KSRTC: ಘಟಕಕ್ಕೆ ಬಂದರೂ ಡ್ಯೂಟಿ ಸಿಗದೆ ಹೋದರೆ ಕೆಲಸದ ಸಮಯ ಡಿಪೋದಲ್ಲೇ ಇದ್ದರೆ ಹಾಜರಾತಿ: ಮಾಹಿತಿ ನೀಡಿದ ಡಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳು ಘಟಕಕ್ಕೆ ಹಾಜರಾಗಿ ಅವರಿಗೆ ಡ್ಯೂಟಿ ಸಿಗದೆ ಹೋದರೆ ಅವರು, ಡಿಪೋದಲ್ಲೇ ಕೆಲಸದ ಸಮಯದಲ್ಲಿ ಇದ್ದರೆ ಅಂಥವರಿಗೆ ಹಾಜರಾತಿ (Attendance) ನೀಡಲಾಗುವುದು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಹೌದು! ಚಾಲನಾ ಸಿಬ್ಬಂದಿಗಳಾದ ಚಾಲಕರು ಮತ್ತು ನಿರ್ವಾಹಕರು ಘಟಕಕ್ಕೆ ಹಾಜರಾಗಿ ಡ್ಯೂಟಿ ಕೊಡುವಂತೆ ಕೇಳಿದರು ಕೆಲ ಸಂದರ್ಭದಲ್ಲಿ ಕೆಲ ಚಾಲನಾ ಸಿಬ್ಬಂದಿಯನ್ನು ಕೆಲಸಕ್ಕೆ ಕಳುಹಿಸುವುದಿಲ್ಲ. ಈ ಸಂದರ್ಭದಲ್ಲಿ ಡ್ಯೂಟಿ ಸಿಗದ ನೌಕರರು ಘಟಕದಲ್ಲೇ ಡ್ಯೂಟಿ ಸಮಯವನ್ನು ಕಳೆದರೆ ಅವರಿಗೆ ಹಾಜರಾತಿ (Attendance) ಕೊಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಡಿಪೋಗೆ ಹಾಜರಾದರೂ ಕೆಲ ನೌಕರರಿಗೆ ಡ್ಯೂಟಿ ಸಿಗದ ಸಂದರ್ಭದಲ್ಲಿ ಅಂಥ ನೌಕರರಿಂದ ರಜೆಕೊಟ್ಟು ಹೋಗಿ ಎಂದು ಡಿಪೋ ವ್ಯವಸ್ಥಾಪಕರೋ ಇಲ್ಲ ಟಿಐ, ಎಟಿಎಸ್, ಟಿಸಿ ಇವರಲ್ಲಿ ಯಾರಾದರೊಬ್ಬರು ಹೇಳುತ್ತಾರೆ. ಈ ವೇಳೆ ನಾನು ಡ್ಯೂಟಿಗೆ ಹೋಗುವುದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು ಆ ನೌಕರನ ಮಾತು ಕೇಳಿಸಿಕೊಳ್ಳುವುದಿಲ್ಲ.
ನಮಗೆ ಅದೆಲ್ಲ ಗೊತ್ತಿಲ್ಲ ಇಂದು ನಿನಗೆ ಡ್ಯೂಟಿ ಸಿಕ್ಕಿಲ್ಲ ಎಂದರೆ ರಜೆಚೀಟಿ ಕೊಟ್ಟುಹೋಗು ಇಲ್ಲ ಗೈರುಹಾಜರಿ ತೋರಿಸಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಈ ವೇಳೆ ವಿಧಿಯಿಲ್ಲದೆ ಡ್ಯೂಟಿ ಸಿಗದ ನೌಕರರು ಅವಶ್ಯವಿಲ್ಲದಿದ್ದರೂ ರಜೆಚೀಟಿ ಕೊಟ್ಟು ಹೋಗುತ್ತಾರೆ.
ಹೀಗಾಗಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆಯುವ ಸಲುವಾಗಿ ಗಣೇಶ ಚ.ಹಿತ್ತಲಮನಿ ಎಂಬುವರು ಕಳೆದ 29.12.2020ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ 2025ರಡಿ ಈ ಬಗ್ಗೆ ಮಾಹಿತಿ ಕೇಳಿದ್ದರು.
