ಬೆಂಗಳೂರು: ಮುಂಬೈನಿಂದ ಬಂದ 504 ಮಂದಿ ಕ್ವಾರಂಟೈನ್‌ಗೆ ಒಳಪಡುವುದಕ್ಕೆ ನಿರಾಕರಿಸಿ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆಯಿತು.
ಮುಂಬೈನಿಂದ ಬಂದವರನ್ನು ರೈಲು ನಿಲ್ದಾಣದಿಂದ ಕ್ವಾರಂಟೈನ್ ಮಾಡಲು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಲು ಆರೋಗ್ಯ ಅಧಿಕಾರಿಗಳು ಸಿದ್ಧರಾಗಿ ಬಿಎಂಟಿಸಿ ಬಸ್ ಹತ್ತುವಂತೆ ಹೇಳಿದ್ದಾರೆ. ಅದನ್ನು ನಿರಾಕರಿಸಿದ ಪ್ರಯಾಣಿಕರು ನೀವು ದುಪ್ಪಟ್ಟು ಹಣ ವಸೂಲಿ ಮಾಡುತ್ತೀರಿ ಹೀಗಾಗಿ ನಾವು ಕ್ವಾರಂಟೈನ್ ಸ್ಥಳಕ್ಕೆ ಹೋಗುವುದಿಲ್ಲ ಎಂದು ಕೂಗಾಡಿದರು.
ನಂತರ ಪೊಲೀಸರು ಬಂದು ಹೇಳಿದರೂ ಒಪ್ಪಲ್ಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಏರುಧ್ವನಿಯಲ್ಲಿ ನೀವು ಮುಂಬೈನಿಂದ ಬರುವಾಗ ಎಲ್ಲವನ್ನು ಒಪ್ಪಿ ಬಂದಿರುತ್ತೀರಿ ಇಲ್ಲಿಗೆ ಬಂದಮೇಲೆ ಏಕೆ ಈ ರೀತಿ ನಡೆ ಅನುಸರಿಸುತ್ತೀರಿ ಎಂದು ಗದರಿಸಿದ್ದಕ್ಕೆ ಪ್ರಯಾಣಿಕರು ಕೂಲಾಗಿ ಬಸ್ ಹತ್ತಿ ಹೋದರು.
ಈಗಾಗಲೇ ಮುಂಬೈನಿಂದ ಬಂದ ಬಹುತೇಕರಿಂದ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ ಈ ವೇಳೆ ಬಂದವರನ್ನು ಬೇಕಾಬಿಟ್ಟಿ ಅವರವರ ಮನೆಗೆ ಕಳುಹಿಸಿದ್ದರೆ ಇಡೀ ರಾಜ್ಯವೇ ಕೊರೊನಾ ಹಬ್‌ಆಗಿ ಮಾರ್ಪಡಲಿದೆ. ಆದ್ದರಿಂದ ಎಲ್ಲರೂ ಸಹಕರಿಸಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕಿದೆ.