NWKRTC: DA ಅರಿಯರ್ಸ್ ಬಗ್ಗೆ ಚರ್ಚಿಸಿ ಆದೇಶ ಮಾಡುವೆ-ಕೂಟದ ಪದಾಧಿಕಾರಿಗಳ ಜತೆ ವ್ಯವಸ್ಥಾಪಕ ನಿರ್ದೇಶಕರ ಚರ್ಚೆ


ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಹುಬ್ಬಳ್ಳಿ: ಸಾರಿಗೆ ನೌಕರರ ಕೂಟದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಲಯ ಮಟ್ಟದ ಕುಂದು ಕೊರತೆ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರ ಜತೆ ಸೋಮವಾರ ಸಭೆ ಮಾಡಲಾಯಿತು.
ಸಭೆಯಲ್ಲಿ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ರಾಜ್ಯ ಪ್ರಧಾನಕಾರ್ಯದರ್ಶಿ ತಿಪ್ಪೆಸ್ವಾಮಿ ನಾಯಕ, ರಾಜ್ಯ ಸಹ ಜಂಟಿ ಕಾರ್ಯದರ್ಶಿ ಶಶಿಕಾಂತ ಪಾಟೀಲ, ವಾಯುವ್ಯ ಕಾರ್ಯಧ್ಯಕ್ಷ ವಿರೇಶ ಪೂಜಾರ ನಿಗಮದ ನೌಕರರ ಪತ್ತಿನ ಸಹಕಾರಿ ಸಂಘ ಬಾಗಲಕೋಟ ಅಧ್ಯಕ್ಷ ವಜ್ರಮಟ್ಟಿ ಭಾಗವಹಿಸಿದ್ದರು.
ಈ ವೇಳೆ ವ್ಯವಸ್ಥಾಪಕ ನಿರ್ದೇಶಕರ ಬಳಿ ನೌಕರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಲಾಯಿತು. ಪ್ರಮುಖವಾಗಿ ವಾಯುವ್ಯ ಸಾರಿಗೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಕೊಡಲಾಗುವ ಪರಿಹಾರ ಮೊತ್ತವನ್ನು ₹5 ಲಕ್ಷದಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಕೇಳಲಾಯಿತು.
ಇದಕ್ಕೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು ಅತೀ ಶೀಘ್ರದಲ್ಲೇ 8 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಇನ್ನು ನಗದು ರಹಿತ ಆರೋಗ್ಯದ ಬಗ್ಗೆಯೂ ಚರ್ಚಿಸಲಾಯಿತು. ಈ ವೇಳೆ ಸಂಸ್ಥೆಯ ಕೆಲ ನೌಕರರು ನಮಗೆ ಇದು ಬೇಡ ಅಂತಾ ಬರೆದುಕೊಟ್ಟಿದ್ದು, ಸದ್ಯದಲ್ಲೇ ಅದನ್ನು ಕೂಡ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
DA ಅರಿಯರ್ಸ್ ಬಗ್ಗೆ ಚರ್ಚಿಸಿ ಸದ್ಯದಲ್ಲೇ ಅದನ್ನು ಕೂಡ ಆದೇಶ ಮಾಡುವುದಾಗಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರು ಕೂಟದ ಪದಾಧಿಕಾರಿಗಳಿಗೆ ತಿಳಿಸಿದರು.

ಇನ್ನು ಧಾರವಾಡ ಗ್ರಾಮೀಣ ವಿಭಾಗದ ರಾಮದುರ್ಗ ಘಟಕದಲ್ಲಿ ಫಾರಂ -4ನಲ್ಲಿ ಕಿಲೋಮೀಟರ್ ಕಡಿಮೆ ಇದ್ದು ವಾಹನದ ರೀಡಿಂಗ್ ಕಿಲೋಮೀಟರ್ ಹೆಚ್ಚಾಗಿದೆ, ಇದರಿಂದ ನೌಕರರಿಗೆ ಆಗುತ್ತಿರುವ ಕೆಎಂಪಿಲ್ ಸಮಸ್ಯೆ ಬಗ್ಗೆ ತಾವು ಗಮನಹರಿಸಬೇಕು ಎಂದಾಗ ಆ ಫಾರಂ -4 ಬದಲಾವಣೆ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಆಗುತ್ತಿರುವ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.
ಹೀಗೆ ನೌಕರರಿಗೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಕೂಟದ ಪದಾಧಿಕಾರಿಗಳು ಎಂಡಿ ಅವರ ಬಳಿ ಚರ್ಚೆ ನಡೆಸಿದ್ದು, ನೌಕರರ ಹಿತ ಕಾಯುವುದಾಗಿ ಎಂಡಿ ಅವರು ಭರವಸೆ ನೀಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
Related
