CRIMENEWSನಮ್ಮರಾಜ್ಯ

KSRTC: ಆ.5ರ ಮುಷ್ಕರದ ವೇಳೆ ಬಸ್‌ಗೆ ಕಲ್ಲು ಹೊಡೆದ ಇಬ್ಬರು ನೌಕರರು ಅರೆಸ್ಟ್‌- ಜಾಮೀನು ಸಿಗದೆ ಕಂಬಿ ಎಣಿಸುತ್ತಿರುವ…

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಆ.5ರಂದು ಹಮ್ಮುಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರದ ವೇಳೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗೆ ಬೈಕ್‌ನಲ್ಲಿ ಬಂದು ಕಲ್ಲು ತೂರಿ ಪರಾರಿಯಾಗಿದ್ದ ಮುಸುಕುದಾರಿಗಳಿಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಆ.5ರಂದು ಹೊಸಪೇಟೆ ವಿಭಾಗದ ಬಸ್‌ ಹುಬ್ಬಳ್ಳಿಯಿಂದ ಹೊಸಪೇಟೆ ಬರುತ್ತಿದ್ದ ಬಸ್‌ಗೆ ಕಲ್ಲು ತೂರಿ ಬಸ್‌ನ ಮುಂದಿನ ಭಾಗದ ಗ್ಲಾಸ್‌ ಜಖಂ ಮಾಡಿ ಪರಾರಿಯಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹುಬ್ಬಳ್ಳಿ ನಗರ ಘಟಕ-1ರ ಇಬ್ಬರು ನೌಕರರನ್ನು ಇದೇ ಆ.7ರಂದು ಬಂಧಿಸಿರುವ ಪೊಲೀಸರು ಎಫ್‌ಐಆರ್‌ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ನ್ಯಾಯಾಧೀಶರು ಸಂಸ್ಥೆಯ ಈ ಇಬ್ಬರು ಹುಬ್ಬಳ್ಳಿ ನಗರ ಘಟಕ-1ದ ನೌಕರರನ್ನು ನ್ಯಾಯಾಂಗ ಬಂಧನದಲ್ಲಿಟಟಿದ್ದಾರೆ. ಈ ನಡುವೆ ಈ ಆರೋಪಿಗಳು ಜಾಮೀನು ಅರ್ಜಿ ಹಾಕಿದ್ದು, ಈವರೆಗೂ ಇವರಿಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ಕೋಪಕ್ಕೆ ಬುದ್ಧಿಕೊಟ್ಟು ಮಾಡಿದ ತಪ್ಪಿಗೆ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಈ ಇಬ್ಬರು ಸಾರಿಗೆ ನೌಕರರು ಮುಷ್ಕರದ ಸಮಯದಲ್ಲಿ ಮಾರ್ಗದಲ್ಲಿದ್ದ ಬಸ್‌ ಮೇಲೆ ಕಲ್ಲು ತೂರಿದ್ದರಿಂದ ಈಗ ಜೈಲು ಸೇರುವಂತಾಗಿದೆ. ಅಲ್ಲದೆ ಪ್ರತಿ ಮುಷ್ಕರ ಮಾಡುವ ವೇಳೆ ನೌಕರರನ್ನಷ್ಟೇ ಬನ್ನಿ ಎಂದು ಕರೆ ನೀಡುವ ಸಂಘಟನೆಗಳ ಮುಖಂಡರು ಈ ರೀತಿ ನಡೆಯುವ ಘಟನೆಗಳ ಜವಾಬ್ದಾರಿಯನ್ನು ಸ್ವಯಂ ಪ್ರೇರಿತವಾಗಿ ಏಕೆ ತೆಗೆದುಕೊಂಡು ನೌಕರರ ಪರ ಕಾನೂನು ಹೋರಾಟಕ್ಕೆ ಮುಂದಾಗುವುದಿಲ್ಲ?

ಇಲ್ಲಿ ಮುಷ್ಕರ ನಡೆಸಿದ್ದರಿಂದ ಕಲ್ಲು ತೂರಿ ಸರ್ಕಾರಿ ಬಸ್‌ಗೆ ಹಾನಿಯಾಗಿದೆ. ಹೀಗಾಗಿ ಈ ರೀತಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ನೌಕರರ ಜೀವನ ಮತ್ತು ಕುಟುಂಬ ಎಷ್ಟು ತೊಂದರೆಗೆ ಸಿಲುಕುತ್ತದೆ ಎಂಬುವುದಕ್ಕೆ ಈ ಇಬ್ಬರು ನೌಕರರೇ ನಮಗೆ ಜ್ವಲಂತ ನಿದರ್ಶನವಾಗಿದ್ದಾರೆ.

ಹೀಗಾಗಿಯೇ ಪ್ರತಿ ಬಾರಿಯೂ ವಿಜಯಪಥ ನೌಕರರಿಗೆ ಎಚ್ಚರಿಕೆ ನೀಡುತ್ತಲೇ ಬರುತ್ತಿದೆ. ಯಾವುದೇ ಸಂಘಟನೆಗಳು ಕರೆ ನೀಡುವ ಪ್ರತಿಭಟನೆಯಲ್ಲಿ ನೀವು ಭಾಗಿಯಾಗಬೇಡಿ, ನಿಮ್ಮ ಜತೆಗೆ ಸಂಸ್ಥೆಯ ಎಲ್ಲ ಅಧಿಕಾರಿಗಳು, ಇಬ್ಬಂದಿಗಳು ಭಾಗಿಯಾದರೆ ಅಂತಹ ಹೋರಾಟದಲ್ಲಿ ನೀವು ಭಾಗವಹಿಸಿ ಈ ರೀತಿ ಕಾನೂನು ಬಾಹಿರ ಮುಷ್ಕರದಲ್ಲಿ ಭಾಗವಹಿಸುವುದು ಬಳಿಕ ಕೋಪಕ್ಕೆ ಬುದ್ಧಿಕೊಟ್ಟು ಈ ರೀತಿ ಕಾನೂನು ಬಾಹಿರ ಕೃತ್ಯ ಎಸಗಿ ಜೈಲು ಸೇರುವುದು ಇದು ನಿಮಗೆ ಬೇಕಾ ಅಂತ.

ಇನ್ನಾದರೂ ಸಂಘಟನೆಗಳ ಮುಖಂಡರು ಕೂಡ ಈ ರೀತಿ ಅಮಾಯಕರನ್ನು ಬಲಿಕೊಡುವಂಥ ಹೋರಾಟಗಳನ್ನು ಬಿಟ್ಟು ಅವರಿಗೆ ನ್ಯಾಯಯುತವಾಗಿ ಸಿಗಬೇಕಿರುವುದನ್ನು ಪಡೆಯುವುದಕ್ಕೆ ಸಮಸ್ತ ಸಾರಿಗೆಯ ಅಧಿಕಾರಿಗಳು/ನೌಕರರನ್ನು ಒಟ್ಟುಗೂಡಿಸಿಕೊಂಡು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ಬಳಿಕ ಹೋರಾಟಕ್ಕೆ ಇಳಿಯಿರಿ. ಹೀಗೆ ಅಮಾಯಕ ನೌಕರರ ಬಲಿ ಕೊಡುವ ಕೆಲಸ ಮಾಡಬೇಡಿ ಎಂದು ಸಮಸ್ತ ನೌಕರರ ಪರವಾಗಿ ನೊಂದು ನೌಕರರು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!