KSRTC: ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರಿಗೆ ನೌಕರರ ಸಭೆ ಸ್ನ್ಯಾಕ್ಸ್, ಒಂದು ಕಪ್ಪು ಟೀ ಅಥವಾ ಕಾಫಿಗಷ್ಟೇ ಸೀಮಿತ


- ಇಂದು ಜಂಟಿ ಕ್ರಿಯಾ ಸಮಿತಿ- ಸಾರಿಗೆ ಅಧಿಕಾರಿಗಳ ನಡುವೆ ನಡೆದ ರಾಜೀ ಸಂಧಾನ ಸಭೆ ವಿಫಲ ಮತ್ತೆ ಸೆ.26ಕ್ಕೆ ಮುಂದೂಡಿಕೆ
ಬೆಂಗಳೂರು: ಕಾರ್ಮಿಕ ಇಲಾಖೆಯ ಆಯುಕ್ತರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆಯ ನಾಲ್ಕೂ ನಿಗಮಗಳ ಆಡಳಿತ ಮಂಡಳಿ ನಡುವೆ ಕರೆದಿದ್ದ ರಾಜೀ ಸಂಧಾನ ಸಭೆ ವಿಫಲಗೊಂಡಿದ್ದು ಮತ್ತೆ ಸೆ.26ಕ್ಕೆ ಮುಂದೂಡಲ್ಪಟ್ಟಿದೆ.
ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.5ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿತ್ತು.
ಈ ವೇಳೆ ಹೈಕೋರ್ಟ್‌ನಲ್ಲಿ ಆ.4ರಂದು ಪಿಐಎಲ್ ದಾಖಲಾಗಿದ್ದ ಹಿನ್ನೆಯಲ್ಲಿ ಅಂದು ಕೋರ್ಟ್ ಒಂದುದಿನ ತಮ್ಮ ಹೋರಾಟ ಮುಂದೂಡಿ ಎಂದು ಹೇಳಿತ್ತು. ಆದರೂ ಜಂಟಿ ಕ್ರಿಯಾ ಸಮಿತಿ ರಾಜ್ಯಾದ್ಯಂತ ಮುಷ್ಕರವನ್ನು ಆ.5ರಂದು ಮಾಡಿತ್ತು.
ಕೋರ್ಟ್ ಒಂದುದಿನ ಮುಷ್ಕರವನ್ನು ಮುಂದೂಡುವಂತೆ ನಿರ್ದೇಶನ ನೀಡಿದ್ದನ್ನು ಲೆಕ್ಕಿಸದೆ ಜಂಟಿ ಕ್ರಿಯಾ ಸಮಿತಿ ಆ.5ರಂದು ಮುಷ್ಕರ ಮಾಡಿದಕ್ಕೆ ಸಿಟ್ಟಾದ ನ್ಯಾಯಪೀಠ ಸಮಿತಿಯ ಮುಖಂಡರೆಲ್ಲರನ್ನು ಜೈಲಿಗೆ ಹಾಕುವ ಎಚ್ಚರಿಕೆ ನೀಡಿ ಹೋರಾಟ ವಾಪಸ್ ತೆಗೆದುಕೊಂಡಿರುವುದರ ಬಗ್ಗೆ 2 ದಿನದಲ್ಲಿ ತಿಳಸಬೇಕು ಎಂದು ಆ.7ಕ್ಕೆ ಪ್ರಕರಣವನ್ನು ಮುಂದೂಡಿತ್ತು.
ಆ ಬಳಿಕ ಆ.7ರಂದು ಕೋರ್ಟ್‌ಗೆ ಮುಷ್ಕರ ವಾಪಸ್ ತೆಗೆದುಕೊಂಡಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದರಿಂದ ಅಂದು ಪಿಐಎಲ್ ಅರ್ಜಿಯನ್ನು ವಿಲೆ ಮಾಡಿತ್ತು. ಈವೇಳೆ ರಾಜೀಸಂಧಾನ ಆಡಳಿತವರ್ಗ ಮತ್ತು ಸಂಘಟನೆಗಳ ನಡುವೆ ನಡೆಯಲಿ ಎಂದು ಹೇಳಿತ್ತು.
