NEWSನಮ್ಮರಾಜ್ಯಸಂಸ್ಕೃತಿ

ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ  ಶ್ರೀ ಕೃಷ್ಣನ ಜನ್ಮ ದಿನದಂದು ಶ್ರೀಗಳು ಗೋವಿಂದನ ಪಾದದಲ್ಲಿ ಲೀನವಾಗಿದ್ದಾರೆ.

ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ ಎಂದು, ಇವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಬಸ್ ತಿಮ್ಮೇಗೌಡ ಮತ್ತು ಸಣ್ಣಮ್ಮನವರ ದ್ವಿತೀಯ ಪುತ್ರರಾಗಿ 10.02.1945ರಲ್ಲಿ ಜನಿಸಿದರು. ಶ್ರೀಗಳ ವಿದ್ಯಾಬ್ಯಾಸ ಬಿ.ಕಾಮ್., ಸಿ.ಎ.

1968 ರಲ್ಲಿ ಒಕ್ಕಲಿಗ ಸಮುದಾಯದ ಹಿರಿಯರಾದ ಕೆ.ಎಚ್.ರಾಮಯ್ಯನವರ ಪುತ್ರಿ ಶ್ರೀಮತಿ ಯಶೋಧರ ದಾಸಪ್ಪನವರ ಮೂಲಕ ಶ್ರೀ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ಸ್ವೀಕಾರ ದೀಕ್ಷೆ ಪಡೆದರು. ಆ ಬಳಿಕ ಇವರ ಹೆಸರು ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಎಂದು ನಾಮಕರಣವಾಯಿತು. ಬಳಿಕ ಬೆಂಗಳೂರಿನ ತಿರುಚ್ಚಿ ಕೈಲಾಸಾಶ್ರಮದಲ್ಲಿ ಸಂಸ್ಕೃತ ವೇದ ಅಧ್ಯಯನ ಮಾಡಿದ್ದರು.

1974 ರಲ್ಲಿ ಶ್ರೀ ಆದಿಚುಂಚನಗಿರಿ ಮಠಕ್ಕೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು, ಶ್ರೀ ಮಠದ ಹಿರಿಯ ಸ್ವಾಮಿಗಳು ಬರೆದ ಮರಣ ಶಾಸನದ ಅನ್ವಯ 71ನೇ ಪೀಠಾಧ್ಯಕ್ಷರಾಗಿ ಇವರನ್ನು ಆಯ್ಕೆ ಆಗುತ್ತಾರೆ. ಆದರೆ ಶ್ರೀ ಕುಮಾರ ಚಂದ್ರಶೇಖರ ನಾಥ ಸ್ವಾಮಿಗಳು ಅಲ್ಲಿ ಇರಲು ಇಚ್ಚಿಸದೆ, ಬೆಂಗಳೂರಿನ ಕೈಲಾಸ ಆಶ್ರಮದದ ಕಡೆ ಪಯಣ ಬೆಳೆಸುತ್ತಾರೆ.

ತದನಂತರ 1983 ರಲ್ಲಿ ಕೆಂಗೇರಿಯ ಬಳಿ ತಮ್ಮ ಪೂರ್ವಾಶ್ರಮದವರ ಸಹಾಯದಿಂದ ಹತ್ತು ಎಕರೆ ಜಮೀನು ಕೊಂಡುಕೊಂಡು ಅದರಲ್ಲಿ ಪುಟ್ಟ ಗುಡಿಸಲು ನಿರ್ಮಿಸಿ” ಶ್ರೀ ಗುರು ಜ್ಞಾನ ಕೇಂದ್ರ ಟ್ರಸ್ಟ್” ಶಾಲೆ ತೆರೆದು ಪ್ರತ್ಯೇಕವಾಗಿ ಶಾಲೆ, ಕಾಲೇಜು, ನಿರ್ಮಿಸುತ್ತಾರೆ.

ಕಾಲಾನಂತರ 2002ರಲ್ಲಿ ಹೊಸ ಟ್ರಸ್ಟಿಗಳ ಮೂಲಕ ಅನೇಕ ಒಕ್ಕಲಿಗ ಸಮುದಾಯದ ಹಿರಿಯರಿಂದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಎಂದು ನಾಮಕರಣವಾಗಿ, ಮಾಜಿ ಪ್ರಧಾನಿ ದೇವೇಗೌಡ ಅವರು ಸೇರಿದಂತೆ ಅನೇಕ ಒಕ್ಕಲಿಗ ಬಂಧುಗಳು ಶ್ರೀ ಮಠಕ್ಕೆ ಸಹಾಯ ಮಾಡುತ್ತಾರೆ. ಇಲ್ಲಿ ಪಂಚ ಗಣಪ ದೇವಸ್ಥಾನವಿದ್ದು ಇಷ್ಟಾರ್ಥ ಫಲಿಸುತ್ತದೆ ಎಂಬ ನಂಬಿಕೆ ಇದೆ.

Advertisement

ಇನ್ನು ಶ್ರೀ ಮಠದ ವಾರಸುದಾರರನ್ನಾಗಿ ಕಳೆದ ವರ್ಷವಷ್ಟೇ ಸನ್ಯಾಸ ದೀಕ್ಷಾ ಪಡೆದ ಡಾ.ನಿಶ್ಚಲಾನಂದನಾಥ ಅವರನ್ನು ಮಹಾ ಸ್ವಾಮೀಜಿಯನ್ನಾಗಿ ಆಯ್ಕೆ ಮಾಡಿದ್ದು, ಶ್ರೀ ಮಠವನ್ನು ಮುನ್ನಡೆಸಲು ಸಮರ್ಥರಾಗಿರುವ ಈ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಇಂದು ಶ್ರೀ ಕೃಷ್ಣನಲ್ಲಿ ಲೀನವಾಗಿರು ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಿದ್ದಾರೆ.

ಶ್ರೀ ಕೃಷ್ಣನಲ್ಲಿ ಲೀನ ರಾದ ಪೂಜ್ಯರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥನೆ, ಕೃಷ್ಣಾರ್ಪಣಮಸ್ತು. -ನಂಜೇಗೌಡ ನಂಜುಂಡ

Deva
the authorDeva

Leave a Reply

error: Content is protected !!