NEWSVideosನಮ್ಮಜಿಲ್ಲೆನಮ್ಮರಾಜ್ಯ

KSRTC ಬಡ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಸಲ್ಲ: ಸಾರಿಗೆ ಸಚಿವರು ಪರಿಶೀಲಿಸಿ- ಅಧಿವೇಶನದಲ್ಲಿ ಶಾಸಕರ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಿಂದ ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ವಿಧೇಯಕವನ್ನು ಮಂಡಿಸುವ ಸಂದರ್ಭದಲ್ಲಿ ರಾಜ್ಯದ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯಿದೆಯನ್ನು ಜಾರಿ ಮಾಡುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ ವಿಧೇಯಕವನ್ನು ಪುನರ್ ಪರಿಶೀಲಿಸುವಂತೆ ಸಾರಿಗೆ ಸಚಿವರಿಗೆ ಶಾಸಕರು ಒತ್ತಾಯಿಸಿದ್ದಾರೆ.

ಎಸ್ಮಾ ಕಾಯ್ದೆ ಹೇರಿ ಸಾರಿಗೆ ನೌಕರರನ್ನು ಬೆದರಿಸುವುದು ಸರಿಯಲ್ಲ. ಗ್ಯಾರಂಟಿ ಬಗ್ಗೆ ಪ್ರಚಾರ ಪಡೆಯುವ ರಾಜ್ಯ ಸರ್ಕಾರ ಸಾರಿಗೆ ನೌಕರರ ಹಿಂಬಾಕಿ, ವೇತನ ಪರಿಷ್ಕರಣೆ ಮಾಡಬೇಕು ಎಂದು ವಿಧಾನ ಪರಿಷತ್‌ನಲ್ಲಿ ಶಾಸಕರಾದ ಎಸ್.ವಿ. ಸಂಕನೂರ್, ಗೋವಿಂದರಾಜು, ಟಿ.ಎ.ಶರವಣ ಆಗ್ರಹಿಸಿದ್ದಾರೆ.

ಇಂದು ವಿಧಾನಸಭೆಯ ಮೇಲ್ಮನೆಯಲ್ಲಿ ನಡೆದ ಚರ್ಚೆವೇಳೆ ಬಡ ಸಾರಿಗೆ ನೌಕರರ ಮೇಲೆ ಈ ರೀತಿ ಗದಾಪ್ರಹಾರ ಮಾಡುವುದು ಸರಿಯಲ್ಲ. ಅವರು ಪ್ರತಿಭಟನೆಯನ್ನು ಏಕೆ ಮಾಡುತ್ತಾರೆ? ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದಿದ್ದಾಗ ಮಾಡುತ್ತಾರೆ. ನೀವು ಅವರಿಗೆ ಕೊಡಬೇಕಿರುವುದನ್ನು ಕೊಟ್ಟರೆ ಅವರೇಕೆ ಮುಷ್ಕರಕ್ಕೆ ಮುಂದಾಗುತ್ತಾರೆ ಎಂದು ಸಾರಿಗೆ ಸಚಿವರನ್ನು ಪ್ರಶ್ನಿಸಿದ್ದಾರೆ.

ಇನ್ನು ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡಿ ಅವರಿಗೆ ಕೊಡಬೇಕಿರುವುದನ್ನು ಕೊಟ್ಟಿದ್ದೀರಿ. ಆದರೆ ಸಾರಿಗೆ ನೌಕರರಿಗೆ ಕೊಡಬೇಕಿರುವುದನ್ನು ಏಕೆ ಕೊಟ್ಟಿಲ್ಲ? ಅವರು ತಮ್ಮ ಕುಟುಂಬದವರನ್ನು ಬಿಟ್ಟು ದಿನದ 24 ಗಂಟೆ ಹಗಲಿರುಳೆನ್ನದೇ ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದಾರೆ ಅವರೆಗೆ ಮಾತ್ರ ಈ ತಾರತಮ್ಯತೆ ಏಕೆ ಎಂದು ಅಧಿವೇಶದಲ್ಲಿ ಕೇಳಿದ್ದಾರೆ.

ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ಬರಿ ಸಾರಿಗೆ ನಿಗಮಗಳಿಗೆ ಮಾತ್ರನಾ? ಆಸ್ಪತ್ರೆಗಳು, ಪೊಲೀಸ್‌ಠಾಣೆ, ಜಲಮಂಡಳಿ, ಬೆಸ್ಕಾಂ, ಚೆಸ್ಕಾಂ ಸೇರಿದಂತೆ ಹಲವು ಇಲಾಖೆಗಳು ಬರುತ್ತವೆ. ಆದರೆ, ಬರಿ ಸಾರಿಗೆ ನೌಕರರ ಮೇಲೆ ಅದು ನೀವು ಸಾರಿಗೆ ಸಚಿವರಾಗಿದ್ದುಕೊಂಡು ಈ ರೀತಿ ಪ್ರಯೋಗ ಮಾಡುವುದು ಸರಿಯಲ್ಲ ಇದನ್ನು ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!