ಗಣೇಶ ಚ.ಹಿತ್ತಲಮನಿ ಅವರು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ಕರ್ತವ್ಯ ಸಿಗದೆ ಹೋದಾಗ ಆ ದಿನದ ಹಾಜರಿಯನ್ನು ಹಾಜರಿ ಪುಸ್ತಕದಲ್ಲಿ ಏನೆಂದು ಪರಿಗಣಿಸುತ್ತೀರಿ ಎಂದು ಕೇಳಿದ್ದರು.
ಗಣೇಶ ಅವರು ಕೇಳಿದ ಮಾಹಿತಿಯನ್ನು ಕೊಟ್ಟಿರುವ ಡಿಸಿ ಅವರು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ಕರ್ತವ್ಯ ಸಿಗದೆ ಇದ್ದಲ್ಲಿ ಅನುಸೂಚಿ ಪ್ರಾರಂಭವಾದಾಗಿನಿಂದ ಅನುಸೂಚಿ ಮುಗಿಯುವವರೆಗ ಘಟಕದಲ್ಲಿ ಹಾಜರಿದ್ದರೆ ಮಾತ್ರ ಹಾಜರಾತಿ ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಹೀಗಾಗಿ ಯಾವುದೇ ಚಾಲನಾ ಸಿಬ್ಬಂದಿಗೆ ತಾವು ಘಟಕಕ್ಕೆ ಹೋದಾಗ ಕರ್ತವ್ಯ ಸಿಗದೆ ಹೋದರೆ ಅಂಥವರು ಘಟಕದಲ್ಲೆ ಇದ್ದರೆ ಹಾಜರಾತಿ ಪಡೆಯಬಹುದು. ಒಂದು ವೇಳೆ ನೀವು ಘಟದಲ್ಲಿ ಇಲ್ಲದಿದ್ದರೆ ಗೈರುಹಾಜರಿ ತೋರಿಸುವುದಕ್ಕೆ ಡಿಎಂಗೆ ಅಧಿಕಾರವಿದೆ.
ಇಲ್ಲ ತಾವು ಘಟಕದಲ್ಲಿ ಇದ್ದರೂ ಡಿಎಂ ಗೈರು ಹಾಜರಿ ತೋರಿಸಿದರೆ ಆ ವೇಳೆ ನೀವು ನಿಗಮದ ನಿಯಮಗಳನ್ವಯ ಡಿಎಂ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಬಹುದು. ಒಂದು ವೇಳೆ ನೀವು ನೀಡಿದ ದೂರಿಗೆ ಮೇಲಧಿಕಾರಿಗಳು ಸ್ಪಂದಿಸದೆ ಹೋದರೆ ಕೋರ್ಟ್ ಮೆಟ್ಟಿಲೇರುವ ಮೂಲಕ ನೀವು ನ್ಯಾಯ ಪಡೆದುಕೊಳ್ಳಬಹುದು ಎಂದು ನಿಗಮದ ನಿವೃತ್ತ ಕಾನೂನು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಒಟ್ಟಾರೆ ನೌಕರರು ಕೆಲಸಕ್ಕೆ ಹಾಜರಾದ ವೇಳೆ ಡ್ಯೂಟಿ ಕೊಡದಿದ್ದರೆ ಇನ್ನು ಮುಂದೆ ಯಾವುದೇ ಚಾಲನಾ ಸಿಬ್ಬಂದಿ ರಜೆ ಚೀಟಿ ಕೊಡುವ ಬದಲಿಗೆ ತಾವು ಕಾರ್ಯಾಚರಣೆ ಗೊಳಿಸುವ ಮಾರ್ಗದ ಸಮಯದವರೆಗೂ ಡಿಪೋದಲ್ಲೇ ಇದ್ದರೆ ನಿಮಗೆ ಹಾಜರಾತಿ ಸಿಗುತ್ತದೆ. ಈ ಬಗ್ಗೆ ಯಾವುದೇ ಗೊಂದಲೇ ಬೇಡ ಎಂದು ಅಧಿಕಾರಿಯೇ ಸ್ಪಷ್ಟನೆ ನೀಡಿದ್ದಾರೆ.