ಈ ನಡುವೆ ಆ.7ರಂದು ನಡೆದ ರಾಜೀ ಸಂಧಾನ ಸಭೆ ವಿಫಲಗೊಂಡು ಆ.28ಕ್ಕೆ ಅಂದರೆ ಇಂದಿಗೆ ಮುಂದೂಡಲಾಗಿತ್ತು. ಇಂದು ಈ ಸಂಬಂಧ ನಡೆದ ರಾಜೀ ಸಂಧಾನ ಸಭೆಗೆ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರು ಹಾಜರಾಗಿದ್ದರು. ಆಗ ಸಭೆಯಲ್ಲಿ ಯಾವುದೇ ಪ್ರಮುಖ ವಿಷಯಗಳು ನಿರ್ಧಾರವಾಗದೆ ಮತ್ತೆ ಸೆ.26ಕ್ಕೆ ಮುಂದೂಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಅಂದು KSRTC, BMTC, NWKRTC ಹಾಗೂ KKRTC ಆಡಳಿತವರ್ಗದ ವ್ಯವಸ್ಥಾಪಕರು 05.08.2025 ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿತ್ತು.
ಈ ನಡುವೆ ಮತ್ತೆ ಸಭೆ ಆ.7ಕ್ಕೆ ಮುಂದೂಡಿರುವುದರಿಂದ ಆ.5ರ ಮುಷ್ಕರದಲ್ಲಿ ಭಾಗಿಯಾಗುವ ಸಾರಿಗೆ ನೌಕರರ ವಿರುದ್ಧ 2021ರ ಏಪ್ರಿಲ್‌ನಲ್ಲಿ ತೆಗೆದುಕೊಂಡ ಕ್ರಮಗಳನ್ನೇ ಅಧಿಕಾರಿಗಳು ತೆಗೆದುಕೊಂಡು 30ಸಾವಿರಕ್ಕೂ ಹೆಚ್ಚು ಅಮಾಯಕ ನೌಕರರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.
ಅಂದು ಅಂದರೆ ಆಗಸ್ಟ್ 5ರಂದು ಮುಷ್ಕರದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಸಾರಿಗೆ ನಿಗಮಗಳ ನೀಡಿರುವ ಆಪಾದನೆ ಪತ್ರ ಹಾಗೂ ಶೋಕಾಸ್ ನೋಟಿಸ್‌ಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಅದಂತೆ ಆಪಾದನಾ ಪತ್ರ ಮತ್ತು ಶೋಕಾಸ್ ನೋಟಿಸ್‌ಗಳ ರದ್ದತಿ ಬಗ್ಗೆ ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದ್ದು ಆದಷ್ಟು ಬೇಗ ರದ್ದುತಿ ಬಗ್ಗೆ ಆದೇಶ ಹೊರಡಿಸುವಂತೆ ಹೇಳುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ. ಅಂದರೆ ಇಂದಿನ ಸಭೆಯಲ್ಲಿ ಯಾವುದೇ ದೃಢ ನಿರ್ಧಾರವಾಗಿಲ್ಲ.
ಇದರ ಜತೆಗೆ ಲೆಕ್ಕಕ್ಕುಂಟು ಆಟಕ್ಕಿಲ್ಲದ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಆ ಒನ್ ಮ್ಯಾನ್ ಕಮಿಟಿ ಜತೆ ಚರ್ಚಿಸಿ ಬಳಿಕ ಚರ್ಚಿಸಿದ ಆ ವರದಿಯನ್ನು ಅತಿ ಶೀಘ್ರದಲ್ಲೇ ಜಂಟಿ ಕ್ರಿಯಾ ಸಮಿತಿ ಒಪ್ಪಿಗೆ ಮೇರೆರೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸಿಎಂ ಜತೆ ಸಭೆಯ ನಡೆಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರಂತೆ.
ಹೀಗಾಗಿ ಅತಿ ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಇತ್ಯರ್ಥ ಪಡಿಸದಿದ್ದಲ್ಲಿ ಸೆ.26ರಂದು ಕಾರ್ಮಿಕ ಆಯುಕ್ತರು ಮತ್ತೆ ಸಭೆ ಕರೆದು ಅಂತಿಮವಾಗಿ ಚರ್ಚಿಸಲಾಗುವುದು ಎಂದು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ಸಂಬಂಧ ಕರೆಯುವ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯ ಸಭೆ ಸ್ನ್ಯಾಕ್ಸ್, ಒಂದು ಕಪ್ಪು ಟೀ ಅಥವಾ ಕಾಫಿಗಷ್ಟೇ ಸೀಮಿತ. ಇಂಥ ರಾಜೀ ಸಂಧಾನ ಸಭೆಗಳಿಂದ ನೌಕರರಿಗೆ ಕಳೆದ 40 ವರ್ಷಗಳಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮತ್ತೆ ಸೆ.26ಕ್ಕೆ ಮುಂದೂಡಿರುವ ಸಭೆ ಅಂದು ನಡೆದರೆ ಪ್ರಯೋಜನವಾಗುತ್ತದೆ ಎಂದು ಅಂದುಕೊಳ್ಳುವುದು ಮೂರ್ಖತನವಾಗುತ್ತದೆ ಅಷ್ಟೇ.
Related
