CRIMENEWSನಮ್ಮಜಿಲ್ಲೆ

ಸರ್ಕಾರಿ ಬಸ್‌ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್‌ ಸವಾರನಿಂದ ಹಲ್ಲೆ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್‌ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬಸ್‌ ಬರುತ್ತಿದ್ದಾಗ ರಸ್ತೆ ಮಧ್ಯೆ ಬೈಕ್‌ ನಿಲ್ಲಿಸಿ ಬಸನ್ನು ಅಡ್ಡಗಟ್ಟಿದ ಕಿಡಿಗೇಡಿ ಡೇವಿಡ್ ಎಂಬಾತನ ಏಕಾಏಕಿ ಬಂದು ಬಸ್‌ ಗಾಜನ್ನು ಪುಡಿಗಟ್ಟಿದ್ದಾನೆ ಬಳಿಕ ಚಾಲಕ ಮಲ್ಲಿಕಾರ್ಜುನ ಮತ್ತು ನಿರ್ವಾಹಕ ಯಲ್ಲಪ್ಪ ಅವರ ಮೇಲು ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ಬೈದಿದ್ದಾನೆ.

ಈ ಸಂಬಂಧ ಗದಗ ರಸ್ತೆಯ ಈ ಡೇವಿಡ್ ಎಂಬಾತನ ವಿರುದ್ಧ, ಬೈಕ್‌ ನಂಬರ್ ಸಮೇತ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಚಾಲಕ ದೂರು ನೀಡಿದ್ದಾರೆ.

ಬೈಕ್‌ನಲ್ಲಿ ಬಂದ ಡೇವಿಡ್ ಏಕಾಏಕಿ ಬಸ್‌ ತಡೆದು ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ ಕೈಯಿಂದ ಗಾಜು ಒಡೆದು ಕೊಲೆಗೆ ಯತ್ನಿಸಿ, ನಂತರ ನಿರ್ವಾಹಕರಿಗೂ ಅವಾಚ್ಯವಾಗಿ ನಿಂದಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಈತನ ವಿರುದ್ಧ ಕಾನೂನಾತ್ಮಕವಾಗಿ ಕ್ರಮತೆಗೆದುಕೊಂಡು ನಮ್ಮ ಡ್ಯೂಟಿಗೆ ಮತ್ತು ಜೀವಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!