NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಮುಖಂಡರಿಗಷ್ಟೇ ವಿಶೇಷ ರಜೆ- ಅವರ ಮಾತು ನಂಬಿ ಮುಷ್ಕರಕ್ಕೆ ಬೆಂಬಲ ಕೊಟ್ಟವರಿಗೆ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶೇ.15ರಷ್ಡು ಹೆಚ್ಚಳವಾಗಿರುವ ವೇತನದ 38ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಇದೇ ಆ.5ರಂದು ಸಾರಿಗೆ ಸಂಘಟನೆಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ 30 ಸಾವಿರ ನೌಕರರಿಗೆ ನೋಟಿಸ್‌ ಜಾರಿಮಾಡಲಾಗಿದೆ.

ಈ ನಡುವೆ ಕೋರ್ಟ್‌ ಕೂಡ ನೌಕರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನಿರ್ದೇಶನ ನೀಡಿದೆ. ಈ ನಡುವೆಯೂ ಮೆಮೋ ನೀಡಿ ಕಾರಣ ಕೇಳಿದ್ದು, ಅದರಲ್ಲಿ ಎಐಟಿಯುಸಿಯಲ್ಲಿ ಗುರುತಿಸಿಕೊಂಡಿರುವ ನೌಕರರು ಆ.5ರಂದು ಮುಷ್ಕರಕ್ಕೆ ಬೆಂಬ ನೀಡಿದ್ದರು.

ಆ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನೌಕರರಿಗೆ ಮಾತ್ರ ವಿಶೇಷ ರಜೆ ಮಂಜೂರು ಮಾಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಪ್ಪಾಣಿ ಘಟಕ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ 16 ಮಂದಿ ನೌಕರರ ಹೆಸರನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜತೆಗೆ ಘಟಕದಲ್ಲಿ ಅಂದು ಹಾಜರಾಗದ ಉಳಿದ ನೌಕರರ ಹೆಸರನ್ನು ಕಳಿಸದೆ ತಾರತಮ್ಯತೆ ಎಸಗಿದ್ದಾರೆ. ಇದನ್ನು ಗಮನಿಸಿದರೆ ಇಲ್ಲಿ ಎಐಟಿಯುಸಿಯ ಮುಖಂಡರೆ ಈ ರೀತಿ ಮಾಡಿದ್ದು, ವಿಶೇಷ ರಜೆ ಕೊಡದೆ ಗೈರು ಹಾಜರಿ ತೋರಿಸಿರುವುದಕ್ಕೆ ಈ ಮುಖಂಡರೆ ಕಾರಣ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಾವು ಕೂಡ ಅಂದು ನಮ್ಮ ವೈಯಕ್ತಿಕ ಸಮಸ್ಯೆಯಿಂದ ಡ್ಯೂಟಿಗೆ ಬರಲಿಕ್ಕೆ ಆಗಿಲ್ಲ ಹೀಗಾಗಿ ಅವರಂತೆ ನಮಗೂ ವಿಶೇಷ ರಜೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ ಬಿಎಂಟಿಸಿ ಹೊರತು ಪಡಿಸಿ ಉಳಿದ KSRTC, KKRTC ಹಾಗೂ NWKRTC ನಿಗಮಗಳಲ್ಲಿ 30 ಸಾವಿರ ನೌಕರರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅದರಲ್ಲಿ ಈ ಅಧಿಕಾರಿಗಳು ತಮಗೆ ಬೇಕಾದ ನೌಕರರಿಗೆ ವಿಶೇಷ ರಜೆ ಮಂಜೂರು ಮಾಡುತ್ತಿದ್ದು, ಉಳಿದ ನೌಕರರಿಗೆ ಗೈರುಹಾಜರಿ ತೋರಿಸಿ ಅವರ ವೇತನ ಕಡಿತ ಮಾಡುವ ಜತೆಗೆ ಕಿರುಕುಳ ನೀಡಲು ಮುಂದಾಗುತ್ತಿದ್ದಾರೆ.

ಹೀಗಾಗಿ ಇದನ್ನು ಖಂಡಿಸಿರುವ ನೌಕರರು ಅಧಿಕಾರಿಗಳಲ್ಲಿ ಈ ತಾರತಮ್ಯ ಧೋರಣೆ ಇರಬಾರದು ನಾವು ಕೂಡ ನಿಮ್ಮ ಪರವಾಗಿ ವೇತನ ಹೆಚ್ಚಳ ಸಂಬಂಧ ಹೋರಾಟಕ್ಕೆ ಕರೆ ನೀಡಿದ್ದನ್ನು ಸ್ವಾಗತಿಸಿದ್ದೆವು ಅದನ್ನು ಬಿಟ್ಟರೆ ನಮಗೆ ಯಾವುದೇ ದುರುದೇಶವಿಲ್ಲ. ಆದ್ದರಿಂದ ತಾವು ಒಂದೊಂದು ಘಟಕ ಹಾಗೂ ವಿಭಾಗಗಳಲ್ಲಿ ಒಂದು ರೀತಿ ಕ್ರಮ ತೆಗೆದುಕೊಳ್ಳದೆ ಒದೇರೀತಿಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಜತೆಗೆ ಅಧಿಕಾರಿಗಳು ಯಾವುದೇ ಹೋರಾಟಕ್ಕೆ ಬರುವುದಿಲ್ಲ, ಅವರ ಪರವಾಗಿ ನಾವು ಹೋರಾಟಕ್ಕೆ ಇಳಿದರು ಸಹಿಸಿಕೊಳ್ಳುವುದಿಲ್ಲ. ಇದು ನಮಗೆ ಬಿಸಿ ತುಪ್ಪವಾಗಿ ಈ ಹಿಂದಿನಿಂದಲೂ ಪರಿಣಮಿಸುತ್ತಿದ್ದು ಇದು ಸಂಪೂರ್ಣವಾಗಿ ನಿಲ್ಲಬೇಕು. ಇದು ನಿಲ್ಲಬೇಕಾದರೆ ಮೊದಲು ನೌಕರರಾದ ನಾವು ಎಚ್ಚೆತ್ತುಕೊಳ್ಳಬೇಕು.