Related

You Might Also Like
ಪ್ಲಾಸ್ಟರ್ ಆಫ್ ಪ್ಯಾರಿಸ್ ಬಿಡಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ: ರಾಜ್ಯ ಮಾಲಿನ್ಯ ಮಂಡಳಿ
ಬೆಂಗಳೂರು: ಇದೇ ಆಗಸ್ಟ್ 26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ)...
BMTC ಚಾಲನಾ ಸಿಬ್ಬಂದಿಗಳ ವಿರುದ್ಧ ವಜಾ, ಅಮಾನತು ಕ್ರಮ- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!
ಎಲ್ಲ ಬಸ್ ಅಪಘಾತಗಳಿಗೂ ಚಾಲಕ-ನಿರ್ವಾಹಕರೇ ಹೊಣೆಯಲ್ಲ..!? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳಲ್ಲಾಗುವ ಎಲ್ಲ ಅಪಘಾತಗಳಿಗೂ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರನ್ನೇ ಹೊಣೆ...
BMTC: ಮೊಬೈಲಲ್ಲಿ ಮಾತನಾಡುತ್ತ ಬಸ್ ಓಡಿಸಿದರೆ 15 ದಿನ ಅಮಾನತು- ಎಚ್ಚರಿಕೆ
ಬೆಂಗಳೂರು: ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ತಡೆಯಲು ಸಂಸ್ಥೆಯ ಚಾಲಕರಿಗೆ ವಲಯವಾರು ವಾರದಲ್ಲಿ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಶಾಂತಿನಗರದಲ್ಲಿರುವ...
ಪತಿ ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೊರ್ಟ್
ಶಿವಮೊಗ್ಗ: ಪತಿಯನ್ನು ಹತ್ಯೆಮಾಡಿದ ಪತ್ನಿ ಸೇರಿದಂತೆ ಇಬ್ಬರಿಗೆ ಮರಣದಂಡನೆ ಹಾಗೂ ಮತ್ತೊಬ್ಬನಿಗೆ ಏಳುವರ್ಷ ಜೈಲು ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಮಹತ್ವದ...
ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್
ಬೆಂಗಳೂರು: ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ...
NWKRTC: 45 ವರ್ಷದ ಮಹಿಳೆಗೆ ಅನುಕಂಪದ ಆಧಾರದಡಿ ಹುದ್ದೆಕೊಡಿ- ಹೈಕೋರ್ಟ್ ಆದೇಶ
ಬೆಂಗಳೂರು: ವಯೋಮಿತಿ ಮೀರಿದ ಮಹಿಳೆಗೆ ವಿಶೇಷ ಪ್ರಕರಣವೆಂದು ಅನುಕಂಪದ ಹುದ್ದೆ ನೀಡಬೇಕು ಎಂದು ಹೈಕೋರ್ಟ್ ಮಹತ್ವ ಆದೇಶ ಹೊರಡಿಸಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರನ...
BBMP: ಗಣೇಶ ಮೂರ್ತಿ ವಿಸರ್ಜನೆಗೆ 41ಕೆರೆಗಳು, 489 ಸಂಚಾರಿ ವಾಹನಗಳ ವ್ಯವಸ್ಥೆ
ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆಗಾಗಿ ಕೆರೆ ಅಂಗಳ, ತಾತ್ಕಾಲಿಕ ಕಲ್ಯಾಣಿ, ಸಂಚಾರಿ ವಾಹನ (ಮೊಬೈಲ್ ಟ್ಯಾಂಕ್)/ ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 41ಕೆರೆ,...
ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾವಿದರು-ಕಲಾತಂಡದವರಿಂದ ಅರ್ಜಿ ಆಹ್ವಾನ
ಶಿವಮೊಗ್ಗ: ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಅಥವಾ ಕಲಾ ತಂಡದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಮಹಾನಗರ ಪಾಲಿಕೆವತಿಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸುವ...
NWKRTC: ಆ.22ರಿಂದ 26ರವರೆಗೆ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಗಳ ಸೌಲಭ್ಯ
ಬೆಂಗಳೂರು: ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಹೆಚ್ಚುವರಿ 265 ವಿಶೇಷ ಸಾರಿಗೆ ಬಸ್ಸುಗಳು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ ಕಾರ್ಯಾಚರಣೆ ನಡೆಸಲಿವೆ....