NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ವೇತನ ಆಯೋಗದ ಶಿಫಾರಸು: ಕೊಟ್ಟ ಭರವಸೆ ಉಳಿಸಿಕೊಳ್ಳುತ್ತ ಸರ್ಕಾರ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾಗಿರುವ ಸಾರಿಗೆ ನೌಕರರಿಗೂ ವೇತನ ಆಯೋಗದ ಶಿಫಾರಸು ಅಳವಡಿಸಿ ಎಂಬ ನೌಕರರ ಕೂಗಿಗೆ ಸರ್ಕಾರ ಸ್ಪಂದಿಸಲಿದೆಯೇ?

ಹೌದು! ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನಕೊಡಿ ಎಂದು ಡಿಸೆಂಬರ್‌- 2020 ಮತ್ತು ಏಪ್ರಿಲ್‌ -2021ರಲ್ಲಿ ಸಾರಿಗೆ ನೌಕರರು ಇತಿಹಾಸದಲ್ಲಿ ಉಳಿಯುವಂತಹ ಹೋರಾಟವನ್ನೇ ಮಾಡಿದ್ದರು. ಆದರೆ ಕೊರೊನಾ ಮಹಾಮಾರಿ ಮತ್ತು ಅಂದಿನ ಬಿಜೆಪಿ ಸರ್ಕಾರದ ಇಚ್ಛಾಸಕ್ತಿಯ ಕೊರತೆಯಿಂದ ಅಂದು ನೌಕರರ ಬೇಡಿಕೆಗಳು ಮೂಲೆಗುಂಪಾದವು.

ಇನ್ನು ಹೋರಾಟಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲ ಪರೋಕ್ಷವಾಗಿಯೋ ದುಮುಕಿದರು ಎಂಬ ಕಾರಣಕ್ಕೆ ಸಾವಿರಾರು ಸಾರಿಗೆ ನೌಕರರ ಅನ್ನ, ನೆಮ್ಮದಿಯನ್ನೇ (ವಜಾ, ಅಮಾನತು, ವರ್ಗಾವಣೆ, ಪೊಲೀಸ್‌ ಕೇಸ್‌ ಹಾಕಿ) ಹಿಂದಿನ ಸರ್ಕಾರ ಮತ್ತು ಕೆಲ ಭ್ರಷ್ಟ ಅಧಿಕಾರಿಗಳು ಕಸಿದುಕೊಂಡರು. ಇದರಿಂದ ನೌಕರರ ಒಗ್ಗಟ್ಟನ್ನು ಒಡೆಯಬಹುದು ಎಂಬ ಲೆಕ್ಕಾಚಾರ ನಿಗಮಗಳಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳದ್ದಾಗಿತ್ತು. ಅದು ಸಫಲಕೂಡ ಆಯಿತು.

ನೌಕರರು ಪ್ರಸ್ತುತ ಅಲ್ಪ ವೇತನಕ್ಕೆ ಡ್ಯೂಟಿ ಮಾಡುತ್ತಿರುವುದಕ್ಕೆ ಇದೇ ನಿಗಮಗಳಲ್ಲಿ ಮಮ್ಮಲ ಮರಗುತ್ತಿರುವ ಅಧಿಕಾರಿಗಳು ಇದ್ದಾರೆ. ನಾವು ಕಚೇರಿಯಲ್ಲಿ ಎಸಿ/ ಫ್ಯಾನ್‌ ಕೆಳಗೆ ಕುಳಿತು ಕೆಲಸ ಮಾಡುತ್ತಿದ್ದೇವೆ ಎಂದರೆ ಅದು ನೌಕರರ ಬೆವರಿನ ಫಲ ಎಂದು ಕೊಂಡಿರುವ ಮತ್ತು ನೌಕರರ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಇದ್ದಾರೆ.

ನೌಕರರ ಶ್ರಮದಿಂದ ನಮಗೆ ಅನ್ನ ಸಿಗುತ್ತಿದೆ ಆದರೆ, ಆ ತಿಂದ ಅನ್ನ ಜೀರ್ಣವಾಗುವುದೆ ಎಂಬ ಯೋಚನೆಯಲ್ಲೂ ಕೆಲ ಅಧಿಕಾರಿಗಳ ಕಣ್ಣಾಲೆಗಳು ತೇವವಾಗುತ್ತಿವೆ. ಆದರೆ ಅದಾವುದನ್ನು ತೋರಿಸಿ ಕೊಳ್ಳದೆ ಅವರು ಇತರ ಅಧಿಕಾರಿಗಳಂತೆ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಜತೆಗೆ ಈಗ ನೌಕರರಂತೆ ಅಲ್ಪ ವೇತನ ತೆಗೆದುಕೊಳ್ಳುವ ಪರಿಸ್ಥಿತಿಗೆ ತಲುಪುತ್ತಿದೆ ಅಧಿಕಾರಿ ವರ್ಗ ಎಂಬುವುದು ಕಟು ಸತ್ಯವಾಗುತ್ತಿದೆ.