ಮುಷ್ಕರಕ್ಕೆ ಕರೆ ನೀಡುವ ಸಂಘಟನೆಗಳ ಹಿಂದೆ ಹೋಗುವುದನ್ನು ನಿಲ್ಲಿಸಬೇಕು. ಜತೆಗೆ ಅಧಿಕಾರಿಗಳು ತಮ್ಮ ವೇತನವೂ ಹೆಚ್ಚಾಗಬೇಕು ಎಂದು ಪ್ರತಿಭಟನೆಗೆ ಮುಂದಾಗದ ಹೊರತು ನಾವು ಕೂಡ ಮುಂದಾಗಬಾರದು. ಏಕೆಂದರೆ ಅಧಿಕಾರಿಯೊಬ್ಬರ ವೈಯಕ್ತಿಕ ಜೀವನ ಹೇಗೋ ಹಾಗೆಯೇ ಒಬ್ಬ ನೌಕರನ ಜೀವನ ಕೂಡ. ಇಲ್ಲಿ ವೇತನ ಹೆಚ್ಚಳವಾದರೆ ಅಧಿಕಾರಿಗಳಿಗೆ ನಮಗಿಂತ ಹೆಚ್ಚು ವೇತನ ಸಿಗುತ್ತದೆ.

ಅದೇ ರೀತಿ ನಮಗೆ ಕಡಿಮೆ ವೇತನ ಸಿಗುತ್ತದೆ. ಆದರೆ ನಾವು ಹೋರಾಟ ಮಾಡಿ ಅವರಿಗೆ ವೇತನ ಹೆಚ್ಚಳ ಮಾಡಿಕೊಡುವ ಜತೆಗೆ ಇಂಥ ಶಿಕ್ಷೆಗಳನ್ನು ಅವರಿಂದಲೇ ಅನುಭವಿಸಬೇಕು ಎಂದರೆ ಮನಸ್ಸಿಗೆ ಭಾರಿ ನೋವಾಗುತ್ತದೆ. ಹೀಗಾಗಿ ಅಧಿಕಾರಿಗಳು ಬರದ ಹೋರಾಟವನ್ನು ನಾವು ಮಾಡಬಾರದು ಎಂದು ನೊಂದ ನೌಕರರು ದೂಃಖದಿಂದ ತಮಗಾಗುತ್ತಿರುವ ಅನ್ಯಾಯದ ನೋವುವನ್ನು ತೋಡಿಕೊಳ್ಳುತ್ತಿದ್ದಾರೆ.

ಇನ್ನು ಈಗಲಾದರೂ ಅಧಿಕಾರಿಗಳು ಮಾಡುತ್ತಿರುವ ತಾರತಮ್ಯವನ್ನು ಬಿಟ್ಟು ಎಲ್ಲರನ್ನೂ ಸಂಸ್ಥೆಯ ನೌಕರರಂತೆ ಕಾಣುವ ಮೂಲಕ ವಿಶೇಷ ರಜೆ ಮಂಜೂರು ಮಾಡಬೇಕು. ಜತೆಗೆ ಈಗ ಎಐಟಿಯುಸಿ ಮೇಲೆ ಬಂದಿರುವ ಆರೋಪವನ್ನು ಹೊಗಲಾಡಿಸಲು ಈ ಸಂಘಟನೆಗಳ ಮುಖಂಡರು ಕೂಡ ಅನ್ಯಾಯಕ್ಕೊಳಗಾಗುತ್ತಿರುವ ನೌಕರರ ಪರ ನಿಂತು ವಿಶೇಷ ರಜೆ ಮಂಜೂರು ಮಾಡಿಸುವುದಕ್ಕೆ ಮುಂದಾಗಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

NWKRTC ನಿಪ್ಪಾಣಿ ಘಟಕದ ಡಿಎಂ ಆ.5ರಂದು ಡ್ಯೂಟಿಗೆ ಬರದ 16 ಮಂದಿ ನೌಕರರಿಗೆ ವಿಶೇಷ ರಜೆ ಮಂಜೂರು ಮಾಡಲು ಡಿಸಿಗೆ ಕಳಿಸಿರುವ ಲೆಟರ್‌
Megha
the authorMegha

Leave a Reply

error: Content is protected !!