ದೇವನಹಳ್ಳಿ ಸರ್ಕಾರಿ ಶಾಲೆ ಕಿಟಕಿ ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯ ಪ್ರಕರಣ: ಆಯೋಗದ ಅಧ್ಯಕ್ಷ ನಾಗಣ್ಣಗೌಡ ಭೇಟಿ

- ಗಾಯಗೊಂಡ ಮೂವರು ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿಯ ಕೋಟೆ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಕಟ್ಟಡದ ಕಿಟಕಿ ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸೋಮವಾರ ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರ ಮತ್ತು ಆಯೋಗವು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ, ಆದರೆ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡದ ಕಾಮಗಾರಿ ಸರಿಯಾಗಿ ಮಾಡಿಲ್ಲ, ಶಾಲೆಯ ಗೋಡೆಗೆ ಮತ್ತು ಸಜ್ಜೆಗೆ ಯಾವುದೇ ರೀತಿಯ ಲಿಂಕ್ ಇಲ್ಲದೆ ಕಟ್ಟಿದ್ದಾರೆ, ಕಂಬಿ ಕಟ್ಟದೆ ಸುಮ್ಮನೆ ಎರಡು ಇಂಚು ಇಟ್ಟಿಗೆ ಸಿಮೆಂಟ್ ಹಾಕಿ ಬಿಟ್ಟಿದ್ದಾರೆ, ಇದು ಹೆಚ್ಚಿನ ದಿನಗಳು ನಿಲ್ಲುವುದಿಲ್ಲ, ಆದರೆ ಇಷ್ಟು ವರ್ಷ ಹೇಗೆ ತಡೆದಿತ್ತು ಎನ್ನುವುದು ಆಶ್ಚರ್ಯ, ಈ ರೀತಿ ಆಗದಂತೆ ಮುಂದೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಶಿಕ್ಷಕರು ಸಹ ನಮಗೆ ತಿಳಿಸಿದ್ದಾರೆ, ಮುಂಜಾಗ್ರತೆ ಕ್ರಮ ವಹಿಸಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ, ನಮಗೆ 2016ರಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಈ ರೀತಿ ಕಾಮಗಾರಿ ಮಾಡುವ ಬಗ್ಗೆ ದೂರು ನೀಡುತ್ತಾರೆ. ಮಕ್ಕಳು ನಮ್ಮ ದೇಶದ ಆಸ್ತಿ, ಅದಕ್ಕಾಗಿ ಗುಣಮಟ್ಟದ ಕಾಮಗಾರಿ ಮಾಡಬೇಕು, ಆದರೆ ಅವರು ಕಟ್ಟಡ ಕಾಮಗಾರಿ ಮಾಡುವ ಇಂಜಿನಿಯರ್‌ಗಳು ಬೇಜವಾಬ್ದಾರಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಶಾಲೆಯಲ್ಲಿ ಮಕ್ಕಳು ಓದುವುದಕ್ಕೆ ಬರುತ್ತಾರೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು, ಮೂರು ಮಕ್ಕಳಿಗೆ ಬೇಕಾದ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ. ಇದು ದುಃಖಕರ ಸಂಗತಿ, ಈಗಾಗಲೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.
ಎಲ್ಲ ಹಳೆ ಮತ್ತು ಹೊಸ ಶಾಲೆಗಳ ಕಟ್ಟಡದ ಗುಣಮಟ್ಟವನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರನ್ನು ಒದಗಿಸಲು ಉಮಾ ಮಹಾದೇವನ್ ಅವರು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾವು ಮಕ್ಕಳ ಸುರಕ್ಷತೆಗೆ ಮೊದಲು ಆದ್ಯತೆ ನೀಡುತ್ತೇವೆ. ಹಾಗೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟವನ್ನು ನೀಡುವಾಗ ಶುಚಿತ್ವವನ್ನು ಕಾಪಾಡಬೇಕು ಎಂದರು.

ಇನ್ನು ಮಕ್ಕಳಿಗೆ ಕುಡಿಯುವ ನೀರು ಮತ್ತು ಉತ್ತಮ ಗುಣಮಟ್ಟದ ಊಟವನ್ನು ನೀಡಿದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಹಾಗೂ ಶಿಕ್ಷಣದಲ್ಲಿ ಉತ್ತಮವಾಗಿ ಕಲಿಯುತ್ತಾರೆ. ಸೇವಾ ಮನೋಭಾವನೆ ಮನಸ್ಥಿತಿಯಿಂದ ಶಾಲಾ ಕಟ್ಟಡ ನಿರ್ಮಿಸಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಸಭೆ ನಡೆಸಿ ಇನ್ನು ಮುಂದೆ ಈ ರೀತಿ ಆಗದಂತೆ ಇಂಋವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಸೇರಿದಂತೆ ಶಾಲಾ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.
Related


