CRIMENEWSನಮ್ಮರಾಜ್ಯ

ಯಾವುದೇ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿಲ್ಲ ನಮ್ಮ ಚಾಲಕನ ಅತಿ ವೇಗ, ಅಜಾಗರೂಕತೆಯೇ ಕಾರಣ: ಯಾವುದೇ ತನಿಖೆ ನಡೆಸದೇ ತಪ್ಪೊಪ್ಪಿಕೊಂಡ KSRTC

ವಿಜಯಪಥ ಸಮಗ್ರ ಸುದ್ದಿ
  • ಅದೇ ನಿಮ್ಮ ಮೇಲೆ ಯಾವುದೇ ತನಿಖೆ ಮಾಡದೆ ಈ ರೀತಿ ಆರೋಪ ಹೊರಿಸಿದರೆ ಒಪ್ಪಿಕೊಳ್ಳುತ್ತೀರಾ ಎಂಡಿ ಅಕ್ರಮ್‌ ಪಾಷ ಅವರೆ?

ಬೆಂಗಳೂರು: ತಲಪಾಡಿಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂದು ಮಗು ಸೇರಿದಂತೆ 6 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಸ್‌ ಚಾಲಕನ ಅತಿವೇಗ, ಅಜಾಗರೂಕತೆಯೇ ಕಾರಣ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಎ ಸಂಸ್ಥೆಯೇ ಸ್ಪಷ್ಟನೆ ನೀಡುವ ಮೂಲಕ ತಪ್ಪೊಪ್ಪಿಕೊಂಡಿದೆ.

ಕೆಎಸ್‌ಆರ್‌ಟಿಸಿ ಹೇಳಿಕೆ ಏನು?: ನಮ್ಮ ಬಸ್‌ ಚಾಲಕ ನಿಜಲಿಂಗಪ್ಪ ಚಲವಾದಿಯ ಅವರ ಅಜಾಗರೂಕತೆಯಿಂದ ಅಪಘಾತವಾಗಿದೆ. ಕಾಸರಗೋಡಿನಿಂದ ಹೊರಟಿದ್ದ ನಮ್ಮ ಬಸ್‌ (ನಂ. KA19F3407), ತಲಪಾಡಿ ಟೋಲ್‌ಗಿಂತ 150 ಮೀಟರ್‌ ಹಿಂದೆಯೇ ಅಪಘಾತವಾಗಿದೆ.

ನಮ್ಮ ನಿಗಮದ ಚಾಲಕರು ವಾಹನವನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ಆಟೋವೊಂದು ಅಡ್ಡ ಬಂದಿದೆ. ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದಾರೆ. ಅಷ್ಟರಲ್ಲಿ ಬಸ್ ಆಟೋಗೆ ಹೊಡೆದಿದೆ.

ಆ ಸಂದರ್ಭದಲ್ಲಿ ಬಸ್‌ ಡಿಕ್ಕಿಯಾಗಿ ಹಠಾತ್ತನೆ ಸ್ಕಿಡ್ ಆಗಿ ತಿರುಗಿದೆ. ಈ ವೇಳೆ ಚಾಲಕರು ಚಾಲನಾ ಸೀಟಿನಿಂದ ಜಿಗಿದು ಎಸ್ಕೇಪ್‌ ಆಗಿದ್ದಾರೆ. ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಮುಂದಿನಿಂದ ಡಿಕ್ಕಿ ಹೊಡೆದ ಆಟೋದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರೂ ಮೃತಪಟ್ಟಿರುತ್ತಾರೆ.‌

ಇನ್ನು ಹಿಂಬದಿಯಿಂದ ಡಿಕ್ಕಿಯಾಗಿದ್ದ ಇಬ್ಬರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಬಸ್‌ನ್ನು 2025ರ ಆ.27 ರಂದು ಮಾರ್ಗಕ್ಕೆ ನಿಯೋಜಿಸಿದ್ದು, ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540 ಕಿಮೀ ಪ್ರಯಾಣ ಮಾಡಿದೆ. ಅಲ್ಲದೇ ಈ ವಾಹನವು ಆ.26 ರಂದು FC ನವೀಕರಣ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಅಪಘಾತವು ಸಂಭವಿಸಲು ಸಾಧ್ಯವಿಲ್ಲ.

ಈ ನಮ್ಮ ಚಾಲಕರು ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿಯೇ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಕೆಎಸ್‌ಆರ್‌ಟಿಸಿ ತಪ್ಪೊಪ್ಪಿಕೊಂಡಿದೆ.

ಇದರ ಜತೆಗೆ ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ. ಅಪಘಾತ ತಪ್ಪಿಸಲು‌ ನಿರಂತರ ತರಬೇತಿ, ತಿಳಿವಳಿಕೆ ಮತ್ತು ಜಾಗೃತ‌ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ‌ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ.

ಇನ್ನು ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ‌ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು‌ ಕಲ್ಪಿಸಲೆಂದು ನಿಗಮವು ಪ್ರಾರ್ಥಿಸುತ್ತದೆ. ತಪ್ಪಿತಸ್ಥ ಚಾಲಕನ ವಿರುದ್ಧ ವಿಚಾರಣೆ ನಡೆಸಿ ಕಠಿಣ ಕ್ರಮ‌‌ ಜರುಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ತಿಳಿಸಿದ್ದಾರೆ.

