ಬೆಂಗಳೂರು: ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ತಡೆಯಲು ಸಂಸ್ಥೆಯ ಚಾಲಕರಿಗೆ ವಲಯವಾರು ವಾರದಲ್ಲಿ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.
ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಪಘಾತ ನಿಯಂತ್ರಣ ಹೇಗೆ ಎಂಬ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಈ ವೇಳೆ ಅಪಘಾತ ರಹಿತ ಚಾಲನೆ ಕುರಿತು ಚಾಲಕರಲ್ಲಿ ಅರಿವು ಮೂಡಿಸುವುದು ಮತ್ತು ಸೂಕ್ತ ತರಬೇತಿ ನೀಡುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಆರ್. ರಾಮಚಂದ್ರನ್, ಬಿಎಂಟಿಸಿಯ ಎಲ್ಲ ಘಟಕಗಳಲ್ಲಿ ಪ್ರತಿದಿನ ಬೆಳಗ್ಗೆ 5ಗಂಟೆಗೆ ಸಭೆ ನಡೆಸಿ ಚಾಲಕರಿಗೆ ಸುರಕ್ಷಾ ಚಾಲನೆ ಮತ್ತು ನಿಯಮ ಪಾಲನೆ ಕುರಿತು ಸೂಚನೆ ನೀಡಬೇಕು. ವಲಯವಾರು ವಾರದಲ್ಲಿ ಕನಿಷ್ಠ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು. ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆಯುವ ನಿಟ್ಟಿನಲ್ಲಿ ರೂಪಿಸಿರುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ಚಾಲಕರು ಮೊಬೈಲ್ನಲ್ಲಿ ಮಾತನಾಡಿದರೆ ಅವರನ್ನು 15 ದಿನಗಳ ಅಮಾನತು ಮಾಡಿ ಬೇರೆ ಘಟಕಕ್ಕೆ ವರ್ಗಾವಣೆ ಮಾಡಲಾಗುವುದು. ಮದ್ಯಪಾನ ಮಾಡಿ ಬಸ್ ಚಲಾಯಿಸಿದರೆ ಅಮಾನತು ಮಾಡಲಾಗುವುದು ಎಂಬುದನ್ನು ಚಾಲಕರಿಗೆ ಮನದಟ್ಟು ಮಾಡಬೇಕು ಎಂದರು.
20 ಚಾಲಕರ ಅಮಾನತು: ಆಗಸ್ಟ್ ತಿಂಗಳಲ್ಲಿ ಬಿಎಂಟಿಸಿ ಬಸ್ಗಳಿಂದ ಒಟ್ಟು 4 ಮಾರಣಾಂತಿಕ ಅಪಘಾತಗಳಾಗಿವೆ. ಅದರಲ್ಲಿ 3 ಪ್ರಕರಣಗಳು ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಉಳಿದೊಂದು ಅಪಘಾತ ಇ-ಬಸ್ ಚಾಲಕನಿಂದ ಸಂಭವಿಸಿದೆ. ಹಾಗೆಯೇ, ಕಳೆದೊಂದು ವರ್ಷದಲ್ಲಿ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
Related

You Might Also Like
KSRTC: ಘಟಕಕ್ಕೆ ಬಂದರೂ ಡ್ಯೂಟಿ ಸಿಗದೆ ಹೋದರೆ ಕೆಲಸದ ಸಮಯ ಡಿಪೋದಲ್ಲೇ ಇದ್ದರೆ ಹಾಜರಾತಿ: ಮಾಹಿತಿ ನೀಡಿದ ಡಿಸಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳು ಘಟಕಕ್ಕೆ ಹಾಜರಾಗಿ ಅವರಿಗೆ ಡ್ಯೂಟಿ ಸಿಗದೆ ಹೋದರೆ ಅವರು, ಡಿಪೋದಲ್ಲೇ ಕೆಲಸದ ಸಮಯದಲ್ಲಿ ಇದ್ದರೆ...
ಪ್ಲಾಸ್ಟರ್ ಆಫ್ ಪ್ಯಾರಿಸ್ ಬಿಡಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ: ರಾಜ್ಯ ಮಾಲಿನ್ಯ ಮಂಡಳಿ
ಬೆಂಗಳೂರು: ಇದೇ ಆಗಸ್ಟ್ 26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ)...
BMTC ಚಾಲನಾ ಸಿಬ್ಬಂದಿಗಳ ವಿರುದ್ಧ ವಜಾ, ಅಮಾನತು ಕ್ರಮ- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!
ಎಲ್ಲ ಬಸ್ ಅಪಘಾತಗಳಿಗೂ ಚಾಲಕ-ನಿರ್ವಾಹಕರೇ ಹೊಣೆಯಲ್ಲ..!? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಾಗುವ ಎಲ್ಲ ಅಪಘಾತಗಳಿಗೂ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರನ್ನೇ ಹೊಣೆ...
ಪತಿ ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೊರ್ಟ್
ಶಿವಮೊಗ್ಗ: ಪತಿಯನ್ನು ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೊಬ್ಬನಿಗೆ ಏಳುವರ್ಷ ಜೈಲು ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಮಹತ್ವದ...
ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್
ಬೆಂಗಳೂರು: ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ...
NWKRTC: 45 ವರ್ಷದ ಮಹಿಳೆಗೆ ಅನುಕಂಪದ ಆಧಾರದಡಿ ಹುದ್ದೆಕೊಡಿ- ಹೈಕೋರ್ಟ್ ಆದೇಶ
ಬೆಂಗಳೂರು: ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ಹೈಕೋರ್ಟ್ ಮಹತ್ವ ಆದೇಶ ಹೊರಡಿಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರನ...
BBMP: ಗಣೇಶ ಮೂರ್ತಿ ವಿಸರ್ಜನೆಗೆ 41ಕೆರೆಗಳು, 489 ಸಂಚಾರಿ ವಾಹನಗಳ ವ್ಯವಸ್ಥೆ
ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗಾಗಿ ಕೆರೆ ಅಂಗಳ, ತಾತ್ಕಾಲಿಕ ಕಲ್ಯಾಣಿ, ಸಂಚಾರಿ ವಾಹನ (ಮೊಬೈಲ್ ಟ್ಯಾಂಕ್)/ ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 41ಕೆರೆ,...
ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾವಿದರು-ಕಲಾತಂಡದವರಿಂದ ಅರ್ಜಿ ಆಹ್ವಾನ
ಶಿವಮೊಗ್ಗ: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಅಥವಾ ಕಲಾ ತಂಡದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಮಹಾನಗರ ಪಾಲಿಕೆವತಿಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸುವ...
NWKRTC: ಆ.22ರಿಂದ 26ರವರೆಗೆ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಗಳ ಸೌಲಭ್ಯ
ಬೆಂಗಳೂರು: ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಸುಗಳು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ ಕಾರ್ಯಾಚರಣೆ ನಡೆಸಲಿವೆ....