You Might Also Like
KKRTC: ಲಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಸ್- ತಪ್ಪಿದ ಭಾರಿ ಅನಾಹುತ
ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಬೀದರ್ ಘಟಕ-1ರ ಡಿಎಂ ಬೀದರ್: ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ...
BMTC: ಕರ್ತವ್ಯ ನಿರತ ಚಾಲಕರು ಮೊಬೈಲ್ ಬಳಸಿದರೆ ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಿ- ತನಿಖಾ ಸಿಬ್ಬಂದಿಗೆ ಎಂಡಿ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗಳು ಮಾರ್ಗದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸಿದರೆ ಅವರ...
ಕೆಐಎಡಿಬಿ: ಭೂ ಸ್ವಾಧೀನ ಕುರಿತು ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ರೈತರ ನಿಯೋಗದ ಜತೆ ಚರ್ಚೆ- ರಾಮಲಿಂಗಾರೆಡ್ಡಿ
ಆನೇಕಲ್: ತಾಲೂಕಿನ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗದ ಜತೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಪ್ರಸ್ತುತ...
KKRTC ನೌಕರ ನಿಧನ ಪ್ರಕರಣ: ಸಹೋದರನಿಗೆ ಅನುಕಂಪದ ಉದ್ಯೋಗ ಪಡೆಯುವ ಹಕ್ಕಿದೆ- ಹೈಕೋರ್ಟ್ ತೀರ್ಪು
ಬೆಂಗಳೂರು: ಸರ್ಕಾರಿ ನೌಕರನ ಪತ್ನಿ, ಪತಿಗಿಂತ ಮೊದಲೇ ನಿಧನರಾಗಿ ಆಕೆಗೆ ಮಕ್ಕಳಿರಲಿಲ್ಲದಿದ್ದಾಗ ಹಾಗೂ ಆನಂತರದಲ್ಲಿ ಸರ್ಕಾರಿ ನೌಕರನೂ ನಿಧನರಾದಾಗ ಅಂತಹ ಪ್ರಕರಣಗಳಲ್ಲಿ ನೌಕರನ ಸಹೋದರರಿಗೆ ಅನುಕಂಪದ ಆಧಾರದಲ್ಲಿ...
NWKRTC: DA ಅರಿಯರ್ಸ್ ಬಗ್ಗೆ ಚರ್ಚಿಸಿ ಆದೇಶ ಮಾಡುವೆ-ಕೂಟದ ಪದಾಧಿಕಾರಿಗಳ ಜತೆ ವ್ಯವಸ್ಥಾಪಕ ನಿರ್ದೇಶಕರ ಚರ್ಚೆ
ಹುಬ್ಬಳ್ಳಿ: ಸಾರಿಗೆ ನೌಕರರ ಕೂಟದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಲಯ ಮಟ್ಟದ ಕುಂದು ಕೊರತೆ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರ ಜತೆ...
ಗಣಪನ ವಿಸರ್ಜನೆಗೆ 41 ಕಲ್ಯಾಣಿಗಳು, 489 ಸಂಚಾರಿ ವಾಹನಗಳು ಸಜ್ಜು
ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ ತಾತ್ಕಾಲಿಕ ಕಲ್ಯಾಣಿಗಳು ಹಾಗೂ...
ರಸ್ತೆ ಅಗೆದೆಡೆ ಪುನರ್ ಸ್ಥಾಪನೆ ಮಾಡುವ ವೇಳಾಪಟ್ಟಿ ಕೊಡಿ: ಆಡಳಿತಗಾರ ತುಷಾರ್ ಗಿರಿನಾಥ್
ಬೆಂಗಳೂರು: ನಗರದಲ್ಲಿ ಜಲಮಂಡಳಿ ವತಿಯಿಂದ ರಸ್ತೆ ಅಗೆದ ಭಾಗಗಳ ಪುನರ್ ಸ್ಥಾಪನೆ ಮಾಡುವ ವೇಳಾಪಟ್ಟಿ ನೀಡಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ತುಷಾರ್...
ಆ.28ರಂದು ಕನಿಷ್ಠ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ EPS ಪಿಂಚಣಿದಾರರ ಬೃಹತ್ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರ ಮುಸ್ಸಂಜೆಯ ಇಳಿವಯಸ್ಸಿನಲ್ಲಿರುವ ಪ್ರಬುದ್ಧ ಇಪಿಎಸ್-95 ನಿವೃತ್ತರು ಕಳೆದೊಂದು ದಶಕದಿಂದ ದೇಶಾದ್ಯಂತ ನಡೆಸಿದ ಹೋರಾಟಕ್ಕೆ ಯಾವುದೇ ಪ್ರತಿಫಲ ಕೊಡದೆ ಉದ್ಧಟತನದಿಂದ ನಡೆದುಕೊಳ್ಳುತ್ತಿರುವುದಕ್ಕೆ ಸಮಸ್ತ ನಿವೃತ್ತರು...
ನ್ಯೂಡೆಲ್ಲಿ: ವಿವಿಧ ಬೇಡಿಕೆಗಳ ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ ದೇಶದ ಅನ್ನದಾತರು
ನ್ಯೂಡೆಲ್ಲಿ: ದೇಶದ ರೈತರ ಬೃಹತ್ ರ್ಯಾಲಿ ಸೋಮವಾರ ದೆಹಲಿಯಲ್ಲಿ ನಡೆದು ಜಂತರ್ ಮಂತರ್ನಲ್ಲಿ ಸಮಾವೇಶಗೊಂಡಿತು. ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯತರ ಸಂಘಟನೆಯ ಕರೆಯ ಮೇರೆಗೆ ಸಹಸ್ರಾರು ರೈತರು...