ಯಾವುದೇ ತಾಂತ್ರಿಕ ದೋಷದಿಂದ ಈ ಅಪಘಾತವು ಸಂಭವಿಸಲು ಸಾಧ್ಯವಿಲ್ಲ ಎಂದು ಯಾವುದೇ ತಪಾಸಣೆ ಮಾಡದೆಯೇ ಅಧಿಕಾರಿಗಳು ಏಕಾಏಕಿ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ. ಅಂದರೆ ಇವರ ಸಂಸ್ಥೆಯಲ್ಲಿ ಕಳೆದ 14 ವರ್ಷದಿಂದ ಚಾಲಕರಾಗಿ ಡ್ಯೂಟಿ ಮಾಡುತ್ತಿರುವ ತಮ್ಮದೇ ನೌಕರನ ಮೇಲೆ ಅಪಘಾತ ಸಂಭವಿಸಿದೆ ಎಂಬ ವಿಷಯ ತಿಳಿದ ತಕ್ಷಣವೆ ಯಾವುದೇ ತರಹದ ಪರಿಶೀಲನೆ ಮಾಡದೆಯೇ ಒಬ್ಬ ಎಂಡಿ ಆದವರು ಈರೀತಿ ಹೇಳಿಕೆ ಬಿಡುಗಡೆ ಮಾಡುವುದು ಎಷ್ಟು ಸರಿ?

ಪ್ರತಿಯೊಂದಕ್ಕೂ ಚಾಲನಾ ಸಿಬ್ಬಂದಿಗಳನ್ನೇ ನೇರವಾಗಿ ಹೊಣೆ ಮಾಡಿಬಿಟ್ಟರೆ ತಾವು ಸೇಫ್‌ ಅಂದುಕೊಳ್ಳುವ ಇಂಥ ಅಧಿಕಾರಿಗಳು ಬಸ್‌ ಯಾವ ಸ್ಥಿತಿಯಲ್ಲಿತ್ತು, ಬ್ರೇಕ್‌ ಐಾವ ಕಂಡಿಷನ್‌ನಲ್ಲಿತ್ತು? ಅಪಘಾತಕ್ಕೆ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳುವ ತಾಳ್ಮೆಯೂ ಈ ಎಂಡಿಗೆ ಇಲ್ಲ ಎಂದರೆ ನೌಕರರ ಗತಿಯೇನಾಗಬೇಡ. ಈ ರೀತಿ ಹೇಳಿಕೆ ಕೊಡುವ ಮೂಲಕ ತಪ್ಪೊಪ್ಪಿಕೊಳ್ಳುವ ಬದಲಿಗೆ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಹೇಳಿಕೆ ಬಿಡುಗಡೆ ಮಾಡುವುದು ಒಳ್ಳೆಯದು.

ಕಾರಣ ಚಾಲಕರು ಕೂಡ ನಿಮ್ಮಂತೆಯೇ ಡ್ಯೂಟಿ ಮಾಡುವುದಕ್ಕೆ ಬಂದಿದ್ದಾರೆ. ಅವರು ರಸ್ತೆಯಲ್ಲಿ ಸಿಕ್ಕಸಿಕ್ಕವರ ಮೇಲೆ ಬಸ್‌ ಚಾಲಾಯಿಸಿಕೊಂಡು ಹೋಗುವುದಕ್ಕೆ ಬಂದಿರುವವರಲ್ಲ. ಪ್ರಯಾಣಿಕರಿಗೆ ಒಳ್ಳೆಯ ಸೇವೆ ಕೊಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡೇ ಬಂದಿರುತ್ತಾರೆ. ಆದರೆ ಡಿಪೋಗಳಲ್ಲಿ ಕೊಡುವ ಟಾರ್ಚರ್‌ಅನ್ನು ಸಾಮಾನ್ಯರು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ಅಂಥ ಒತ್ತಡದಲ್ಲೂ ತಾಳ್ಮೆ ಕಳೆದುಕೊಳ್ಳದೆ ಉತ್ತಮ ಸೇವೆ ಕೊಡುತ್ತಿದ್ದಾರೆ ಎಂಬುವುದಕ್ಕೆ ಸಂಸ್ಥೆಗೆ ಬಂದಿರುವ ನೂರಾರು ಪ್ರಶಸ್ತಿಗಳಿಗೆ ನಿದರ್ಶನ.

ಇಂಥ ಸಂಸ್ಥೆಯ ಸಾರಥಿಗಳ ಮೇಲೆ ಒಬ್ಬ ಜವಾಬ್ದಾರಿಯುತ ಎಂಡಿ ಹಾಗೂ ಮೇಲಧಿಕಾರಿಗಳಾದ ತಾವೇ ಯಾವುದೇ ಪರಿಶೀಲನೆ ಮಾಡದೆ ಏಕಾಏಕಿ ಹೇಳಿಕೆ ನೀಡುವುದು ನಿಮ್ಮ ಹುದ್ದೆಗೆ ಗೌರವಕೊಡುತ್ತದೆಯೇ? ತಾವು ಯಾವ ಆಧಾರದ ಮೇಲೆ ತಾಂತ್ರಿಕ ದೋಷ ಸಂಭವಿಸಿಲ್ಲ ಎಂದು ಹೇಳುತ್ತೀರಿ. ತಮ್ಮದೇ ಸಂಸ್ಥೆಯ ಚಾಲಕನ ಮೇಲೆ ಎಷ್ಟು ಸರಳವಾಗಿ ಗೂಬೆ ಕೂರಿಸುತ್ತೀರಿ ನೋಡಿ. ಅದೇ ನಿಮ್ಮ ಮೇಲೆ ಯಾವುದೇ ತನಿಖೆ ಮಾಡದೆ ಈ ರೀತಿ ಆರೋಪ ಹೊರಿಸಿದರೆ ಒಪ್ಪಿಕೊಳ್ಳುತ್ತೀರಾ ಎಂಡಿ ಅಕ್ರಮ್‌ ಪಾಷ ಅವರೆ?

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