ್ಯವಹಾರವು ಒಪ್ಪಂದ ಮಾಡಿಕೊಳ್ಳುವ ಮುನ್ನವೇ ನಡೆದಿತ್ತು ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ದೂರಿನ ಆಧಾರದ ಮೇರೆಗೆ ಅಂಬೋಲಿ ಪೊಲೀಸರು ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Advertisement
Megha
the authorMegha

Leave a Reply

error: Content is protected !!