NEWSಬೆಂಗಳೂರುಸಂಸ್ಕೃತಿ

ರಾಜಣ್ಣ ಮನೆಯಲ್ಲಿ ಗೌರಿಸುತನ ಸಂಭ್ರಮ – ರಾಜಧಾನಿಯಲ್ಲಿ 2,19,153 ಗಣಪನ ವಿಸರ್ಜನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕುಮಾರಸ್ವಾಮಿ ಬಡಾವಣೆಯ 2ನೇ ಹಂತ 8 ನೇ ಮುಖ್ಯರಸ್ತೆ  12ನೇ ಅಡ್ಡ ರಸ್ತೆಯಲ್ಲಿರುವ ರಾಜಣ್ಣ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗಣೇಶ ಮೂರ್ತಿಯನ್ನು ಕೂರಿಸಿ ಸಂಜೆ ವರೆಗೂ ವಿವಿಧ ನೈವೇದ್ಯಗಳನ್ನು ವಿಘ್ನನಿವಾರಕನಿಗೆ ಮಾಡಲಾಯಿತು.

ಬಳಿಕ ಬುಧವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಮಹಾ ಮಂಗಳಾರತಿ ಬೆಳಗುವ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಪೂಜೆಯಲ್ಲಿ ರಾಜಣ್ಣ, ಪ್ರೇಮಾ ರಾಜಣ್ಣ ಸೇರಿದಂತೆ ಅಕ್ಕಪಕ್ಕದ ಮನೆಯವರು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು.

2,19,153 ಗಣೇಶ ಮೂರ್ತಿಗಳ ವಿಸರ್ಜನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆ.27ರಂದು ಸಂಚಾರಿ/ ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 2.19 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ವಲಯವಾರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ: ಪೂರ್ವ ವಲಯ: 44,000. ಪಶ್ಚಿಮ ವಲಯ: 60,703. ದಕ್ಷಿಣ ವಲಯ: 79,039. ಬೊಮ್ಮನಹಳ್ಳಿ ವಲಯ: 7,028 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.

ಅದರಂತೆ ದಾಸರಹಳ್ಳಿ ವಲಯ: 1,104. ಮಹದೇವಪುರ ವಲಯ: 5,690. ಆರ್.ಆರ್.ನಗರ ವಲಯ: 13,097. ಯಲಹಂಕ ವಲಯ: 8,492 ಸೇರಿ ಒಟ್ಟು 2.19 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

Advertisement
ವಿಜಯಪಥ - vijayapatha
Megha
the authorMegha

Leave a Reply

error: Content is protected !!