2021ರಿಂದ ಇವರೆಗೂ  ನೌಕರರ ಹಸಿವಿನ ಕೂಗು ಒಣಗಿದ ಗಂಟಲಿನಿಂದ ಬಾರದ ಧ್ವನಿ ಮತ್ತು ಇಂಥ ನೌಕರರ ಪರವಾದ ಅಧಿಕಾರಿಗಳ ಕಣ್ಣೀರನ ಹನಿಗಳು ಸರ್ಕಾರದ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ಉನ್ನತ ಅಧಿಕಾರಿಗಳ ಒಳಮನಸ್ಸಿಗೆ ತಾಕಲೇ ಇಲ್ಲ. ಆದರೆ ಅದು ಇಂದಿನ ಸಿಎಂ ಸಾರಿಗೆ ಸಚಿವರಿಗೆ ಅರಿವಾಗುತ್ತದೆ ಎಂದರೆ ಅವರು ಕೂಡ ನೌಕರರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.

ಹೀಗಾಗಿಯೇ ನೌಕರರು ಅನುಭವಿಸುತ್ತಿರುವ ಕಷ್ಟಗಳನ್ನು ನಿತ್ಯ ಕಣ್ಣಾರೆ ಕಾಣುತ್ತಿರುವ ಸಿಎಂ ಮತ್ತು ಸಾರಿಗೆ ಸಚಿವರು ಹಾಗೂ ಅಧಿಕಾರಿಗಳು ನೌಕರರಿಗೆ ಒಂದು ಒಳ್ಳೆಯದಾಗುವ ತೀರ್ಮಾನಕ್ಕೆ ಬರಬೇಕಿದೆ. ಅದಕ್ಕೆ ಸಮಸ್ತ ಸಂಘಟನೆಗಳು ಸರಿ ಸಮಾನ ವೇತನ ಕೊಡಿಸುವತ್ತ ಹೋರಾಟದ ರೂಪುರೇಷೆ ಹಾಕಿಕೊಳ್ಳಬೇಕಿದೆ.

ಅದೆ! ಸಾರಿಗೆ ಸಂಸ್ಥೆಗಳ ಅಧಿಕಾರಿಗಳು, ನೌಕರರಿಗೆ ವೇತನ ಆಯೋಗದ ಶಿಫಾರಸುಗಳನ್ನು ಅಳವಡಿಸುವ ಕುರಿತು ಚರ್ಚಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಸರ್ಕಾರಕ್ಕೆ ಒತ್ತಡ ಹೇರಬೇಕಿದೆ. ಆದರೆ ಅಧಿಕಾರಿಗಳು ಆ ಕೆಲಸಕ್ಕೆ ಇನ್ನೂ ಮುಂದಾಗುತ್ತಿಲ್ಲ. ಇದು ಸರ್ಕಾರಕ್ಕೆ ವರವಾಗುತ್ತಿದೆ.

ಇನ್ನಾದರೂ ಅಧಿಕಾರಿಗಳು. ಸಂಘಟನೆಗಳು ನೌಕರರ ಹೋರಾಟಕ್ಕೆ ಕೈ ಜೋಡಿಸಿದರೆ ಒಂದು ಶಾಶ್ವತ ಪರಿಹಾರ ಪಡೆದುಕೊಳ್ಳಲು ನೆರವಾಗುತ್ತದೆ.  ಇನ್ನು ಇದೇ ಆ.28ರಂದು ಕಾರ್ಮಿಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರಿಗೆ ಅಧಿಕಾರಿಗಳು -ಸಂಘಟನೆಗಳ ಸಭೆಯಲ್ಲಿ ಯಾವುದೇ ಮಹತ್ವದ ಬೆಳವಣಿಗೆಯಂತು ಆಗುವುದಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿದೆ.

ಹೀಗಾಗಿ ಸಮಸ್ತರು ಹೊಂದಾಣಿಕೆಯಿಂದ ಮುಂದಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕಿದೆ, ಇಲ್ಲದಿದ್ದರೆ ಸರ್ಕಾರ  ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವುದಿಲ್ಲ ಎಂಬುವುದು ಎಲ್ಲ ನೌಕರರ ಅಭಿಪ್ರಾಯವಾಗಿದೆ.

Megha
the authorMegha

Leave a Reply

error: Content is protected !!